ಪುರಂದರದಾಸರು
ಕಾಯಬೇಕೆನ್ನ ಗೋಪಾಲ , ಒಂದು-
ಪಾಯವನರಿಯೆನು ಭಕ್ತರಪಾಲ ||ಪ||
ಹಲವು ಜನ್ಮಗಳೆತ್ತಿ ಬಂದೆ, ಮಾಯಾ-
ಬಲವೆಂದರಿಯದೆ ಭವದೊಳು ನೊಂದೆ
ಒಲಿದು ಭಯವಾಯಿತು ಮುಂದೆ , ನೀನು
ಸುಲಭನೆಂದು ಕೇಳಿ ಶರಣೆಂದು ತಂದೆ ||
ವಿತ್ತದೊಳಗೆ ಮನವಿಟ್ಟು, ನಿನ್ನ
ಉತ್ತಮನಾಮದ ಸ್ಮರಣೆಯ ಬಿಟ್ಟು -
ನ್ಮತ್ತನಾಗಿ ಮತಿಗೆಟ್ಟು, ಇದು
ಚಿತ್ತದೊಳಗೆ ತಿಳಿದು ಬಲು ದಯವಿಟ್ಟು ||
ಈ ರೀತಿ ಪಾಪಗಳೆಲ್ಲ , ಅನ್ಯ -
ನರರೇನು ಅರಿವರು ಯಮಧರ್ಮ ಬಲ್ಲ
ನರಕಕ್ಕೆ ಒಳಗಾದೆನಲ್ಲ , ಸಿರಿ-
ವರ ನಾರಾಯಣ ಪುರಂದರವಿಠಲ ||
***
pallavi
kAyabEkenna gOpAla ondupAyavanariyenu bhakutara pAla
caraNam 1
halavu janmagaLetti bande mAyA balavembodariyade bhavadoLu nonde
balu bhayavAyitu munde nInu sulabhanendu kELi sharaNende tande
caraNam 2
vittadoLage manaviTTu ninna uttama nAmada smaraNeya biTTu
mattanAde matikeTTu idu cittadali tiLidu balu dayaviTTu
caraNam 3
I rIti pApagaLella anya nararEnu arivaru yama dharma balla
narakakke oLagAdenalla siri vara nArAyaNa purandara viTTala
***
kapi – Ata (raga tala may differ in audio)
P: kAyabekenna gOpAla ondu pAyavanariyenu bhakutara pAla
C1: halavu janmagaLetti bande mAyA Balavembodariyade bhavadoLu nonde
Balu bhayavAyitu munde neenu sulabhanendu kELi sharanende tande
C2: vittadoLage manavittu ninna uttamanAmada smarane bittu
mattanAde matigettu idu chittadali tiLidu balu dayavittu
C3: E reeti pApagaLella anya nararEnu arivaru yamadharma balla
Narakakke oLagAdenalla siri vara nArAyanNa purandaravithala
***
Meaning:
P: O gopAla, protector of your devotees, you must protect me, I do not know any short cuts.
C1: I have taken many births, have suffered without knowing the power of maya; I got very scared, (but) hearing that you are the easy way out, have surrendered to you, my father.
C2: I took interest in wealth(vitta=money), and thus gave up remembering your good name; I got intoxicated, and lost my mind, please understand this.
C3: Other humans may not know these sins, as well as Yama knows; I have bound myself to hell, O nArAyana purandaravithala.
***
ಕಾಯ ಬೇಕೆನ್ನ ಗೋಪಾಲ ||2||
ಒಂದು ಉಪಾಯವನರಿಯೆನು
ಭಕುತರ ಪಾಲ ||ಒಂದು||
||ಕಾಯ ಬೇಕೆನ್ನ||
ಹಲವು ಜನ್ಮಗಳೆತ್ತಿ ಬಂದೆ
ಮಾಯಾ ಭಲವೆಂಬುದರಿಯದೆ
ಭವದೊಳು ನೊಂದೆ ||ಹಲವು||
ಬಲು ಭಯವಾಯಿತು ಮುಂದೆ||2||
ನೀನು ಸುಲಭನೆಂದು ಕೇಳಿ
ಶರಣೆಂದೆ ತಂದೆ
||ಕಾಯ ಬೇಕೆನ್ನ||
ವಿತ್ತದೊಳಗೆ ಮನವಿಟ್ಟು ನಿನ್ನ
ಉತ್ತಮ ನಾಮದ ಸ್ಮರಣೆಯ ಬಿಟ್ಟು
||ವಿತ್ತದೊಳಗೆ||
ಮತ್ತನಾದೆ ಮತಿಗೆಟ್ಟೂ ||2||
ಇದ ಚಿತ್ತದಲಿ ತಿಳಿದು ಬಲು ದಯವಿಟ್ಟು
||ಕಾಯ ಬೇಕೆನ್ನ||
ಗುರುತರ ಪಾಪಂಗಳೆಲ್ಲ ಅನ್ಯ
ನರರೇನ ಬಲ್ಲರು ಯಮಧರ್ಮ ಬಲ್ಲ
||ಗುರುತರ||
ನರಕಕೆ ಒಳಗಾದೆನಲ್ಲ
ಸಿರಿ ವರನಾರಾಯಣಾ...
ನಾರಾಯಣಾ.....ನಾರಾಯಣಾ...
ಸಿರಿ ವರ ನಾರಾಯಣ ಪುರಂದರವಿಠ್ಠಲಾ
||ಕಾಯ ಬೇಕೆನ್ನ||
***
ರಾಗ ಕಾಪಿ ಅಟತಾಳ (raga, taala may differ in audio)
ಪಾಯವನರಿಯೆನು ಭಕುತರ ಪಾಲ ಪ
ಹಲವು ಜನ್ಮಗಳೆತ್ತಿ ಬಂದೆ-ಮಾಯಾ-|ಮಲವೆಂಬುದರಿಯದೆ ಭವದೊಳು ನೊಂದೆ ||ಬಲು ಭಯವಾಯಿತು ಮುಂದೆ-ನೀನು-|ಸುಲಭನೆಂದುಕೇಳಿಶರಣೆಂದೆ ತಂದೆ1
ವಿತ್ತದೊಳಗೆ ಮನವಿಟ್ಟು-ನಿನ್ನ-|ಉತ್ತಮ ನಾಮದ ಸ್ಮರಣೆಯ ಬಿಟ್ಟು ||ಮತ್ತನಾದೆನು ಮತಿಗೆಟ್ಟು-ಇದ-|ಚಿತ್ತದಲಿ ತಿಳಿದಿ ಬಲು ದಯವಿಟ್ಟು 2
ಜರುಗಿದ ಪಾಪಂಗಳೆಲ್ಲ-ಅನ್ಯ-|ನರರೇನ ಬಲ್ಲರು ಯಮಧರ್ಮ ಬಲ್ಲ ||ನರಕಕೆ ಒಳಗಾದೆನಲ್ಲ-ಸಿರಿ-|ವರನಾರಾಯಣ ಪುರಂದರವಿಠಲ 3
*******
No comments:
Post a Comment