Saturday 14 December 2019

ಸುರಪನಾಲಯದಂತೆ ಮಂತ್ರಾಲಯ ankita jagannatha vittala SURAPANAALAYADANTE MANTRALAYA

Audio by Mrs. Nandini Sripad

ಶ್ರೀ ಜಗನ್ನಾಥದಾಸರ ಕೃತಿ 

 ರಾಗ ಕಾಂಬೋಧಿ   ಖಂಡಛಾಪುತಾಳ 

ಸುರಪನಾಲಯದಂತೆ ಮಂತ್ರಾಲಯ ॥ ಪ ॥
ಕರೆಸುವುದು ಕಂಗೊಳಿಸುವುದು ನೋಳ್ಪ ಜನಕೆ ॥ಅ ಪ॥

ಕಾಮಧೇನುವಿನಂತೆ ಇಪ್ಪ ಗುರುವರ ಸಾರ್ವ-
ಭೌಮ ಸುಧೀಂದ್ರಸುತ ಶ್ರೀರಾಘವೇಂದ್ರ
ಆಮಯಾದಿ ಖಳತಮಿಶ್ರ ಓಡಿಸುವ ಚಿಂ -
ತಾಮಣಿ ಪ್ರಕಾಶದಂತಿಪ್ಪ ವೃಂದಾವನದಿ ॥ 1 ॥

ಸುರತರುವಿನಂತಿಪ್ಪ ಕೀರ್ತಿ ಸಚ್ಚಾಯ ಆಶ್ರಿ-
ತರ ಮನೋರಥ ಪೂರೈಸುವ
ಧರಣಿಸುರಾಖ್ಯ ಷಟ್ಟದಗಳಿಗೆ ತತ್ಸುಧಾ
ಪರಿಮಳದಿ ತೃಪ್ತಿಬಡಿಸುವ ಮರುತನಂತೆ ॥ 2 ॥

ವಾರಾಹಿ ಎಂಬ ನಂದನವನದಿ ಜನರು ವಿ -
ಹಾರ ಮಾಳ್ಪರು ಸ್ನಾನಪಾನದಿಂದ
ಗುರುರಾಘವೇಂದ್ರರಲ್ಲಿಪ್ಪ ಕಾರಣ 
ಕಾರುಣ್ಯನಿಧಿ ಜಗನ್ನಾಥವಿಠಲ ನಿಹನು ॥ 3 ॥
***

Surapanalayadante mantralaya || pa ||
Karesuvudu kangolisuvudu nolpa janake || a ||

Surataruvinantippa kirtisaccaya sritaramanorathava
Puraisuvadharanisurakyashatbadagalige
Divyasudhaparimalavu truptipadisida marutanante || 1 ||

Kamadhenuvinante ippa gurusarvabauma
Sudhindrasuta ragavendra^^A mayavadi tamisra
Odisuva cintamaniyante holeva vrundavana || 2 ||

Varahi enba nandanavanadi viharamalpar
U natajanasnanapanasri ragavendraru illippa
Karanaparakarunyanidhi jagannathaviththalanihanu || 3 ||
***

No comments:

Post a Comment