Wednesday, 17 November 2021

ಮಂತ್ರಾಲಯ ನಿವಾಸ ಉತ್ತಮ ಹಂಸ ಸಂತಾಪ ankita vijaya vittala MANTRALAYA NIVASA UTTMA HAMSA SANTAAPA



ಮಂತ್ರಾಲಯನಿವಾಸ ಉತ್ತಮ ಹಂಸ |
ಸಂತಾಪ ಪರಿಹರಿಸ ಕೊಡು ಎನಗೆ ಲೇಸÀ ಪ

ಯತಿಗಳ ಶಿರೋರನ್ನ ಯೋಗಸಂಪನ್ನ |
ಕ್ಷಿತಿಯೊಳಗೆ ನಿನಗೆ ಸರಿಗಾಣೆನೊ ||
ನುತಿಸುವೆ ಭಕ್ತಿಯಲಿ ಬಿಡದೆ |
ಮುಕುತಿಯಲಿ ಸತತಾನಂದದಲಿಪ್ಪ 1

ಕಪಿಲ ತೀರ್ಥದಲಿ ಶರಣ ಶುದ್ಧಿಯಲ್ಲಿ |
ತÀಪವ ಮಾಡುವ e್ಞÁನಿ ಸೌಮ್ಯಜ್ಞಾನಿ ||
ಕೃಪೆಮಾಡಿ ಕೊಡು ಗುರುವೆ ಶಿಷ್ಯಸುರತÀರುವೆ 2

ತಮೋಗುಣ ಕಾರ್ಯ ಪೋಗಲಾಡು ವ್ಯಾಪ್ತಿಯಾ |
ಶಮೆದಮೆಯಲ್ಲಿ ಉಳ್ಳ ಮಹಿಮೆಯಾ ||
ನಮಗೆ ಪೇಳುವೆ ವೇದಬಲ್ಲ ವಿನೋದ |
ಸುಮನ ಸುಗುಣವ ಮೆಚ್ಚೆ ದುರ್ಮತಕೆ ಕಿಚ್ಚೆ 3

ಕಾಶಿ ಸೇತುವೆ ಮಧ್ಯೆ ಮೆರೆವೇ ಜನರಲ್ಲಿ |
ಭೇದ ವಿದ್ಯಾ ಸಜ್ಜನಕೆ ತಿಳಿಸು ಮನಸು ನಿಲ್ಲಿಪೆ ||
ಪೋಷಿಸುವೆ ಅವರ ಅಟ್ಟುವ ಮಹದುರ |
ದೋಷವ ಕಳೆವಂಥ ವಿಮಲ ಶಾಂತ4

ವರಹಜ ತೀರದಲ್ಲಿದ್ದ ಸುಪ್ರಸಿದ್ದ |
ಮರುತ ಮತಾಂಬುಧಿ ಸೋಮ ನಿಸ್ಸೀಮ ||
ನರಸಿಜಾಪತಿ ನಮ್ಮ ವಿಜಯವಿಠ್ಠಲನಂಘ್ರಿ |
ಸ್ಮರಿಸುವ ಸುಧೀಂದ್ರ ಸುತ ರಾಘವೇಂದ್ರ 5
***

Mantralaya nivasa – uttama hamsa
Santapa pariharisi kodu janake lesa || pa ||

Yatigala siroranna – yoga sampanna
Kshitiyolage ninage sari kaneno
Nutisuvenu Baktiyali bidade
Mukutiyali satatanandadalippa – j~janavirali tappa || 1 ||

Kapila tirthadalli – karana Suddhiyalli
Tapava maduva mauni – saumya j~jani
Japasila gunambudhi – punyada budhdhi
Krupe madi kodu guruve – sishya surataruve || 2 ||

Tamoguna karya – pogaladu vyaptiya
Same dameyali ulla mahimeyu
Namage peluva veda – balla vinoda
Sumana sugunava mecci – durmatake kicca || 3 ||

Kasi setuve madhya mereva beda vi-
Dya sajjanake tilupe – manasu nilipe
Poshisuve avara – attuva mahadura
Doshava kalevantha – vimalakalasanta || 4 ||

