ರಚನೆ.ಹರಪನಹಳ್ಳಿ ಭೀಮವ್ವನವರು.
ಸ್ಮರಿಸಿ ಬದುಕಿರೋ ಸರ್ವನಂದಗುರುಗಳ
ನಿರುತದಿಂದೆ ಇಷ್ಟಫಲವ ನೀಡೊವರಗಳಾ ಬೇಡಿ||ಪಲ್ಲ||
ಆದಿಕಲ್ಲಿನಲ್ಲೆ ಮಹಾದೇವ ಕರಿಯೆ ಬಂದು ನಿಂತು
ಶ್ರೀ ದೇವಿರಮಣನ್ನಮುದ್ದು
ಪಾದಾಂಬುಜವ ಪೂಜಿಸುವರು,||೧/
ಉತ್ತಮವಾಗಿದ್ದ ದಿವ್ಯ ಛತ್ರವಿಜಯತೀರ್ಥನಿರ್ಮಿಸಿ
ನಿತ್ಯದಲ್ಲಿ ಮೃಷ್ಟಾನ್ನ ದಾನವಿಸ್ತಾರವನೆ ಪೇಳಲೊಶವೆ||೨|
ಕುಷ್ಠರೋಗ ವ್ಯಾಧಿ ಜ್ವರ ಚತುರ್ಥಿಭಯ ಭೀತಿಗಳನ್ನೆಲ್ಲ
ಬಿಟ್ಟೋಡಿಸಿ ತೀರ್ಥಂಗಾರದಲಿ
ಸಮಸ್ತರ ಮಹಿಮೆಯ ನೋಡಿ||೩||
ಸಂತಾನ ಸಾಯುತದ ಫಲವ
ನಿಂತು ಕೊಡುತಮಂತ್ರಾಕ್ಷತೆಯ
ಗ್ರಂಥಪದ ಸುಳಾದಿಯಲಕ್ಷ್ಮೀಕಾಂತಗೆಮಾಡರ್ಪಿಸುವರ||೪||
ಹರಿಯ ದಿವ್ಯಾಹಾಸಿಕೆಯ ನಾಮ ಗುರುವಿಜಯರಾಯರಪ್ರೇಮ
ಪಡೆದು ಭೀಮೇಶಕೃಷ್ಣನಂಘ್ರಿ
ಬಿಡದೆ ಭಜನೆ ಮಾಡುವವರ||೫||
************
No comments:
Post a Comment