Monday, 30 December 2019

ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ankita hayavadana NENEVENANUDINA NEELANEERADA VARNANA GUNA RANNANA



dashama skanda
by vadirajaru
ನೆನೆವೆನನುದಿನ ನೀಲನೀರದ
ವರ್ಣನ ಗುಣ ರನ್ನನ ||pa||

ಮುನಿಜನಪ್ರಿಯ ಮುದ್ದು ಉಡುಪಿನ
ರಂಗನ ದಯಾಭರಿತನ ||a.pa||

ದೇವಕೀಜಠರೋದಯಾಂಬುಧಿ
ಚಂದ್ರನ – ಗುಣ ಸಾಂದ್ರನ
ಗೋವಜ್ರಕೆ ಘನ ಯಮುನೆ ದಾಟಿ
ಬಂದನ – ಅಲ್ಲಿ ನಿಂದನ
ಮಾವ ಕಳುಹಿದ ಮಾಯಾ ಶಟವಿಯ
ಕೊಂದನ – ಚಿದಾನಂದನ
ದೇವರಿಪು ದೈತ್ಯೇಂದ್ರ ಶಕಟನ
ಒದ್ದನ – ಶ್ರುತಿ ಸಿದ್ಧನ||1||

ಗೋಕುಲದ ಗೋಪಿಯರ ವಂಚಕ
ಚೋರನ – ಬಹು ಧೀರನ
ಅನೇಕ ನಾರಿಯರ್ವಸನವನು ಕ
ದ್ದೊಯ್ದನ – ತುರುಗಾಯ್ದನ
ನಾಕಿಯರಿಗರಿ ಧೇನುಕ ವತ್ಸವಿ
ಘಾತನ – ವಿಖ್ಯಾತನ
ಕಾಕುಮತಿ ಕಾಳಿಂಗನ ಫಣ
ತುಳಿದನ – ಅವಗೊಲಿದನ||2||

ಶೈಲವನು ಅಹಿಶಯನ ಬೆರಳಲಿ
ಆಂತನ – ಬಲವಂತನ
ಸೋಳಸಾಸಿರ ಬಾಲೆಯರ ಕರ
ಪಿಡಿದನ – ಸುಧೆಗುಡಿದನ
ಬಾಲೆ ಭಾಮೆಯರೊಡನೆ ಜಲಕ್ರೀಡೆ
ಗಿಳಿದನ – ಅಲ್ಲಿ ನಲಿದನ
ಲೀಲೆಯಲಿ ಲಲನೆಯರಿಗಿಷ್ಟವ
ಕೊಟ್ಟನ – ಸಂತುಷ್ಟನ||3||

ಕ್ರೂರ ಬಕ ಕೇಶಿಗಳನ್ನೆಲ್ಲ
ಸೀಳ್ದನ – ಸುರರಾಳ್ವನ
ಅಕ್ರೂರ ಕರೆಯಲು ಹರುಷದಿಂದಲಿ
ಬಂದನ – ಸುರವಂದ್ಯನ
ನಾರಿ ಕಬುಜೆಗೆ ಭೂರಿ ಸಂತಸ
ವಿತ್ತನ – ಅತಿಶಕ್ತನ
ವಾರಣವನು ಕೆಡಹಿದ ಪ್ರತಿ
ಮಲ್ಲನ – ಅತಿ ಚೆಲ್ವನ||4||

ಸುಲಭದಿಂದಲಿ ಶಿವನ ಧನುವನು
ಮುರಿದನ – ನೆರೆ ಮೆರೆದನ
ಮಲೆತ ಮಲ್ಲರ ಕೆಡಹಿ ರಂಗದಿ
ನಿಂತನ – ಜಯವಂತನ
ಖಳ ಕುಲಾಗ್ರಣಿ ಕಂಸನೆಂಬನ
ಹೊಡೆದನ – ಹುಡಿಗೆಡೆದನ
ಬಲದಿ ತಾಯಿ ತಂದೆ ಬಂಧನ
ಕಡಿದನ – ಯಶ ಪಡೆದನ||5||