Varahaja tiradalidda – suprasidhdha
Marutamatambudhi – soma nissima
Sarasijapati namma vijayaviththalanangri
Smarisuva sudhi0drasuta – ragavendra || 5 ||
***

pallavi

mantrAlaya nivAsa uttama hamsa santApa pariharisi koDu enagalEsa

caraNam 1

yatigaLa shirOranna yOga sampanna kSitiyoLage nimma ninange sarigANenno
nutusuve bhaktiyeli biDade mukutiyeli santatAnadadalippa

caraNam 2

kapila tIrthadalli karaNa shuddiyelli tapava mADuva jnAni saumya jnAni
japa shIla guNa gaNAmbudhi puNyada buddhi krpe mADi koDu guruvE shiSya sura taruve

caraNam 3

tamOguNa kArya pOgalADu vyAptiyA shamedamyali uLLa mahimeya
namage pELuva vEdaballa vinOda sumana suguNava mecce durmatake kicce

caraNam 4

kAsi sEtuve madhye mereve janaralli bhEda vidya sajjanakke tiLisu manasu nillipe
pOSisuva kaLevanta vimala shAnta

caraNam 5

varahaja tIradalliddha suprasalliddha maruta matAmbudhi sOma nissIma
sarasijApati namma vijayaviThananghri smsrisuva sudhIndra suta rAghavEndra
***

ಮಂತ್ರಾಲಯ ನಿವಾಸ – ಉತ್ತಮ ಹಂಸ
ಸ೦ತಾಪ ಪರಿಹರಿಸಿ ಕೊಡು ಜನಕೆ ಲೇಸ        || ಪ ||
ಯತಿಗಳ ಶಿರೋರನ್ನ – ಯೋಗ ಸ೦ಪನ್ನ
ಕ್ಷಿತಿಯೊಳಗೆ ನಿನಗೆ ಸರಿ ಕಾಣೆನೊ
ನುತಿಸುವೆನು ಭಕ್ತಿಯಲಿ ಬಿಡದೆ
ಮುಕುತಿಯಲಿ ಸತತಾನ೦ದದಲಿಪ್ಪ – ಜ್ಞಾನವಿರಲಿ ತಪ್ಪ    || ೧ ||
ಕಪಿಲ ತೀರ್ಥದಲ್ಲಿ – ಕರಣ ಶುದ್ಧಿಯಲ್ಲಿ
ತಪವ ಮಾಡುವ ಮೌನಿ – ಸೌಮ್ಯ ಜ್ಞಾನಿ
ಜಪಶೀಲ ಗುಣಾ೦ಬುಧಿ – ಪುಣ್ಯದ ಬುಧ್ಧಿ
ಕೃಪೆ ಮಾಡಿ ಕೊಡು ಗುರುವೆ – ಶಿಷ್ಯ ಸುರತರುವೆ        || ೨ ||
ತಮೋಗುಣ ಕಾರ್ಯ – ಪೋಗಲಾಡು ವ್ಯಾಪ್ತಿಯಾ
ಶಮೆ ದಮೆಯಲಿ ಉಳ್ಳ ಮಹಿಮೆಯೂ
ನಮಗೆ ಪೇಳುವ ವೇದ – ಬಲ್ಲ ವಿನೋದ
ಸುಮನ ಸುಗುಣವ ಮೆಚ್ಚಿ – ದುರ್ಮತಕೆ ಕಿಚ್ಚ        || ೩ ||
ಕಾಶಿ ಸೇತುವೆ ಮಧ್ಯ ಮೆರೆವ ಭೇದ ವಿ-
ದ್ಯ ಸಜ್ಜನಕೆ ತಿಳುಪೆ – ಮನಸು ನಿಲಿಪೆ
ಪೋಷಿಸುವೆ ಅವರ – ಅಟ್ಟುವ ಮಹದುರ
ದೋಷವ ಕಳೆವ೦ಥ – ವಿಮಲಖಲಶಾ೦ತ        || ೪ ||
ವರಹಜ ತೀರದಲಿದ್ದ – ಸುಪ್ರಸಿಧ್ಧ
ಮರುತಮತಾ೦ಬುಧಿ – ಸೋಮ ನಿಸ್ಸೀಮ
ಸರಸಿಜಪತಿ ನಮ್ಮ ವಿಜಯವಿಠ್ಠಲನ೦ಘ್ರಿ
ಸ್ಮರಿಸುವ ಸುಧೀ೦ದ್ರಸುತ – ರಾಘವೇ೦ದ್ರ         || ೫ |
*********


ವಿಜಯದಾಸ

No comments:

Post a Comment