Friday 17 December 2021

ನಂಜುಂಡ ನಮ್ಮ ಗುರು ನಂಜುಂಡ ankita badarayana vittala NANJUNDA NAMMA GURU NANJUNDA



ನಂಜುಂಡ ನಮ್ಮ ಗುರು l ನಂಜುಂಡ ll ಪ ll


ನಂಜುಂಡ ನತಜನಪಾಲ l  ಭವ 

ಭಂಜನ ಕರುಣಾಲವಾಲ ll ಆಹಾ ll

ಆಂಜನೇಯನ ಪ್ರಿಯ ಅಂಜಲಿ ಮುಗಿವೆನು l

ಕಂಜನಾಭನ ಪಾದಕಂಜವ ತೋರಿಸೊ ll ಅ ಪ ll


ರಕ್ಕಸಾಂತಕ ದೇವ ಬಿರುದ l ಕರಿ-

ತೊಕ್ಕನುಟ್ಟ ಚಂದ್ರಶಿರದ l ಮುನಿ

ಮಾರ್ಕಂಡೇಯಗೆ ಆಯುವರದ l ದೇ-

ವರ್ಕಳಿಗಭೀಷ್ಟೆಯ ಗರೆದ ll ಆಹಾ ll

ಪೊಕ್ಕಲ್ಹೂವಿನ ವಿಷ್ಣುಭಕ್ತಿಯ ಎನಗಿತ್ತು 

ಚೊಕ್ಕಚಿತ್ತನ ಮಾಡೊ ಮುಕ್ಕಣ್ಣ ಮಹದೇವ ll 1 ll


ಇಂದ್ರಾದಿ ಸುರಮುನಿವಂದ್ಯ l ಪಾದ

ಕೆಂದಾವರೆಯ ಗುಣಸಾಂದ್ರ l ಅಜ-

ನಂದನ ಸತತ ಆನಂದ l ಗುರು

ಗಂಧವಾಹನನ ಕಂದ ll ಆಹಾ ll

ವಂದಿಸುವೆನು ಮನಮಂದಿರದಲಿ l ರಾಮ-

ಚಂದ್ರನ ನೋಡುವಾನಂದ ಭಾಗ್ಯವನೀವ ll 2 ll


ವಿಷಕಂಧರನೆ ವೀತಭಯನೆ l ವರ

ವೃಷಕೇತು ವೈಷ್ಣವೋತ್ತಮನೆ l ನಮ್ಮ

ಶಶಿಮುಖಿ ಗೌರಿನಾಯಕನೆ l ನಿನಗೆ ನ

ಮಿಸುವೆ ಕರುಣಾಳು ಶಿವನೆ ll ಆಹಾ ll

ಭಸಿತ ಭೂಷಿತವಾದ ಶಶಿಸನ್ನಿಭಾಂಗನೆ

ನಸುನಗೆಯ ಮುಖವ ತೋರಿಸೊ ಶಂಕರನೆ ll 3 ll


ಮನಸಿನ ಚಾಪಲ್ಯ ಬಿಡಿಸೊ l ಮಧ್ವ

ಮುನಿ ಕೃಪಾ ಕವಚವ ತೊಡಿಸೊ l ಕ್ಷಣ

ಕ್ಷಣದಲಿ ಹರಿನಾಮ ನುಡಿಸೊ l ದಿವ್ಯ 

ಘನ ವೈರಾಗ್ಯ ಭಾಗ್ಯ ಉಣಿಸೊ ll ಆಹಾ ll

ಕನಸು ಮನಸಿಲಿ ಹರಿರೂಪ ಗುಣಕ್ರಿಯೆ l

ನೆನಹಿತ್ತು ಸಂತೈಸು ಅಗಜೆಗಾನಂದವೀವ ll 4 ll


ಮುನಿವೇಷವನು ತಾಳಿ ನೃಪಗೆ l ಶ್ರೀ ವಿಷ್ಣು-

ವಿನ ಕಥೆ ಅರುಹಿದೆ ಸದ್ಗತಿಗೆ l. ಮಾರ್ಗ-

ವನೆ ಮಾಡಿ ಸಲಹಿದೆ ಕೊನೆಗೆ l ಕ-

ರುಣಿಗಳೊಳು ಎಣೆಯಾರೊ ನಿನಗೆ ll ಆಹಾ ll

ಗುಣನಿಧಿ ಬಾದರಾಯಣವಿಠಲನ ಧ್ಯಾನ

ನೆನಹಿತ್ತು ಸಂತೈಸು ಗಣಪ ಷಣ್ಮುಖರೈಯ್ಯ ll 5 ll

*******

 ರಾಗ ಶಂಕರಾಭರಣ : ತಾಳ ಅಟತಾಳ (raga, taala may differ in audio)


ನಂಜುಂಡಾ ನಮ್ಮ ಗುರು | ನಂಜುಂಡ ||ಪ||

ನಂಜುಂಡಾ ನತಜನಪಾಲ | ಭವ। 
ಭಂಜನ ಕರುಣಾಲವಾಲ ಆಹಾ || 
ಆಂಜನೇಯನ ಪ್ರಿಯಾ ಅಂಜಲಿಮುಗಿವೆನು | ಕಂಜನಾಭನ ಪಾದ ಕಂಜವಿಸೋ ||ಅ.ಪ||
                     ನಂಜುಂಡಾ..


