ರಾಗ - : ತಾಳ -
ರಾಮರಾಮ ಎನ್ನಿರೊ ಹರಿದಾಸರೆಲ್ಲ l
ರಾಮ ರಾಮ ಎನ್ನಿರೊ ll ಪ ll
ಇದ್ದರೆ ವಿಶ್ವಗಳಿಲ್ಲ ಎದ್ದು ಹೋದರೆ ಕ್ಲೇಶಗಳಿಲ್ಲ l
ಮುದ್ದು ಶ್ರೀಕೃಷ್ಣನಕಿಂತ ಮೋಹವುಳ್ಳ ಬಾಂಧವರಿಲ್ಲ ll ೧ ll
ಕಂಡರೆ ನಮ್ಮ ಕರೆಯುವರಿಲ್ಲ ಬಂದಿರೆಂದು ಕೇಳುವರಿಲ್ಲ l
ತಂದೆ ಶ್ರೀಕೃಷ್ಣನಕಿಂತ ಬಂಧುಗಳಾದ ಬಾಂಧವರಿಲ್ಲ ll ೨ ll
ಹೋದರೆ ನಮ್ಮ ನೆನೆವವರಿಲ್ಲ ಆದರಣಿಯ ಮಾಡುವರಿಲ್ಲ l
ಸ್ವಾಮಿ ಪುರಂದರವಿಟ್ಠಲನಕ್ಕಿಂತ ಮೋಹವುಳ್ಳ ಬಾಂಧವರಿಲ್ಲ ll ೩ ll
***
No comments:
Post a Comment