ರಾಗ ಮಧ್ಯಮಾವತಿ. ಆಟ ತಾಳ
ಬರಿದೆ ದೂರುವಿರಿಯೇಕಮ್ಮ ,ನಮ್ಮ ಬಾಲನ
ಬರಿದೆ ದೂರುವಿರಿಯೇಕಮ್ಮ ||ಪ||
ತರಳನಿವನು ಬಲು ದುರುಳನೆಂದೆನುತಲಿ
ತರತರದಲಿ ನಾರಿಯರು ನೀವು ಪ್ರತಿ ದಿನ ||ಅ||
ಹಾಲ ಕುಡಿಯಲರಿಯ ಎನ್ನಯ ಕಂದ
ಪಾಲು ಬೆಣ್ಣೆ ಕದಿವನೆ
ಆಲಯದೊಳಗಿಂದಗಲದ ಹಸುಮಗ
ಬಾಲೆರ ಸೊಗಸಿಗೆ ಒಲಿದು ಬರುವನೆಂತು ||
ಮಾತನರಿಯದ ಬಾಲ ನಿಮ್ಮನು ಕಂಡು
ಸೋತು ಮೋಹಿಸಬಲ್ಲನೆ
ಪಾತಕತನದಲ್ಲಿ ನುಡಿದರೆ ತೊಟ್ಟಿಲೊ-
ಳೀ ತೆರದಿ ಮಲಗಿರುವ ಎನ್ನಯ ಶಿಶು ||
ನಡೆಯಲರಿಯದ ಬಾಲ ನಿಮ್ಮನೆಯಲಿ
ತುಡುಗು ಕಳವು ಮಾಳ್ಪನೆ
ಕೊಡಲು ಮೊಲೆಯನುಣಲರಿಯದ ಕಂದಯ್ಯ
ಹುಡುಗೇರ ಕುಚಗಳ ಪಿಡಿವನೆಂತು ಛೀ ಛೀ ||
ಸುತ್ತಿ ಕಟ್ಟಿದ ಹಗ್ಗವ ಸೆಳೆದು ಬಂದು
ಮತ್ತಿಮರ ಕೆಡಹೋದೆ
ಒತ್ತಿ ಕಾಳಿಂಗನ ಹೊಡೆಗಳ ತುಳಿದು ಸಾ-
ಮರ್ಥ್ಯದಲಸುರರ ಸಂಹರಿಸಬಲ್ಲನೆ ಕಂದ ||
ಇಂತು ನಂದನ ಕಂದನ ಮಾಯಾಗಾರ-
ನೆಂದು ಪೇಳದಿರೆ ಇನ್ನು
ಎಂದೆಂದು ನಂಬದ ಚಾಡಿಯ ಪೇಳದೆ
ಬಂದು ಲಾಲಿಸಿರೆ ಪುರಂದರವಿಠಲನ ||
***
ಬರಿದೆ ದೂರುವಿರಿಯೇಕಮ್ಮ ,ನಮ್ಮ ಬಾಲನ
ಬರಿದೆ ದೂರುವಿರಿಯೇಕಮ್ಮ ||ಪ||
ತರಳನಿವನು ಬಲು ದುರುಳನೆಂದೆನುತಲಿ
ತರತರದಲಿ ನಾರಿಯರು ನೀವು ಪ್ರತಿ ದಿನ ||ಅ||
ಹಾಲ ಕುಡಿಯಲರಿಯ ಎನ್ನಯ ಕಂದ
ಪಾಲು ಬೆಣ್ಣೆ ಕದಿವನೆ
ಆಲಯದೊಳಗಿಂದಗಲದ ಹಸುಮಗ
ಬಾಲೆರ ಸೊಗಸಿಗೆ ಒಲಿದು ಬರುವನೆಂತು ||
ಮಾತನರಿಯದ ಬಾಲ ನಿಮ್ಮನು ಕಂಡು
ಸೋತು ಮೋಹಿಸಬಲ್ಲನೆ
ಪಾತಕತನದಲ್ಲಿ ನುಡಿದರೆ ತೊಟ್ಟಿಲೊ-
ಳೀ ತೆರದಿ ಮಲಗಿರುವ ಎನ್ನಯ ಶಿಶು ||
ನಡೆಯಲರಿಯದ ಬಾಲ ನಿಮ್ಮನೆಯಲಿ
ತುಡುಗು ಕಳವು ಮಾಳ್ಪನೆ
ಕೊಡಲು ಮೊಲೆಯನುಣಲರಿಯದ ಕಂದಯ್ಯ
ಹುಡುಗೇರ ಕುಚಗಳ ಪಿಡಿವನೆಂತು ಛೀ ಛೀ ||
ಸುತ್ತಿ ಕಟ್ಟಿದ ಹಗ್ಗವ ಸೆಳೆದು ಬಂದು
ಮತ್ತಿಮರ ಕೆಡಹೋದೆ
ಒತ್ತಿ ಕಾಳಿಂಗನ ಹೊಡೆಗಳ ತುಳಿದು ಸಾ-
ಮರ್ಥ್ಯದಲಸುರರ ಸಂಹರಿಸಬಲ್ಲನೆ ಕಂದ ||
ಇಂತು ನಂದನ ಕಂದನ ಮಾಯಾಗಾರ-
ನೆಂದು ಪೇಳದಿರೆ ಇನ್ನು
ಎಂದೆಂದು ನಂಬದ ಚಾಡಿಯ ಪೇಳದೆ
ಬಂದು ಲಾಲಿಸಿರೆ ಪುರಂದರವಿಠಲನ ||
***
pallavi
baride duruviriyEkamma namma bAlana baride duruviriyEkamma
anupallavi
taraLanivanu balu duruLanendenutali tara taradali nAriyaru nIvu prati dina
caraNam 1
hAla kuDiyalariya ennaya kanda pAlu beNNe kadivane
AlayadoLagindagalada hasumaga bAlera sogasige olidu baruvanendu
caraNam 2
mAtanariyada bAla nimmanu kaNDu sOtu mOhisa ballane pAdakadanadalli
nuDidare toTTiloLI teradi malagiruva ennaya shishu
caraNam 3
naDeyalaiyada bAla nimmaneyali duDuku kaLavu mALpane koDalu
moleyanuNalariyada kandayya huDugEra kucagaLa piDivanendu chI chI
caraNam 4
sutti kaTTida haggava seLedu bandu mattimara keDahOde otti kALingana
hoDegaLa tuLidu sAmarthyadalasurara samharisa ballane kanda
caraNam 5
indu nandana kandana mAyAkAranendu pELadire innu endendu
nambada cADiya pELade bandu lAlisire purandara viTTalana
***
No comments:
Post a Comment