ಭುವನ ಪಟ್ಟವನುಗ್ರಸೇನಗೆ
ಕೊಟ್ಟನ – ಅತಿ ಶ್ರೇಷ್ಠನ
ಯುವತಿಯರಿಗುದ್ಧವನ ಕಳುಹಿದ
ಜಾಣನ – ಸುಪ್ರವೀಣನ
ವಿವಿಧ ವಿದ್ಯಾಕಲೆಗಳೆಲ್ಲವ
ನರಿತನ – ಶುಭ ಚರಿತನ
ಜನವ ಶಿಕ್ಷಿಸಿ ದ್ವಿಜನ ಕಂದನ
ತಂದನ – ಆನಂದನ||6||

ಸುಮತಿ ಖಳಮಾಗಧನ ಯುದ್ಧದಿ
ಗೆದ್ದನ – ಅನವದ್ಯನ
ದುಮಣಿ ಸಮ ದ್ವಾರಕಿಯ ರಚಿಸಿದು
ದಾರನ – ಗಂಭೀರನ
ಸುಮತಿ ಮುಚುಕುಂದನೊದ್ದ ಯವನನ
ಸುಟ್ಟನ – ಅತಿ ದಿಟ್ಟನ
ವಿಮಲ ಸುಚರಿತ್ರಾಷ್ಟ ಮಹಿಷಿಯ
ರಾಳ್ದನ – ನೆರೆ ಬಾಳ್ದನ||7||

ಮುರನರಕ ಮುಖ್ಯರನು ಚಕ್ರದಿ
ತಂದನ – ಕರಿವರದನ
ಸುರತರುವ ಸತಿಗಾಗಿ ತಂದ ಸ-
ಮರ್ಥನ – ಜಗತ್ಕರ್ತನ
ದುರುಳ ಶಿಶುಪಾಲಾದಿ ದೈತ್ಯ ಸಂ-
ಹಾರನ – ಬಹುಶೂರನ
ಕುರುಕುಲಕೆ ಲಯವಿತ್ತ ಪಾಂಡವ
ಪ್ರೀಯನ – ಕವಿಗೇಯನ||8||

ಇಂತು ಇಳೆಯ ಸುಜನರ ಸಲಹುವ
ಕಾಂತನ – ಸಿರಿವಂತನ
ಪಂಥವುಳ್ಳ ಪ್ರಸನ್ನ ಹಯವ-
ದನನ – ಮುನಿಮಾನ್ಯನ
ಸಂತತವೀ ಸಾರಕಥೆಯನು
ಕೇಳ್ವರ – ನೆರೆಬಾಳ್ವರ
ಕಂತುಷಿತ ಕಾರುಣ್ಯದಿಂದಲಿ
ಪೊರೆವನು – ಸುಖಗರೆವನು||9||
***

Neneve anu dhina neela neeradha varnana guna rananna|

Muni jana priya muddhu udupiya rangana daya paangana||

Devaki jadarodayambudhi chandrana guna Chaandrana
Govrajakesana yamune dhatti bandhana allli nindhana
maavagaluhitha maaya sedavida kondhana chidanandana
devaripu dhaithendriya sakadana otthana sruthi sitthana||1||

gokuladha gopiyara vanchaka chorana bahu dheerana
anega naariyaravasanavanu katthoidhana dhoorathmana
nagiyagari thenuka vathsavi kaathana vigyaathana
kaagumathi kaalingana bana dhulithana ava kolidhana||2||

sailavanu ahisayana beralina andhana balavanthana
chola sasira balayara kara pididhana suthe kudidhana
bale baameya rodane jala kreete kilidhana alli nalidhana
leeleya lala neyari  kishtava kottana santhustana||3||

krura baga kesigalanella seelthana sura raalthana
akrura kareyalu harushadhindhali bandhana sura vandhyana
naari kupjage boori santhasa vitthana adhi sakthana
vaaranavanu kedahidha prathi mallana aadhi selvanaa||4||

