Audio by Vidwan Sumukh Moudgalya
ಶ್ರೀ ಗೋಪಾಲದಾಸಾರ್ಯ ವಿರಚಿತ ಶ್ರೀ ವಾದೀಂದ್ರತೀರ್ಥರ ಸ್ತೋತ್ರ
ರಾಗ : ಹಂಸಧ್ವನಿ ಆದಿತಾಳ
ಎಣಿಯಾರೊ ನಿಮಗೆ ಕುಂಭಿಣಿಯ ಮಧ್ಯದಲಿನ್ನು
ಮನಸಿಜ ಆರಂಭಿಸಿ ಮನು ಮುನಿಕುಲ ಚಿಂತಾ-
ಮಣಿಯೆ ವಾದೀಂದ್ರ ಮರುತಮತ
ವನಧಿಚಂದ್ರ ಕುಮತ ಗಜಗಣಕೆ ಮೃಗೇಂದ್ರ ॥ಪ॥
ಸ್ನಾನಾನುಷ್ಠಾನ ಕಾಲದಲಿ ಶ್ರೀಶಾರಂಗ-
ಪಾಣಿಯ ನ್ಯಾಸ ಧ್ಯಾನ ಮಾಡುವ ಧೀರ
ದಾನಾದಿ ಕರ್ಮ ಶಮದಮ ನಾನಾ
ಗುಣಾರ್ಣ ಭಜಿಸುವಂಥ ದೀನ ಪ್ರಸನ್ನ॥೧॥
ಹರಿಯೆ ಸರ್ವೋತ್ತಮ ಮರುತದೇವನೆಗುರು
ಯರಡು ಮೂರು ಭೇದ ಸ್ಥಿರವೆಂದು ಸ್ಥಾಪಿಸಿ
ಧರೆಯೊಳಗೆ ಮೆರೆದೆ ವಾದಿಗಳುಕ್ತಿಧುರದಿಂದ
ತರಿದೆ ನಂಬಿದವರ ಕರುಣದಿ ಪೊರೆದೆ॥೨॥
ವೇದಾರ್ಥಗಳನೆಲ್ಲ ವ್ಯಾಖ್ಯಾನ ಮುಖದಿಂದ
ಸಾಧಿಸಿ ಧರೆಗೆಲ್ಲ ಬೋಧಿಸಿ ಅವರಘ
ಭೇದವ ತರಿದೆ ಮನೋಭೀಷ್ಟ ಮೋ-
ದದಿಗರೆದೆ ರಾಮನಾಮ ಸ್ವಾದ ಸವಿದೆ॥೩॥
ವರಹಾ ಸರಿತೆ ತೀರ ಮಂತ್ರಾಲಯದಲ್ಲಿ
ಗುರುರಾಯರಾಜ್ಞೆಯಿಂದ ವರ ಸನ್ನಿಧಿಯಲ್ಲಿ
ಸ್ಥಿರವಾಗಿ ನಿಂದೆ ಸುಮಹಿಮೆಯಲಿ
ಮೆರೆವೆ ನೀ ಮುಂದೆ ದಯದಲೆನ್ನ ಪೊರೆಯಯ್ಯ ತಂದೆ॥೪॥
ಮರುತಾಂತರ್ಗತ ಗೋಪಾಲವಿಟ್ಠಲನ್ನ
ಹರುಷದಿ ಪೂಜಿಪ ಗುರು ಉಪೇಂದ್ರ
ತೀರ್ಥರ ಕರಕಂಜ ಜಾತ ಭಕ್ತರ ಕಾಮವರ
ಪಾರಿಜಾತ ಕಾಮಧೇನು ಕರುಣಿಸೊ ದಾತಾ॥೫॥
***
No comments:
Post a Comment