Tuesday 1 June 2021

ವಾದೀಂದ್ರ ಗುರುರಾಯ ವರದಾಯ ನಿಮ್ಮ ankita abhinava janardhana vadeendra teertha stutih

 ರಾಗ : ಸಾವೇರಿ  ತಾಳ : ಆದಿ 

ವಾದೀಂದ್ರ ಗುರುರಾಯ -
ವರದಾಯ ನಿಮ್ಮ ।
ಪಾದಕ್ಕಭಿನಮಿಪೆ 
ಪಾಲಿಸೈಯ್ಯ  ।। ಪಲ್ಲವಿ ।।

ಈ ಧರೆಯೊಳಗುಳ್ಳ -
ಸಾಧು ಸಜ್ಜನರ । ಬಿಡ ।
ದಾದರದಲಿ ಕಾವ -
ದಯಾಪೂರ್ಣ ।
ಮಧ್ವ ಮತಾಬ್ಧಿ -
ಚಂದ್ರ ಉಪೇಂದ್ರ ಕರಜ ।
ಸುಗುಣಾಬ್ಧಿ ಕವೀಂದ್ರ -
ವಸುಧೇಂದ್ರಾ  ।। ಚರಣ ।।

ಮೂಲರಾಮನ ದ್ವಂದ್ವ-
ಪದಾನಂದದಿಂದ । ಬ ।
ಹಳ ಪರಿಪರಿಯಿಂದ -
ಅರ್ಚಿಪಾನಂದ ।
ಶೀಲ ಸ್ವಭಾವನೆ -
ಬಾಲಕ ನಾನಯ್ಯಾ ।
ಏಳಲ ಮಾಡದೆ ಪಾಲಿಸೊ 
ಪ್ರಭುವೇ ।। ಚರಣ ।।

ಕೃಷ್ಣದ್ವೈಪಾನಾರ್ಯ 
ಮಾಡಿದ ದಿವ್ಯ ತೃಷಿಯ ।
ಶಿಷ್ಟರ್ಗೆ ಪೇಳಿದ ಸ್ವರ್ಣಕಾಯಾ ।
ಸೃಷ್ಟೀಶ ಅಭಿನವ ಜನಾರ್ದನ ।
ವಿಠ್ಠಲನ ಸೇವಕ ದಿಟ್ಟ 
ಮುನಿಪನೆ ।। ಚರಣ ।।
*****

No comments:

Post a Comment