Thursday, 12 December 2019

ಮನವೇನೆಂಬುದನರಿಯೋ ಮನುಜ ankita mahipati

ಅಸಾವೇರಿ( ಜೀವನಪುರಿ ರಾಗ ) ಆದಿತಾಳ

ಮನವೇನೆಂಬುದನರಿಯೋ ಮನುಜ
ಮನವೇನೆಂಬುದನು ||ಧ್ರುವ ||

ಮನವೇನೆಂಬುದನನುಭವಕೆ ತಂದು
ಖೂನದಲಿಡದೆ ಜ್ಞಾನದಲಿ
ನಾನಾ ಶಾಸ್ತ್ರವ ಓದಿ ನೀ ಅನುದಿನ
ಏನು ಘಳಿಸಿದ್ಯೊ ಮರುಳ ಮನುಜಾ ||೧||

ಉತ್ಪತ್ತಿ ಸ್ಥಿತಿ ಲಯ ಕರ್ತರೆಂದೆನಿಸಿ
ಪ್ರತ್ಯೇಕವರನು ತೋರುತಲಿ
ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ
ಚಿತ್ತ ಭ್ರಮಿಸುದು ದಾವುದೊ ಮನುಜ ||೨||

ಏಕೋ ವಿಷ್ಣು ವೆಂದೆನಿಸಿ ಮುಖದಲಿ
ಪೋಕ ದೈವಕೆ ಬಾಯದೆರೆಸುತಲಿ
ನಾಕು ವೇದವ ಬಲ್ಲವನೆಂದೆನಿಸಿ
ವಿಕಳಿಸುತಿಹುದು ದಾವುದೊ ಮನುಜ ||೩||

ಉತ್ತಮೋತ್ತಮರ ಕಂಡಾಕ್ಷಣದಿ ಹರುಷದಿ
ನಿತ್ಯಿರಬೇಕೀ ಸಹವಾಸವೆನಿಸಿ
ಮತ್ತೊಂದರಘಳಿಗಾಲಸ್ಯವ ತೋರಿ
ಒತ್ತಿ ಆಳುವದು ದಾವುದೊ ಮನುಜ ||೪||

ಪಾಪವ ಮಾಡಬಾರದು ಎಂದೆನಿಸಿ
ವ್ಯಾಪಿಸಗೊಡದೆ ಕಾಣದನಕ
ಉಪಾಯದಲಿ ಅಪಸ್ವಾರ್ಥವು ಇದಿರಿಡೆ
ಅಪಹರಿಸುವುದು ದಾವುದೊ ಮನುಜ ||೫||

ಪ್ರಾಚೀನವೆ ತಾ ನಿಜವೆಂದರುಹಿಸಿ
ಆಚರಣೆಯ ಬ್ಯಾರೆ ತೋರುತಲಿ
ನೀಚ ಊಚಕೆ ಹೊಡೆದಾಡಿಸುತ
ನಾಚಿಸುತಿಹುದು ದಾವುದೊ ಮನುಜ ||೬||

ಸಗುಣ ನಿರ್ಗುಣ ಬ್ಯಾರೆರಡನೆ ತೋರಿ
ಬಗೆಬಗೆ ಸಾಧನ ತೋರಿಸುತ
ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ
ತೋರುವುದು ದಾವುದೊ ಮನುಜ ||೭||

ಧ್ಯಾನಕೆ ಕೂಡಿಸಿ ಮೌನವ ಹಿಡಿಸಿ
ಅನುದಿನ ಜಪವನು ಮಾಡಿಸುತ
ಘನವಾಗಿಹ ಅನುಭವ ಸುಖದಾಟದ
ಖೂನದೋರಿಸುದು ದಾವುದೊ ಮನುಜ ||೮||

ಮರವಿಗೆ ತಾನೇ ಅರಿವೇ ಕೊಟ್ಟು
ಅರಿವು ಮರವಿನೊಳಾಡಿಸುತ
ತಿರುವು ಮರವಿನಂಕುರದ ಕುರುಹಿನ
ಇರಹು ತೋರಿಸುದು ದಾವುದೊ ಮನುಜ ||೯||

