Audio by Vidwan Sumukh Moudgalya
ಶ್ರೀ ಗೋಪಾಲದಾಸರು ಶ್ರೀ ಬ್ರಹ್ಮಣ್ಯತೀರ್ಥರನ್ನು ಕುರಿತು ಮಾಡಿರುವಂತಹ ಕೃತಿ
ರಾಗ : ಕುಮುದಕ್ರಿಯ ಆದಿತಾಳ
ಬ್ರಹ್ಮಣ್ಯತೀರ್ಥರ ಚರಣಾಬ್ಜ
ಯುಗ್ಮವಾ ಸಂಭ್ರಮದಲಿ ಸೇವಿಪಾ ॥ಪ॥
ಅಂಬುಜ ಬಂಧು ಸನ್ನಿಭಸಾಧು ಎನುತ ಶ್ರೀ
ಕುಂಭಿಣಿ ಮುನಿವರ್ಯರಾ ಆರ್ಯರಾ ॥ಅ.ಪ॥
ಅರ್ಥಿ ಕಲ್ಪ ದ್ರುಮ ಅನುಪಮ ಗುಣಭೌಮ
ಸಪ್ತ ಮಂಗಳ ಸನ್ನಿಭಾ ನಿತ್ಯಾ ಪುರು-
ಷೋತ್ತಮ ತೀರ್ಥರೇಂದು ಮತಿಸೌಮ್ಯ
ಮತ್ತ ಪರ್ವತ ಕುಲಿಶಾ ಧೀರೇಶಾ ॥೧॥
ತಿದ್ದಿದ್ದ ಊರ್ಧ್ವ ಪುಂಡ್ರ ಶ್ರೀ
ಮುದ್ರಿಗಳಿಂದ ಸಂಶುದ್ಧಾ ಮಂಗಳಗಾತ್ರರಾ
ಹೃದ್ರೋಗಳಿದು ಸಂಸದ್ವಿದ್ಯಗಳನಿತ್ತು
ಉದ್ಧಾರ ಮಾಡಲೆಂದು ನಾ ಬಂದೂ ॥೨॥
ಶಿಷ್ಯರುಗಳು ತಂದ ಭಿಕ್ಷಾನ್ನಗಳನಂದು
ಪ್ರೋಕ್ಷಿಸಿ ಮಂತ್ರದಿಂದಾ ತಕ್ಷಣ ಕ-
ಲ್ಪಿಶಿದಂತೆಗೈಯ್ಯುವ ಧೀರಾ ದೇವಾ
ರಕ್ಷಿಸೆಂದೆರಗುವೆನೂ ಬೇಡುವೆನೂ ॥೩॥
ಕಾಂತೆಯೊಳು ತನ್ನ ಕಾಂತ ಸ್ವರ್ಗವನೈಯ್ಯೆ
ಚಿಂತಿಸಿ ಶೋಕದಿಂದ
ಕಾಂತೆವಂದಿಸಲು ಸುಮಂಗಲ್ಯವರವಿತ್ತು
ಕಾಂತನ ರಕ್ಷಿಸಿದ ಕೋವಿದರಾದಾ ॥೪॥
ಕುಂದೇಂದು ಸರ್ವ ಮುನಿ ವೃಂದದೊಡನೆ ಮಹಾ
ವೃಂದಾವನದಿ ಶೋಭಿಪಾ
ತಂದೇ ನೀ ಸಲಹೆಮ್ಮ ಗೋಪಾಲವಿಟ್ಠಲ
ಸನ್ನುತಿವರ ಪಾತ್ರರಾ ಪೂತಾತ್ಮರ ॥೫॥
*****
No comments:
Post a Comment