Saturday 18 December 2021

ಲೋಕಭರಿತನೋ ರಂಗಾ ನೇಕ ಚರಿತನೋ ankita hayavadana LOKA BHARITANO RANGA NEKA ARITANO







ಲೋಕಭರಿತನೋ ರಂಗಾನೇಕ ಚರಿತನೋ                     ||ಪ||
ಕಾಕುಜನರ ಮುರಿದು ತನ್ನ ಏಕಾಂತ ಭಕ್ತರ ಪೊರೆವ ಕೃಷ್ಣ   ||ಅ.ಪ||

ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-
ರಾಜಸುತನು ಈತನೇ ಸರ್ವ ಪೂಜೆಗರ್ಹನೆನಿಸಿದಾತ        ||೧||

ಮಿಕ್ಕ ನೃಪರ ಜರಿದು ಅಮಿತ ವಿಕ್ರಮ ಯದುವರನೆ ತನಗೆ
ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ       ||೨||

ಜ್ಞಾನಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವನೆನಲು
ಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ              ||೩||

ಉತ್ತರೆಯ ಗರ್ಭದಲ್ಲಿ ಸುತ್ತಿ ಮುತ್ತಿದಸ್ಟ್ರವನ್ನು
ಒತ್ತಿ ಚಕ್ರದಿಂದ ನಿಜ ಭಕ್ತ ಪರೀಕ್ಷಿತನ ಕಾಯ್ದ                     ||೪||

ತನ್ನ ಸೇವಕ ಜನರಿಗೊಲಿದು ಉನ್ನತ ಉಡುಪಿಯಲ್ಲಿ ನಿಂತು
ಘನ್ನ ಮಹಿಮೆಯಿಂದ ಪೊರೆವ ಪ್ರಸನ್ನ ಹಯವದನ ಕೃಷ್ಣ      ||೫||
****

ರಾಗ : ಪೂರ್ವಿಕಲ್ಯಾಣಿ  ತಾಳ : ಛಾಪು (raga, taala may differ in audio)

Lokabaritano ranganeka charitano ||pa||

Kakujanara muridu tanna ekanta Baktara poreva krushna ||a.pa||

Rajasuya yagadalli rajarajariralu dharma-
Rajasutanu itane sarva pujegarhanenisidata ||1||

Mikka nrupara jaridu amita vikrama yaduvarane tanage
Takka ramananendu rukmini ukki maleyikkidalaga ||2||

J~janasunyanagi sokki tane vasudevanenalu
Hina paundrakana Sirava janaraya taridanaga ||3||

Uttareya garbadalli sutti muttidastravannu
Otti chakradinda nija Bakta parikshitana kayda ||4||

Tanna sevaka janarigolidu unnata udupiyalli nintu
Ganna mahimeyinda poreva prasanna hayavadana krushna ||5||
***

 
//ಭಾವೀ ಸಮೀರ ಶ್ರೀ ವಾದಿರಾಜರ ಕೀರ್ತನೆ//

ಲೋಕಭರಿತನೋ ರಂಗಾ ಅನೇಕ ಚರಿತನೋ //ಪ//
ಕಾಕು ಜನರ ತರಿದು ತನ್ನೇಕಾಂತ ಭಕ್ತರ 
ಪೊರೆಯುವ ಕೃಷ್ಣ//ಅ.ಪ.//

ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ/
ರಾಜಸುತನು ಇವನೆ ಸಭಾ
ಪೂಜ್ಯನೆಂದು ಮನ್ನಿಸಿದನು//೧//

ಮಿಕ್ಕ ನೃಪರ ಜರಿದು ಅಮಿತ /
ವಿಕ್ರಮದಿ ಯದುವರನೆ ತನ್ನ/
ತಕ್ಕ ರಮಣನೆಂದು ರುಕ್ಮಿಣಿ
ಉಕ್ಕಿ ಮಾಲೆ ಹಾಕಿದಳಾಗ//೨//

ಜ್ಞಾನ ಶೂನ್ಯನಾಗಿ ಸೊಕ್ಕಿಲೆ
ತಾನೆ ವಾಸುದೇವನೆನಲು/
ಹೀನ ಪೌಂಡ್ರಕನ ಶಿರವ/
ಜಾಣರರಸ ತರಿದನಾಗ //೩//

ಉತ್ತರೇಯ ಗರ್ಭದಲ್ಲಿ
ಸುತ್ತು ಸುಳಿವ‌ ಅಸ್ತ್ರವಿರಲು /
ಮತ್ತೆ ಚಕ್ರದಿಂದೊಳೊತ್ತಿ
ಪರಿಕ್ಷಿತನ ಪೊರೆದನಾಗ//೪//

ತನ್ನ ದಾಸಜನರಿಗೊಲಿದು
ಉನ್ನತ ಉಡುಪಿಯಲಿ ನಿಂತು
ಘನ್ನ ಮಂದಿರ ಮಾಡಿಕೊಂಡು
ಸುಪ್ರಸನ್ನ ಹಯವದನ ಕೃಷ್ಣಾ//೫//

ಶ್ರೀ ವಾದಿರಾಜ ಗುರುಭ್ಯೋ ನಮಃ//
*******

No comments:

Post a Comment