ಮನವಿನ ಮೂಲವ ತಿಳಿವದು
ಭಾನುಕೋಟಿ ಪ್ರಕಾಶನ ಕರುಣದಿ
ನಾನು ನಾನೆಂಬವರಿಗೆ ಇದರ
ಖೂನ ಲೇಶ ತಿಳಿಯದೊ ಮನುಜ ||೧೦||

ಹರಿಯೆ ಗುರುವೆಂದರುಹಿಸಿ ಆತ್ಮದಿ
ಶರಣಹೋಗುವ ಭಾವನೆದೋರಿ
ತರಳ ಮಹಿಪತಿ ಗುರುದಯ ಪಡಕೊಂಡಿಂದು
ಯೋಗ್ಯನಾಗುವದಿದೊಂದೆ ಮನುಜ ||೧೧||
****

ಮನವೇನೆಂಬುದನರಿಯೋ ಮನುಜ ಮನ ವೇನೆಂಬುದನು ಪ  


ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜ1 

ಉತ್ಪತ್ತಿ ಸ್ಥಿತಿ ಲಯ ಕರ್ತನೆಂದೆನಿಸಿ ಪ್ರತ್ಯೇಕರವನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ 2 

ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕುವೇದವ ಬಲ್ಲವನೆಂದೆನಿಸಿ ವಿಕಳಿಸುತಿಹ್ಯದು ದಾವುದೊ ಮನುಜ 3 

ಉತ್ತಮೊತ್ತಮರ ಕಂಡಾಕ್ಷಣ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿ ಗಾಲಸ್ಯವ ತೋರಿ ಒತ್ತಿ ಆಳುವದು ದಾವುದೊ ಮನುಜ 4 

ಪಾಪವ ಮಾಡಬಾರದು ಎಂದೆನಿಸಿ ವ್ಯಾಪಿಸಿಗೊಡದೆ ಕಾಣದನಕ ಉಪಾಯದಲಿ ಅಪಸ್ವಾರ್ಥವು ಇದಿರಡೆ ಅಪಹರಿಸುವದು ದಾವುದೊ ಮನುಜ 5 

ಪ್ರಾಚೀನವೆ ತಾಂ ನಿಜವೆಂದರುಹಿಸಿ ಆಚರಣೆಯ ಬ್ಯಾರೆ ತೋರುತಲಿ ನೀಚ ಊಚ ಹೊಡೆದಾಡಿಸುತ ನಾಚಿಸುತಿಹುದು ದಾವೊದೊ ಮನುಜ 6 

ಸಗುಣ ನಿರ್ಗುಣ ಬ್ಯಾರೆರಡನೆ ತೋರಿ ಬಗೆ ಬಗೆ ಸಾಧನ ತೋರಿಸುತ ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ ತೋರುವುದು ದಾವುದೊ ಮನುಜ 7 

ಧ್ಯಾನಕೆ ಕೂಡಿಸಿ ಮೋನವ ಹಿಡಿಸಿ ಅನುದಿನ ಜಪವನು ಮಾಡಿಸುತ ಘನವಾಗಿಹÀ ಅನುಭವ ಸುಖದಾಟದ ಖೂನ ದೋರಿಸುದು ದಾವುದೊ ಮನುಜ 8 

ಮರವಿಗೆ ತಾನೆ ಅರಿವೇ ಕೊಟ್ಟು ತಿರಿವು ಮರವಿನಂಕುರದ ಕುರ್ಹುವಿನ ಇರಹು ತೋರಿಸುದು ದಾವುದೊ ಮನುಜ 9 

ಮನವಿನ ಮೂಲವು ತಿಳಿವದು ಭಾನುಕೋಟಿ ಪ್ರಕಾಶನ ಕರುಣದಲಿ ನಾನು ನಾನೆಂಬವರಿಗೆ ಇದರ ಖೂನ ಲೇಶ ತಿಳಿಯದೊ ಮನುಜ 10 

ಹರಿಯೆ ಗುರುವೆಂದರುಹಿಸಿ ಆತ್ಮಲಿ ಶರಣಹೋಗುವ ಭಾವನೆದೋರಿ ತರಳಮಹಿಪತಿ ಗುರುದಯ ಪಡಕೊಂಡಿಂದು ಯೋಗ್ಯನಾಗುವದಿದೊಂದೆ ಮನುಜ 11

****


No comments:

Post a Comment