Wednesday, 17 November 2021

ಕೊಡುವಕರ್ತ ಬೇರೆ ಇರುತಿರೆ ಬಿಡು ಬಿಡು ಚಿಂತೆಯನು purandara vittala KODUVA KARTRU BERE IRUTIRE BIDU BIDU CHINTEYANU



ಕೊಡುವ ಕರ್ತು ಬೇರೆ ಇರುತಿರೆ
ಬಿಡು ಬಿಡು ಚಿಂತೆಯನು ||ಪ||

ಒಡೆಯನಾಗಿ ಮೂರ್ಜಗವನು ಪಾಲಿಪ
ಬಡವರುದ್ಧಾರಕ ಭಕ್ತರೊಡೆಯ ಹರಿ ||ಅ.ಪ||

ಕಲ್ಲಿನೊಳಗೆ ಇರುವ ಕಪ್ಪೆಗೆ
ಅಲ್ಲಿ ಉದಕ ಕೊಡುವ
ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ
ವಲ್ಲಭ ಶ್ರೀಹರಿ ಎಲ್ಲೆಲ್ಲಿರುತಿರೆ ||

ಆನೆಗೈದು ಮಣದ ಆಹಾರವ
ತಾನೆ ತಂದು ಕೊಡುವ
ದೀನರೊಡೆಯ ಶ್ರೀನಿವಾಸ ದಯಾನಿಧಿ
ಮಾನದಿಂದಲಿ ಕಾಯ್ವ ಭಾನುಕೋಟಿತೇಜ ||

ಸರಸಿಜಾಕ್ಷ ತನ್ನ ಸೇರಿದ
ನರರ ಬಿಡನು ಘನ್ನ
ಪರಮದಯಾನಿಧಿ ಭಕುತರ ಸಲಹುವ
ಪುರಂದರವಿಟ್ಠಲ ಪುಷ್ಪಶರನ ಪಿತ ||
***

ರಾಗ ಸುರುಟಿ ಅಟತಾಳ  (raga, taala may differ in audio)
ರಾಗ ಸುರುಟಿ ಆದಿತಾಳ

pallavi

koDuva kartu bEre irutire biDu biDu cinteyanu

anupallavi

oDeyanAgi mUjagavanu pAlipa badavaruDDhAraka bhaktateraDeya hari

caraNam 1

kalliloLage iruva kappage alli udaga koDuva ella kOTi
jIva rAshigaLane kAiva vallabha shrI hari ellellirutire

caraNam 2

Ane kaidu maNada AhArava tAne tandu koDuva dInaroDeya
shrInivAsa dayAnidhi mAnadindali kAiva bhAnu kOTi tEja

caraNam 3

sarasijAkSa tanna sErida narara biDanu ghanna parama
dayAnidhi bhakutara salahuva purandara viTTala puSpa sharana pita
***


ಕೊಡುವ ಕರ್ತು ಬೇರೆ , ಮನದಲ್ಲಿ ಬಿಡು ಬಿಡು ಚಿಂತೆಯನು ||ಪ||
ಬಡತನೈಶ್ವರ್ಯ ಎರಡಕ್ಕೆ ಕಾರಣ , ಒಡೆಯ ಶ್ರೀವೆಂಕಟರಮಣನು ತಾನೆ ||ಅ||

ಜನನವಾಗದ ಮುನ್ನ ಜನನಿಯ ತನುವಿನೊಳಗೆ ಪಾಲ
ಜನನವಾದ ಬಳಿಕ ಜನನಿಯ ಮೊಲೆಯ ತುಳಿಯ ತುಳಿ-
ಯುಣಿಸುತ ಬೆಳೆಸುವ ಜನವ ||

ಹೆಣ್ಣು ಹೊನ್ನು ಮಣ್ಣು, ಈ ಮೂರನು, ಮುನ್ನ ಪಡೆಯಲಿಲ್ಲ
ಅನ್ಯರ ನೋಡಿ ಸಹಿಸಲಾರದೆ, ಖಿನ್ನನಾಗಿ ನೀ ಬಳಲುವುದೇಕೆ ||

ತಂದೆ ಫಲಗಳಿಲ್ಲದೆ ಇರುತಿರೆ, ತಂದು ಬಯಸಲುಂಟೆ
ತಂದೆ ಪುರಂದರವಿಠಲರಾಯನ ದಯಬಾರೆ, ಅಂದಿಗೆ ಇಹಪರ ಸುಖಭೋಗ ||
***

ಕೊಡುವಕರ್ತ ಬೇರೆ ಇರುತಿರೆ -ಬಿಡುಬಿಡು ಚಿಂತೆಯನು ಪ.

ಒಡೆಯನಾಗಿ ಮೂಜಗವನು ಪಾಲಿಪ |ಬಡವರಾಧಾರಿಯು ಭಕ್ತರ ಪ್ರಿಯನು ಅಪಕಲ್ಲಿನೊಳಗೆ ಇರುವ - ಕಪ್ಪೆಗೆ - |ಅಲ್ಲೆ ಉದಕಕೊಡುವ |ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ |ವಲ್ಲಭಶ್ರೀಹರಿ ಎಲ್ಲಿಯು ಇರುತಿರೆ|1||

ಆನೆಗೈದುಮಣದಾ - ಆಹಾರವ |ತಾನೆ ತಂದು ಕೊಡುವ |ದೀನರೊಡೆಯ ಶ್ರೀನಿವಾಸ ದಯಾನಿಧಿ |ಮಾನದಿಂದಲಿ ಕಾಯ್ವ ಭಾನುಕೋಟಿತೇಜ2

ಸರಸಿಜಾಕ್ಷ ತನ್ನ - ಸೇರಿದ |ನರರನು ಬಿಡನಣ್ಣ |ಪರಮದಯಾನಿಧಿ ಭಕುತರ ಸಲಹುವ |ಪುರಂದರವಿಠಲನು ಪುಷ್ಪಶರನ ಪಿತ 3
****



No comments:

Post a Comment