sulabha dhindhalisivana thanuvanu muridhana nere meradhana
maledha mallara gedahi rangadhi ninthana jayavanthana
kalakulaagrani kamsa nembana hode dhana hudigedadhana
baladhi thaai thandeyara bandhana kadidhana yase padedhana||5||

buvana pattavanu ukrasenage kottana adhi sreshtana
yuvathi yarigutthavana galuhidha jaanana supravenana
vivitha vidhyaa kalegalellava narithana subha sarithana
javana sikshisi dhvijana kandhana thandhana aanandhana||6||

kumathigala maaga thala yuddhadhi getthana anavathyana
dhyumani samathvaaraagiya rachisithu dhaarana kambeerana
sumathi musukundha nottha yavanana suttana adhi dhittana
vimala sucharithraashta mahishiya raalthana nere paalthana||7||

muranara mukyaranu sakradhi dharitha karivaradhana
sooratharuva sathikaagi thandha samarthana jagath karthana
dhurula sisubaalaadhi dhaithya samhaarana bahu soorana
guru kulage layavittha pandava priyana kavikeyana||8||

indhu salahuva ile sujanarana kaanthana siri vanthana
bandha vulla prasanna hayavadhannana muni maanyana
santhatha vicharaa katheyanu kelvara nere baalvara
kandha pitha kaarunyadhindhali porevanu sukha karevanu||9||
***

ನೆನೆವೆನನುದಿನ ನೀಲನೀರದ
ವರ್ಣನ ಗುಣ ರನ್ನನ ||ಪಲ್ಲವಿ||

ಮುನಿಜನಪ್ರಿಯ ಮುದ್ದು ಉಡುಪಿನ
ರಂಗನ ದಯಾಭರಿತನ ||ಅನುಪಲ್ಲವಿ||

ದೇವಕೀಜಠರೋದಯಾಂಬುಧಿ
ಚಂದ್ರನ - ಗುಣ ಸಾಂದ್ರನ
ಗೋವಜ್ರಕೆ ಘನ ಯಮುನೆ ದಾಟಿ
ಬಂದನ - ಅಲ್ಲಿ ನಿಂದನ
ಮಾವ ಕಳುಹಿದ ಮಾಯಾ ಶಟವಿಯ
ಕೊಂದನ - ಚಿದಾನಂದನ
ದೇವರಿಪು ದೈತ್ಯೇಂದ್ರ ಶಕಟನ
ಒದ್ದನ - ಶ್ರುತಿ ಸಿದ್ಧನ

ಗೋಕುಲದ ಗೋಪಿಯರ ವಂಚಕ
ಚೋರನ - ಬಹು ಧೀರನ
ಅನೇಕ ನಾರಿಯರ್ವಸನವನು ಕ
ದ್ದೊಯ್ದನ - ತುರುಗಾಯ್ದನ
ನಾಕಿಯರಿಗರಿ ಧೇನುಕ ವತ್ಸವಿ
ಘಾತನ - ವಿಖ್ಯಾತನ
ಕಾಕುಮತಿ ಕಾಳಿಂಗನ ಫಣ
ತುಳಿದನ - ಅವಗೊಲಿದನ

ಶೈಲವನು ಅಹಿಶಯನ ಬೆರಳಲಿ
ಆಂತನ - ಬಲವಂತನ
ಸೋಳಸಾಸಿರ ಬಾಲೆಯರ ಕರ
ಪಿಡಿದನ - ಸುಧೆಗುಡಿದನ
ಬಾಲೆ ಭಾಮೆಯರೊಡನೆ ಜಲಕ್ರೀಡೆ
ಗಿಳಿದನ - ಅಲ್ಲಿ ನಲಿದನ
ಲೀಲೆಯಲಿ ಲಲನೆಯರಿಗಿಷ್ಟವ
ಕೊಟ್ಟನ - ಸಂತುಷ್ಟನ

