Sunday, 5 December 2021

ನಿಂದಕರಿರಬೇಕಿರಬೇಕು ಹಂದಿಯಿದ್ದರೆ ಕೇರಿ ಹೇಗೆ purandara vittala NINDAKARIRABEKIRABEKU HANDIYIDDARE KERI HEGE






ಪುರಂದರದಾಸರು

ನಿಂದಕರಿರಬೇಕಿರಬೇಕು |
ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೊ ಹಾಗೆ ||ಪಲ್ಲವಿ||

ಅಂದಂದು ಮಾಡಿದ ಪಾಪವೆಂಬ ಮಲ
ತಿಂದು ಹೋಗುವರಯ್ಯ ನಿಂದಕರು ||
ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ
ಪೊಂದಿಹ ಪುಣ್ಯವನೊಯ್ಯುವರಯ್ಯ ||೧||

ದುಷ್ಟ ಜನರು ಈ ಸೃಷ್ಟಿಯೊಳಿದ್ದರೆ
ಶಿಷ್ಟ ಜನರಿಗೆಲ್ಲ ಕೀರ್ತಿಗಳು ||
ಇಷ್ಟಪ್ರದ ಶ್ರೀಕೃಷ್ಣ ನಿನ್ನೊಳು
ಇಷ್ಟೇ ವರವನು ಬೇಡುವೆನಯ್ಯ ||೨||

ದುರುಳ ಜನಂಗಳು ಚಿರಕಾಲವಿರುವಂತೆ
ಕರವ ಮುಗಿದು ವರವ ಬೇಡುವೆನು ||
ಪರಿಪರಿ ತಮಸಿಗೆ ಗುರಿಯಾಹರಲ್ಲದೆ
ಪರಮ ದಯಾನಿಧೆ ಪುರಂದರವಿಠಲ ||೩||
***

ರಾಗ ನಾದನಾಮಕ್ರಿಯ  ತಾಳ - ಆಟ (raga, taala may differ in audio)

pallavi

nindakarira bEkirabEku

anupallavi

handiyiddare kEri hyngge suddhiyo hAnge

caraNam 1

andandu mADida pApavemba maladindu hOguvarayya nindakaru
vandisi stutisuva janarellaru namma pondiha puNyvanoyyuvrayya

caraNam 2

duSTa janaru I shrSTiyoLiddhare shiSTa janarigella kIrtigaLu
iSTaprda shrI krSNa ninnoLu iSTE varavanu bEDuvenayya

caraNam 3

duruLa janangaLu ciraklaviruvante karava mugidu vara bEDuvenu
paripari tamasige guriyaharallade parama dayAnidhe purandara viTTala
***
ನಿಂದಕರಿರಬೇಕು

ಜಗತ್ತಿನಲ್ಲಿ ಅನೇಕರು ಹೊಗಳುಭಟ್ಟರನ್ನು ಪಕ್ಕದಲ್ಲೇ ಇಟ್ಟುಕೊಂಡಿರುತ್ತಾರೆ.  ಇಂತಹ ಭಟ್ಟಂಗಿಗಳನ್ನು ಸಾಕುವವರೂ ಇಲ್ಲದಿಲ್ಲ.  ಆದರೆ ಇಲ್ಲಿ ದಾಸರು 'ನಿಂದಕರಿರಬೇಕು' ಎಂದು ಹೇಳಿ ಅಚ್ಚರಿಯನ್ನುಂಟು ಮಾಡುವರು.  ದಾಸರ ಹಾರ್ದ ಸಜ್ಜನರು ಇಂದಿಗೂ ದುರ್ಗತಿ ಹೊಂದಬಾರದೆಂದು.  ಸಾತ್ವಿಕಜೀವಿ ಜೀವನದಲ್ಲಿ ಏನಾದರೂ ಕೆಟ್ಟ ಕೆಲಸವನ್ನೊ, ನಿಂದ್ಯಕಾರ್ಯವನ್ನೊ ಎಸಗಿದಾಗ ಅದನ್ನು ಆಡಿಕೊಳ್ಳುವರಿದ್ದಲ್ಲಿ ಅಥವಾ ಬಯ್ಯುವವರಿದ್ದಲ್ಲಿ ತಿದ್ದಿಕೊಳ್ಳಲು ಅವಕಾಶವಿರುತ್ತೆ.  ಅದಕ್ಕೆ ಪುರಂದರರು -

'ಚೆನ್ನಾಗಿ ಬೈದೆನ್ನ ಧನ್ಯನ ಮಾಡಿರೋ'
ಮನ ಮುಟ್ಟಿ ಬೈಯ್ಯಿರೋ' ll ಎಂದೂ ಕೇಳಿಕೊಳ್ಳುವರು.

