Saturday, 6 November 2021

ಕಂಡೆ ಪಂಢರಿ ರಾಯನ ತನ್ನನು ಕೊಂಡಾಡುವರ ಪ್ರಿಯನ ankita jagannatha vittala KANDE PANDARI RAAYANA TANNANU KONDAADUVARA PRIYANA



ಕಂಡೆ ಫಂಡರಿರಾಯನಾ ತನ್ನನುದಿನ l
ಕೊಂಡಾಡುವರ ಪ್ರೀಯನಾ ll ಪ ll

ಸಮಚರಣಾಂಬುಜನ ನಿಗಮಾಗಮತತಿಗೋಚರನಾ l
ಅಮಿತ ಪರಾಕ್ರಮನಾ ಶ್ರೀರುಗ್ಮಿಣಿರಮಣನ ವೀಕ್ಷಣನಾ ll 1 ll

ಕಾಮಿತಾರ್ಥಪ್ರದನಾ ಶ್ರೀತುಳಸಿಧಾಮ ವಿಭೂಷಣನಾ l
ಸಾಮಜವರಪಾಲನ ತ್ರಿಭುವನ ಸ್ವಾಮಿಚಿತ್ಸುಖಮಯನಾ ll 2 ll

ಗೋಕುಲಪೋಷಕನಾ ಮುನಿಪುಂಡರೀಕಗೊಲಿದು ಬಂದನಾ l
ಲೋಕವಿಲಕ್ಷಣನಾ ಪ್ರಣತರ ಶೋಕ ವಿನಾಶಕನಾ ll 3 ll

ಚಂದ್ರಭಾಗಾವಾಸನಾ ವಿಧಿಫಣೀಂದ್ರ ಮುಖಾರ್ಚಿತನಾ l
ಇಂದ್ರೋಪಲನಿಭನಾ ಗುಣಗಣಸಾಂದ್ರ ಸುರೋತ್ತಮನಾ ll 4 ll

ಶ್ವೇತವಾಹನ ಸಖನಾ ಸತಿಗೆ ಪಾರಿಜಾತವ ತಂದವನಾ l
ವೀತಶೋಕಭಯನಾ ಗುರು ಜಗನ್ನಾಥವಿಠಲರೇಯನಾ ll 5 ll
*****

ಕಂಡೆ ಪಂಢರಿರಾಯನ , ತನ್ನನು

ಕೊಂಡಾಡುವರ ಪ್ರಿಯನ , ವಿಠಲನ ||ಪ||

ಸಮ ಚರಣ ಭುಜನ ನಿಗಮಾ-

ಗಮತತಿಗೆ ಗೋಚರನ
ಅಮಿತ ಪರಾಕ್ರಮನ ರುಕ್ಮಿಣಿ-
ರಮಣ ಸುಲಕ್ಷಣನ ವಿಠ್ಠಲನ ||೧||

ಕಾಮಿತಾರ್ಥಪ್ರದನ ಸಿರಿತುಲಸಿ

ದಾಮ ವಿಭೂಷಣನ
ಸಾಮಜ ಪತಿಪಾಲನ ತ್ರೈಜಗ-
ತ್ಸ್ವಾಮಿ ಚಿತ್ಸುಖಮಯನ ವಿಠ್ಠಲನ ||೨||

ಗೋಕುಲಪೋಷಕನ ಮುನಿಪುಂಡ-

ರೀಕಗೊಲಿದು ಬಂದನ
ಲೋಕವಿಲಕ್ಷಣನ ಶರಣರ
ಶೋಕವಿನಾಶನನ ವಿಠ್ಠಲನ ||೩||

ಚಂದ್ರಭಾಗವಾಸನ ವಿಧಿ-ವಿಹ-

ಗೇಂದ್ರ ಮುಖಾರ್ಚಿತನ
ಇಂದ್ರೋತ್ಪಲನಿಭನ ಗುಣಗಣ
ಸಾಂದ್ರ ಸುರೋತ್ತಮನ ವಿಠ್ಠಲನ ||೪||

ಶ್ವೇತವಾಹನ ಸಖನ ಸತಿಗೆ ಪಾರಿ-

ಜಾತವ ತಂದಿತ್ತವನ
ವೀತಶೋಕ ಭಯನ ಶ್ರೀ ಜಗ-
ನ್ನಾಥವಿಠ್ಠಲರಾಯನ ||೫||
****


ರಾಗ - ಪೂರ್ವಿ  :  ತಾಳ - ತ್ರಿವಿಡೆ ತಾಳ (raga, taala may differ in audio)
ರಾಗ - ನಾದನಾಮಕ್ರಿಯೆ (ಮಾಂಡ್ ) ಆದಿತಾಳ (ಕಹರವಾ)

No comments:

Post a Comment