ಕ್ರೂರ ಬಕ ಕೇಶಿಗಳನ್ನೆಲ್ಲ
ಸೀಳ್ದನ - ಸುರರಾಳ್ವನ
ಅಕ್ರೂರ ಕರೆಯಲು ಹರುಷದಿಂದಲಿ
ಬಂದನ - ಸುರವಂದ್ಯನ
ನಾರಿ ಕಬುಜೆಗೆ ಭೂರಿ ಸಂತಸ
ವಿತ್ತನ - ಅತಿಶಕ್ತನ
ವಾರಣವನು ಕೆಡಹಿದ ಪ್ರತಿ
ಮಲ್ಲನ - ಅತಿ ಚೆಲ್ವನ

ಸುಲಭದಿಂದಲಿ ಶಿವನ ಧನುವನು
ಮುರಿದನ - ನೆರೆ ಮೆರೆದನ
ಮಲೆತ ಮಲ್ಲರ ಕೆಡಹಿ ರಂಗದಿ
ನಿಂತನ - ಜಯವಂತನ
ಖಳ ಕುಲಾಗ್ರಣಿ ಕಂಸನೆಂಬನ
ಹೊಡೆದನ - ಹುಡಿಗೆಡೆದನ
ಬಲದಿ ತಾಯಿ ತಂದೆ ಬಂಧನ
ಕಡಿದನ - ಯಶ ಪಡೆದನ

ಭುವನ ಪಟ್ಟವನುಗ್ರಸೇನಗೆ
ಕೊಟ್ಟನ - ಅತಿ ಶ್ರೇಷ್ಠನ
ಯುವತಿಯರಿಗುದ್ಧವನ ಕಳುಹಿದ
ಜಾಣನ - ಸುಪ್ರವೀಣನ
ವಿವಿಧ ವಿದ್ಯಾಕಲೆಗಳೆಲ್ಲವ
ನರಿತನ - ಶುಭ ಚರಿತನ
ಜನವ ಶಿಕ್ಷಿಸಿ ದ್ವಿಜನ ಕಂದನ
ತಂದನ - ಆನಂದನ

ಸುಮತಿ ಖಳಮಾಗಧನ ಯುದ್ಧದಿ
ಗೆದ್ದನ - ಅನವದ್ಯನ
ದುಮಣಿ ಸಮ ದ್ವಾರಕಿಯ ರಚಿಸಿದು
ದಾರನ - ಗಂಭೀರನ
ಸುಮತಿ ಮುಚುಕುಂದನೊದ್ದ ಯವನನ
ಸುಟ್ಟನ - ಅತಿ ದಿಟ್ಟನ
ವಿಮಲ ಸುಚರಿತ್ರಾಷ್ಟ ಮಹಿಷಿಯ
ರಾಳ್ದನ - ನೆರೆ ಬಾಳ್ದನ

ಮುರನರಕ ಮುಖ್ಯರನು ಚಕ್ರದಿ
ತಂದನ - ಕರಿವರದನ
ಸುರತರುವ ಸತಿಗಾಗಿ ತಂದ ಸ-
ಮರ್ಥನ - ಜಗತ್ಕರ್ತನ
ದುರುಳ ಶಿಶುಪಾಲಾದಿ ದೈತ್ಯ ಸಂ-
ಹಾರನ - ಬಹುಶೂರನ
ಕುರುಕುಲಕೆ ಲಯವಿತ್ತ ಪಾಂಡವ
ಪ್ರೀಯನ - ಕವಿಗೇಯನ

ಇಂತು ಇಳೆಯ ಸುಜನರ ಸಲಹುವ
ಕಾಂತನ - ಸಿರಿವಂತನ
ಪಂಥವುಳ್ಳ ಪ್ರಸನ್ನ ಹಯವ-
ದನನ - ಮುನಿಮಾನ್ಯನ
ಸಂತತವೀ ಸಾರಕಥೆಯನು
ಕೇಳ್ವರ - ನೆರೆಬಾಳ್ವರ
ಕಂತುಷಿತ ಕಾರುಣ್ಯದಿಂದಲಿ
ಪೊರೆವನು - ಸುಖಗರೆವನು
****

just scroll down for other devaranama 


No comments:

Post a Comment