ಇಲ್ಲೊಂದು ರಹಸ್ಯವೂ ಉಂಟು, ಮಾಡಿದವರ ಪಾಪ ಆಡಿಕೊಂಬವಗೆ ಹೋಗಿ ತಕ್ಕಮಟ್ಟಿಗೆ ಪರಿಹಾರವೂ ಆಗುತ್ತೆ
  'ಮಾಡಿದವರ ಪಾಪ ಆಡಿದವರಿಗೆ' ಎಂಬ ಗಾದೆಯೂ ಇದೆಯಲ್ಲ.  ಅದಕ್ಕೆ ದಾಸರ ದೇವರನಾಮವೇ ಹೀಗಿದೆ -

ನಿಂದಕರಿರಬೇಕಿರಬೇಕು
ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ಧಿಯೋ ಹಾಂಗೆ ll - ಶ್ರೀ ಪು.ದಾಸರು

ಇಲ್ಲಿ ಹಂದಿಯ ಸ್ಥಾನದಲ್ಲಿ ದುರ್ಜನರು.  ಇನ್ನೊಂದು ಕಡೆ ದಾಸರ ಮಾತು ಹೀಗಿದೆ.

ನಾ ಮಾಡಿದಷ್ಟು ಪಾಪವನ್ನು ಅಳೆದು ಹಾಕಿ ಹಂಚಿಕೊಳ್ಳಿರೋ ll ಎಂದು ಸಮಾಧಾನಪಡುವರು.

ನಮ್ಮ ಪಾಪಪುಣ್ಯಗಳನ್ನು ದಾಸರು ಅಳೆಯುವ ರೀತಿ ತುಂಬಾ ಸ್ವಾರಸ್ಯಕರವಾಗಿದೆ. 

ಅಂದಂದು ಮಾಡಿದ ಪಾಪವೆಂಬ ಮಲ
ತಿಂದು ಹೋಗುವರಯ್ಯ ನಿಂದಕರು l
ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ
ಪೊಂದಿದ ಪುಣ್ಯವನೊಯ್ಯುವರಯ್ಯ ll

ಇಲ್ಲಿ ದಾಸರ ಭಾವ, ಪುಣ್ಯ ಕೆಲಸಗಳನ್ನು ಮಾಡಿ ರಹಸ್ಯವಾಗಿಡಿ, ಎಸಗಿದ ಪಾಪಕಾರ್ಯಗಳನ್ನು ಬಯಲು ಮಾಡಿ ತಿದ್ದಿಕೊಂಡು, ತಾಳಿಕೊಂಡು ಸಾಧನೆಗಳನ್ನು ಮುಂದುವರೆಸಿಕೊಳ್ಳಿ ಎಂದಾಗಿದೆ.  ದಾಸರ ಮುತ್ತಿನಂಥಹ ಮಾತು - 'ದುಷ್ಟ ಜನರು ಈ ಸೃಷ್ಟಿಯೊಳಿದ್ದರೆ ಶಿಷ್ಟಜನರಿಗೆಲ್ಲ ಕೀರ್ತಿಗಳು ll'  ಇಲ್ಲಿ ದುಷ್ಟರ ಸ್ವಭಾವವನ್ನೂ ತಿಳಿಸಿ, ಅವರಂದದ್ದನ್ನೂ ಮಾತ್ರ ಪರಿಗಣಿಸಿ, ನಮ್ಮ ಸಾಧನೆಯನ್ನು ಮಾಡಿಕೊಳ್ಳಿ ಎನ್ನುವರು.  

ಮತ್ತೊಂದು ನೆನಪಿನಲ್ಲಿಡಬೇಕಾದ ಮಾತೆಂದರೆ -

ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿ-
ನಂದಿಸುವ ಜನರು ಜಗದೊಳು ಜನರಿಂದ
ವಂದ್ಯರಾಗುವರು ಎಂದೆಂದು ll -ಶ್ರೀಜಗನ್ನಾಥದಾಸರು
***


ನಿಂದಕರಿರಬೇಕಿರಬೇಕು 
ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ ಹಾಗೇ ಪ.

ಅಂದಂದು ಮಾಡಿದ ಪಾಪವೆಂಬ ಮಲತಿಂದು ಹೋಗುವರಯ್ಯ ನಿಂದಕರುವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮಪೊಂದಿಗ ಪುಣ್ಯವನ್ನೆಯ್ಯುವರಯ್ಯ 1

ದುಷ್ಠ ಜನರು ಈ ಸೃಷ್ಟಿಯೊಳಿದ್ದರೆಶಿಷ್ಟ ಜನರಿಗೆಲ್ಲ ಕೀರ್ತಿಗಳೂಇಷ್ಟಪ್ರದ ಶ್ರೀ ಕೃಷ್ಣನೆ ನಿನ್ನೊಳುಇಷ್ಟೇ ವರವನು ಬೇಡುವೆನಯ್ಯ 2

ದುರುಳ ಜನಂಗಳು ಚಿರಕಾಲ ಇರುವಂತೆಕರವ ಮುಗಿದುವರ ಬೇಡುವೆನುಪರಿಪರಿ ತಮಾಸಿಗೆ ಗುರಿಯಿಲ್ಲದೆಪರಮದಯಾನಿಧಿ ಪುರಂದರವಿಠಲ3
*******

No comments:

Post a Comment