ರಕ್ಕಸಾಂತಕ ದೇವ ಬಿರುದಾ ಕರಿ|| 
ತೊಕ್ಕನುಟ್ಟಿ ಚಂದ್ರಶಿರದಾ ||ಮುನಿ।। ಮಾರ್ಕಂಡೇಯರಿಗೆ ಆಯುವರದಾ | ದೇ- ವರ್ಕಳೀಗಭೀಷ್ಟೆಯಗರೆದಾ||ಆಹಾ || 
ಹೊಕ್ಕಳೂವಿನ ವಿಷ್ಣುಭಕ್ತಿಯ ಎನಗಿತ್ತು || 
ಚೊಕ್ಕಚಿತ್ತನ ಮಾಡೋ ಮುಕ್ಕಣ್ಣ ಮಹದೇವ||೧||                             
              ನಂಜುಂಡಾ..

ಇಂದ್ರಾದಿ ಸುರಮುನಿ ವಂದ್ಯ ಪಾದ | 
ಕೆಂದಾವರೆಯ ಗುಣಸಾಂದ್ರ | ಅಜ- | 
ನಂದನ ಸತತ ಆನಂದ | ಗುರು 
ಗಂಧವಾಹನನ ಕಂದಾ | ಆಹಾ | 
ವಂದಿಸುವೆನು ಮನ ಮಂದಿರದಲ್ಲಿ ರಾಮ 
ಚಂದ್ರನ ನೋಡುವ ಆನಂದ ಭಾಗ್ಯವನೀಯೋ |೨|                                  
               ನಂಜುಂಡಾ..

ವಿಷಕಂಧರನೆ ವೀತಭಯನೇ | ವರ | 
ವೃಷಕೇತು ವೈಷ್ಣವೋತ್ತಮನೆ | ನಮ್ಮ| 
ಶಶಿಮುಖ ಗೌರಿನಾಯಕನೆ | ನಿನಗೆ | 
ನಮಿಸುವೆ ಕರುಣಾಳು ಶಿವನೆ | ಆಹಾ | ಭಸಿತಭೂಷಿತವಾದ ಶಶಿಸಭಾಂಗನೆ | 
ನಸುನಗೆಯ ಮುಖವ ತೋರಿಸೊ ಶಂಕರನೆ | ೩ |                                     
              ನಂಜುಂಡಾ..

ಮನಸಿನ ಚಾಪಲ್ಯ ಬಿಡಿಸೋ | ಮಧ್ವ  
ಮುನಿ ಕೃಪಾ ಕವಚವ ತೊಡಿಸೊ| ಕ್ಷಣ। 
ಕ್ಷಣದಲಿ ಹರಿನಾಮ ನುಡಿಸೋ | ದಿವ್ಯ | 
ಘನ ವೈರಾಗ್ಯಭಾಗ್ಯ ಉಣಿಸೋ | ಆಹಾ | 
ಕನಸು ಮನಸಿನಲಿ ಹರಿ ರೂಪ ಗುಣ ಕ್ರಿಯೆ | 
ನೆನವಿತ್ತು ಸಂತೈಸು ಅಗಜೆಗಾನಂದವೀವನೆ | ೪ |                                    
             ನಂಜುಂಡಾ.....

ಮುನಿವೇಷವನು ತಾಳಿ ನೃಪಗೆ | ಶ್ರೀ ವಿಷ್ಣು
ವಿನ ಕಥೆ ಅರುಹಿದ ಸದ್ಗತಿಗೆ | ಮಾರ್ಗ
ವನೆಮಾಡಿ ಸಲಹಿದೆ ಕೊನೆಗೆ | ಕ। 
ರುಣಿಗಳೋಳು ಎಣೆಯಾರೋ ನಿನಗೆ ||ಆಹಾ||
ಗುಣನಿಧಿ ಬಾದರಾಯಣ ವಿಠಲನ ಧ್ಯಾನ | 
ನೆನವಿತ್ತು ಸಂತೈಸು ಗಣಪ ಷಣ್ಮುಖರಯ್ಯ | ೫ |                               
          ನಂಜುಂಡ....
***

No comments:

Post a Comment