Monday 29 March 2021

ನೀನೇ ಗತಿ ಮುಕುತೆನೆಗೆ ಅನಂತ ankita shree krishna NEENE GATI MUKUTENEGE ANANTA

 

Audio by Vidwan Sumukh Moudgalya


ಶ್ರೀ ವ್ಯಾಸರಾಜರ ಕೃತಿ 


 ರಾಗ : ಧರ್ಮವತಿ    ಖಂಡಛಾಪು 


ನೀನೆ ಗತಿ ಮುಕುತೆನೆಗೆ ಅನಂತ ಜನುಮಗಳಲಿ ॥ಪ॥


ಆನೇನರಿಯೆ ಗರುಡಗಮನ ಸಿರಿಕೃಷ್ಣ ರಾಯಾ ॥ಅ.ಪ॥


ಅನ್ಯವಾರ್ತೆ ಅನ್ಯಸಂಗ ಅನ್ಯಜನರಾರಾಧನೆ

ಅನ್ಯಸತಿ ಅನ್ಯಕರ್ಮ ಮೊದಲು ಸಕಲ

ತನ್ನು ಮನ್ನ(=ತನುಮನ) ವಾಕ್ಯಗಳಿಂದ ಜರಿದೆ ನಿನ್ನವರೊಳು

ಎನ್ನ ಕೂಡಿಸೊ ನಿನ್ನ ಚರಣ ಭಕುತಿಯಲಿ ಶ್ರೀಶ ॥೧॥


ಅಂದು ವೇದೋದ್ಭವಳ ಮೊರೆಯನು ಕೇಳಿ ಕಾಯ್ದಂತೆ

ಮಂದ ಗಜೇಂದ್ರನಿಗೊಲಿದು ರಕ್ಷಿಸಿದ ಪರಿಯಂತೆ

ತಂದೆತಾಯಿ ಬಂಧುಬಳಗ ಎಂದೆಂದು ನೀನೇ ದಯಾ-

ಸಿಂಧು ನಿನ್ನ ದಾಸರ ದಾಸನೆಂದೆನಿಸೆನ್ನ  ॥೨॥


ರನ್ನನಖಾಂಗುಳಿ ಪಾದ ಜಂಘೆ ಜಾನೂರುಕಟಿ

ಘನ್ನ ಬಾಹು ಉದರವಕ್ಷ ಭುಜ ಕುಂತಳದಿ

ಚನ್ನ ಕಿರೀಟ ಸರ್ವಾಲಂಕಾರದಿಂ ಶೋಭಿಸುವ

ನಿನ್ನ ಮೂರ್ತಿಯನ್ನೆ ತೋರೊ ಭಕ್ತವತ್ಸಲ ಸಿರಿಕೃಷ್ಣ ॥೩॥

******


No comments:

Post a Comment