Audio by Vidwan Sumukh Moudgalya
ಶ್ರೀ ವಾದಿರಾಜರು ತ್ರಿವಿಕ್ರಮದೇವರನ್ನು ಕುರಿತು ಮಾಡಿರುವ ರಚನೆ
ರಾಗ : ಮುಖಾರಿ ಆದಿತಾಳ & ತಿಶ್ರನಡೆ
ತ್ರಿವಿಕ್ರಮರಾಯನ ನಂಬಿರೊ
ಭವನದೊಳು ಭಾಗ್ಯವ ತುಂಬಿರೊ ॥ಪ॥
ಸವೆಯದ ಸುಖವ ಮೇಲುಂಬಿರೊ ವಾ-
ಸವನ ಮನ್ನಣೆಯ ಕೈಕೊಂಬಿರೊ ॥ಅ.ಪ॥
ವಾದಿರಾಜಗೊಲಿದುಬಂದನ ಚೆಲ್ವ
ಸೋದೆಯ ಪುರದಲ್ಲಿ ನಿಂದನ
ಸಾಧಿಸಿ ಖಳರನು ಕೊಂದನ ತನ್ನ
ಸೇರ್ದಜನರ ಬಾಳ್ ಬಾಳೆಂದನ ॥೧॥
ಕಾಲಿಂದ ಬೊಮ್ಮಾಂಡ ಒಡೆದನ ಪುಣ್ಯ-
ಶೀಲೆ ಗಂಗೆಯನು ಪಡೆದನ
ಪಾಲಸಾಗರವನ್ನು ಕಡೆದನ ಶ್ರುತಿ-
ಜಾಲ ಗದೆಯಿಂದ ಹೊಡೆದನ ॥೨॥
ಇಂದಿರಾದೇವಿಯ ಗಂಡನ ಸುರ
ಸಂದೋಹದೊಳು ಪ್ರಚಂಡನ
ಇಂದ್ರಾದಿ ಗಿರಿವಜ್ರದಂಡನ ಮುನಿ
ವೃಂದಾರವಿಂದಮಾರ್ತಾಂಡನ ॥೩॥
ಇಂದುವರ್ಣದ ಕಂಜನೇತ್ರನ ಕಂಬು
ಕಂಧರ ಮಂಜುಳಗಾತ್ರನ
ವೃಂದಾರಕರಿಗೆ ನೇತ್ರನ ಜಗ
ಕಿಂದಿರೇ ಸುಪವಿತ್ರನ ॥೪॥
ವನಿತೆಯರರ್ಥಿಯ ಸಲಿಸದೆ ಮನೆ
ಮನೆವಾರ್ತೆಯ ಹಂಬಲಿಸದೆ
ದಿನ ದಿನ ಪಾಪವ ಘಳಿಸದೆ ಅಂತ-
ಕನ ಭಟರಿಂದೆಮ್ಮ ಕೊಲಿಸದೆ ॥೫॥
ಹರಿಭಕುತರೊಳೆಂದೆಂದಾಡಿರೊ ನರ-
ಹರಿಯ ನಾಮಗಳನು ಪಾಡಿರೊ
ಹರಿಯರ್ಚನೆಯನು ಮಾಡಿರೊ ಶ್ರೀ-
ಹರಿಯ ಮೂರುತಿಯ ನೋಡಿರೊ ॥೬॥
ದೂರಕ್ಕೆ ದೂರನು ದಾವನ ಹ-
ತ್ತಿರ ಬಂದ ಭಕುತರ ಕಾವನ
ಆರಾಧಿಸಲು ಫಲವೀವನ ಹ-
ತ್ತಿರೆ ಸೇರುವ ಭಾವ ದಾವನ ॥೭॥
ಕಾಮದೇವನ ಪೆತ್ತ ಕರುಣಿಯ ಸುತ್ತ
ಸೇವಿಪರಘತಮ ತರಣಿಯ
ಜೀವನ್ಮುಕ್ತಿಯ ಸರಣಿ ಯಡರ
ಭವಕಂಧಂತಮ ತರಣಿಯ ॥೮॥
ಜಯಿಸಿ ಕಂಸನೆಂಬ ಮಾವನ ಅ-
ಭಯವಿತ್ತು ಭಕುತ ಸಂಜೀವನ
ಹಯವದನನಾಗಿ ಪಾವನ ಶ್ರು-
ತಿಯ ತಂದ ದೇವರದೇವನ ॥೯॥
********
No comments:
Post a Comment