Thursday, 14 November 2019

ಬಲ್ಲವರು ಮೊರೆ ಹೋಗುವರೆ ankita prasannavenkata

by ಪ್ರಸನ್ನವೆಂಕಟದಾಸರು
ಬಲ್ಲವರು ಮೊರೆ ಹೋಗುವರೆ ನೀನಾವಬಲ್ಲಿದನೆಂದೆನ್ನನುಪೇಕ್ಷಿಪೆ ರಂಗ ಪ.

ಸಲ್ಲದವನು ಸಾಲಗೂಳಿ ನೀ ಎಂದೆನ್ನಕ್ಷುಲ್ಲನ ಮಾಡಿ ನೀಕರಿಸದಿರೊಒಳ್ಳೆ ಸತ್ಯವ್ರತರ ಋಣ ನುಂಗಿ ಸೆರೆಸಿಕ್ಕಿಕಲ್ಹೊತ್ತು ಪುಲ್ಗಚ್ಚಿ ಹಲ್ದೆರೆದೆ ನೀನು 1

ಬೇಡಿ ತಿರಿದು ಉಂಬ ಬಡವ ಛೀ ಸಾರೆಂದೀಡಾಡುವುದುಚಿತೆ ನೀ ನೃಪನೊಂಚಿಸಿಬೇಡಿ ಮನೆಯ ಕೊಂಡೆ ನೀರಿನರಸನಲ್ಲಿರೂಢಿಯ ಗೂಡ ಬಿಟ್ಟೋಡಿದೆತುಡುಗ2

ನಾ ದೋಷಪೂರ್ಣನೆನುತ ಮನ ಬಲ್ಲದುನೀ ದೋಷದೂರನುಶ್ರುತಿಬಲ್ಲವುಭೂದೋಷಹರ ಪ್ರಸನ್ವೆಂಕಟೇಶ ತಿಳಿಯದೆನಾ ದಾಸನಾದೆ ನಾಮಸ್ವಾದಕ್ಹುಚ್ಚಾದೆ 3
*******

No comments:

Post a Comment