Saturday 14 December 2019

ಕರುಣಿಗಳೊಳ ಗೆಣೆ ಗಾಣೆನೋ ನಿನಗೆ ankita jagannatha vittala KARUNIGALOLA GENE GAANENO NINAGE



 ರಾಗ ಧನ್ಯಾಸಿ  ಆದಿತಾಳ 

2nd Audio by Mrs. Nandini Sripad

ಶ್ರೀ ಜಗನ್ನಾಥದಾಸರ ಕೃತಿ 


ಕರುಣಿಗಳೊಳಗೆಣೆಗಾಣೆನೋ ನಿನಗೆ ಸ -
ದ್ಗುರುವರ ರಾಘವೇಂದ್ರ ॥ ಪ ॥
ಚರಣಕಮಲವನ್ನು ಮೊರೆಹೊಕ್ಕ ಸುಜನರ 
ಹರಕೆಯ ನಿರುತದಲೀವೆ ನೀ ಕಾವೆ ॥ ಅ ಪ ॥

ರಾಘವೇಂದ್ರಗುರುವೆ ಗತಿಯೆಂದನು -
ರಾಗದಿಂದಲಿ ಭಜಿಪ ॥
ಭಾಗವತರ ದುರಿತೌಘಗಳಳಿದು ಚೆ -
ನ್ನಾಗಿ ಸಂತೈಸುವೆ ನೀ ಸನ್ಮೌನಿ ॥ 1 ॥

ಸುಧೀಂದ್ರಯತಿಕರ ಪದುಮಸಂಭವ 
ಮಧುವದಪಾದಾಂಬುಜ ಮಧುಪ ॥
ತ್ರಿದಶ ಭೂರುಹದಂತೆ ಬುಧಜನರಿಚ್ಛಿತ
ಒದಗಿ ಪಾಲಿಸಿ ಪೊರೆವೆ ಅಸ್ಮದ್ಗುರುವೆ ॥ 2 ॥

ಕುಧರದೇವನ ದಿವ್ಯರದನದಿ ಜನಿಸಿದ
ನದಿಯ ತೀರದಿ ಶೋಭಿಪ ॥
ಸದಮಲ ಘನಮಂತ್ರಸದನ ನಿಲಯ ಜಿತ-
ಮದನ ಶ್ರೀ ಜಗನ್ನಾಥವಿಠಲ ನ ದೂತ ॥ 3 ॥
****


Karunigalolagene kaneno ninage sa
Dguruvara ragavendra || pa ||

Carana kamalayugma morehokkavara manada
Harakeya nirutadalive-ni kave || a ||

Ragavendra guruve gati endanu
Ragadindali Bajipa
Bagavatara duritaugagalalidu ce
Nnagi santaisuve ni-sanmauni || 1 ||

Sudhindrayatikara padumasanbava madhu
Vadha padanbuja madhupa
Tridasaburuhadante budharipsita
Odagi palisi poreve-madguruve || 2 ||

Kudharadevana divyaradanadi janisida
Nadiya tiradi sobipa
Sadamala Gana mantrasadananilaya jita
Madana sri jagannathaviththalana duta || 3 ||
***

pallavi

karuNigaLoLagaNe kANenO ninage sadguruvara rAghavEndra

anupallavi

caraNa kamala yugma morehokkavara manada harakeya nIrutadalIvE nI kAvE

caraNam 1

rAghavEndra guruvE gatiyendanu rAgadindali bhajipa bhAgavatara
duritaughaLaLidu cennAgi santaisuve nI sannmauni

caraNam 2

sudhIndra yatikara paduma sambhava madhuvada pAdAmbuja madhupa tridasha
bhUruhadane budhajanarIpsita vodagi pAlisi poreve madguruvE

caraNam 3

udhara dEvana divyaradanadi janisida nadiya tIradi shObhipa sadamala
ghraNa mantra sadana nilaya jita madana shrI jagannAtha viThhalana dUta
***

ಕರುಣಿಗಳೊಳಗೆಣೆಗಾಣೆನೋ ನಿನಗೆ ಸ -
ದ್ಗುರುವರ ರಾಘವೇಂದ್ರ ॥ ಪ ॥
ಚರಣಕಮಲವನ್ನು ಮೊರೆಹೊಕ್ಕ ಸುಜನರ 
ಹರಕೆಯ ನಿರುತದಲೀವೆ ನೀ ಕಾವೆ ॥ ಅ ಪ ॥

ರಾಘವೇಂದ್ರಗುರುವೆ ಗತಿಯೆಂದನು -
ರಾಗದಿಂದಲಿ ಭಜಿಪ ॥
ಭಾಗವತರ ದುರಿತೌಘಗಳಳಿದು ಚೆ -
ನ್ನಾಗಿ ಸಂತೈಸುವೆ ನೀ ಸನ್ಮೌನಿ ॥ 1 ॥

ಸುಧೀಂದ್ರಯತಿಕರ ಪದುಮಸಂಭವ 
ಮಧುವದಪಾದಾಂಬುಜ ಮಧುಪ ॥
ತ್ರಿದಶ ಭೂರುಹದಂತೆ ಬುಧಜನರಿಚ್ಛಿತ
ಒದಗಿ ಪಾಲಿಸಿ ಪೊರೆವೆ ಅಸ್ಮದ್ಗುರುವೆ ॥ 2 ॥

ಕುಧರದೇವನ ದಿವ್ಯರದನದಿ ಜನಿಸಿದ
ನದಿಯ ತೀರದಿ ಶೋಭಿಪ ॥
ಸದಮಲ ಘನಮಂತ್ರಸದನ ನಿಲಯ ಜಿತ-
ಮದನ ಶ್ರೀ ಜಗನ್ನಾಥವಿಠಲ ನ ದೂತ ॥ 3 ॥
***

No comments:

Post a Comment