Wednesday, 4 December 2019

ಕೆಟ್ಟಿತು ಕೆಲಸವೆಲ್ಲ ಲೋಕದಿ purandara vittala

ಪುರಂದರದಾಸರು
ರಾಗ ರೇಗುಪ್ತಿ ಅಟತಾಳ 

ಕೆಟ್ಟಿತು ಕೆಲಸವೆಲ್ಲ ,ಲೋಕದಿ ಕಾಮ
ನಟ್ಟುಳಿ ಘನವಾಯಿತು
ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿ
ಬಿಟ್ಟು ಮುಂದಣ ಪಥವ, ಹೇ ದೇವ || ಪ||

ಸತ್ಯ ಶೌಚ ಕರ್ಮವು ಧರ್ಮದ ಬಲ
ಮತ್ತೆ ಅಡಗಿಹೋಯಿತು
ಎತ್ತ ನೋಡಲು ನೀಚವೃತ್ತಿಯು ತುಂಬಿ
ಅತ್ಯಂತ ಪ್ರಬಲವಾಯಿತು, ಹೇ ದೇವ ||

ಹೊತ್ತುಹೊತ್ತಿಗೆ ಹಲವು ಲಂಪಟತನದಿ
ಚಿತ್ತ ಚಂಚಲವಾಯಿತು
ಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದು
ಗೊತ್ತು ಇಲ್ಲದೆ ಹೋಯಿತು, ಹೇ ದೇವ ||

ಪೇಳುವುದೇನಿನ್ನು ದುರ್ಜನಸಂಗ -
ದೋಲಾಟ ಸೊಗಸಾಯಿತು
ಕೀಳು ಮೇಲು ಮೇಲು ಕೀಳಾಗಿ ನಡೆವುದು
ಕಾಲ ವೆಗ್ಗಳವಾಯಿತು , ಹೇ ದೇವ ||

ಆಳುವ ನೃಪರಿಗೆಲ್ಲ ಕಾಂಚನದಾಸೆ
ಮೇಲು ಮೇಲಾಯಿತಯ್ಯ
ನೀಲಮೇಘಶ್ಯಾಮನೆನ್ನಾಳೆಂಬವರಿಗೆ
ಕೂಳು ಹುಟ್ಟದೆ ಹೋಯಿತು , ಹೇ ದೇವ ||

ಅರಿಷಡ್ವರ್ಗದಲಿ ಸಿಲುಕಿ ಜ್ಞಾನದ
ಅರಿವು ಇಲ್ಲದೆ ಹೋಯಿತು
ಕರುಣಾಳು ಸೊಬಗು ಶ್ರೀಪುರಂದರವಿಠಲನ
ಸ್ಮರಣೆಯಿಲ್ಲದೆ ಹೋಯಿತು , ಹೇ ದೇವ ||
***


pallavi

keTTidu kelasavella lOkadi kAmanaTTuLi ghanavAyitu baTTe tappi munde keTTu karmiyAgi biTTu mundaNa padava hE dEva

caraNam 1

satya shauca karmavu dharmada bala matte aDagi hOyitu etta
nODalu nIca vrittiyu tumbi atyanta prabalavAyitu hE dEva

caraNam 2

hottu hottige halavu lampaTatanadi citta cancalavAyitu sattu
huTTuva suLiyallade mattondu gottu illade hOyitu hE dEva

caraNam 3

pELuvudEninnu durjana sanga dOlATa sogasAyitu kILu
mElu mElu kILAgi naDevudu kAla veggalavAyitu hE dEva

caraNam 4

aLuva nrparigella kAncanadAse mElu mElAyitalla nIla megha
shyAmanennAnembavarige sULuhuTTade hOyitu hE dEva

caraNam 5

ariSdvargadali siluki jnAnada arivu illade hOyitu karunALu
sobhagu shrI purandara viTTalana smaraNeyillade hOyitu hE dEva
***

ಕೆಟ್ಟಿತು ಕೆಲಸವೆಲ್ಲ ಲೋಕದಿ ಕಾಮನಟ್ಟುಳಿದಶನವಾಯಿತು ಪ.

ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿಬಿಟ್ಟು ಮುಂದಣ ಪಥವ - ಹೇ ದೇವಾ ಅಪಸತ್ಯ ಕಾಮ ಕರ್ಮವು ಧರ್ಮದ ಬಲಮತ್ತೆ ಅಡಗಿಹೋಯಿತುಎತ್ತ ನೋಡಲು ನೀಚವೃತ್ತಿಯೆತುಂಬಿಅತ್ಯಂತ ಪ್ರಬಲವಾಯ್ತೋ ಹೇ ದೇವಾ 1

ಹೊತ್ತುಹೊತ್ತಿಗೆ ಹಲವು ಲಂಪಟತನದಲಿಚಿತ್ತ ಚಂಚಲವಾಯಿತುಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದುಗೊತ್ತು ಇಲ್ಲದೆ ಹೋಯಿತ್ತೋ ಹೆ ದೇವಾ 2

ಪೇಳುವುದೇನಿನ್ನು ದುರ್ಜನರ ಸಂಗದೋಲಾಟ ಸೊಗಸಾಯಿತುಕೀಳು ಮೇಲು ಮೇಲು ಕೀಳಾಗಿ ನಡೆಯುವಕಾಲವೆಗ್ಗಳವಾಯಿತೋ ಹೇ ದೇವಾ3

ಆಳುವ ಅರಸರಿಗೆಲ್ಲ ಕಾಂತನದಾಸೆಮೇಲು ಮೇಲಾಯಿತಯ್ಯನೀಲ ಮೇಘಶ್ಯಾಮ ನಿನ್ನಾಳೆಂಬರಿಗೆಕೂಳು ಹುಟ್ಟದೆ ಹೋಯಿತೋ ಹೇ ದೇವಾ 4

ಅರಿಷಡ್ವರ್ಗದಲಿ ಸಿಲುಕಿ ಸುಜ್ಞಾನದಅರಿವು ಇಲ್ಲದೆ ಹೋಯಿತುಕರಣಾಳು ಶ್ರೀ ಪುರಂದರವಿಠಲನೆ ನಿನ್ನಸ್ಮರಣೆಯಿಲ್ಲದೆ ಹೋಯಿತೋ ಹೇ ದೇವಾ 5
*******

No comments:

Post a Comment