by ಪ್ರಸನ್ನವೆಂಕಟದಾಸರು
ರಾಗ - : ತಾಳ -
ಪಾಹಿಮಾಂ ಪಾಹಿ ಸೀತಾಪತೆ ll ಪ ll
ವಾಣೀಧವ ಪಿತ ಘೋಣಿ ರಥಪದ
ಪಾಣಿ ನಂದಕೃಪಾಣಿ ಜಯ ಜಯ
ಕ್ಷೋಣಿವಲ್ಲಭ ಕ್ಷೋಣಿಸುತಾ
ಚಿ
ದ್ಗೌಣ ವರಾಹಾಗ್ರಣಿ ಶ್ರೀರಾಮ ll 1 ll
ರಾಜಕುಲಾಂಬುಧಿ ರಾಜಾರಮಣ
ರಾಜ ತೇಜ ವೈರಾಜ ಜಯ ಜಯ
ರಾಜಸೂಯಾರ್ಚಿತ ರಾಜೇಶ್ವರ ಸುರ
ರಾಜಾನುಜ ರಘುರಾಜ ಶ್ರೀರಾಮ ll 2 ll
ಮಂದರಧರ ನಿಜಸುಂದರ ಚಿನ್ಮಯ
ಮಂದಿರ ನಿತ್ಯಾನಂದ ಜಯ ಜಯ
ವೃಂದಾವನಚರ ವೃಂದಾರಕ ಮುನಿ
ವೃಂದ ನೃಪಾನ್ವಯವಂದ್ಯ ಶ್ರೀರಾಮ ll 3 ll
ನಾಲ್ಕನೇ ನುಡಿ ದೊರೆತಿಲ್ಲ
ಶ್ರೀಪದ ಶ್ವೇತದ್ವೀಪನಿಲಯ ಶೃತಿ
ತಾಪಹರಣ ನಿರ್ಲೇಪ ಜಯ ಜಯ
ಶ್ರೀ ಪ್ರಸನ್ವೆಂಕಟ ಭೂಪತಿ ಭುವನ
ವ್ಯಾಪಕ ಪೂರ್ಣಪ್ರತಾಪ ಶ್ರೀರಾಮ ll 5 ll
ಶ್ರೀಪ್ರಸನ್ನವೆಂಕಟ ದಾಸರ ರಚನೆ
***
ವಾಣೀಧವ ಪಿತ ಘÉೂೀಣಿ ರಥಪದಪಾಣಿನಂದಕೃಪಾಣಿ ಜಯ ಜಯಕ್ಷೋಣಿವಲ್ಲಭ ಕ್ಷೋಣಿಸುತಾಚಿದ್ಗೌಣ ವರಾಹಾಗ್ರಣಿ ಶ್ರೀರಾಮ 1
ರಾಜಕುಲಾಂಬುಧಿ ರಾಜಾರಮಣರಾಜತೇಜವೈರಾಜ ಜಯ ಜಯರಾಜಸೂಯಾರ್ಚಿತ ರಾಜೇಶ್ವರ ಸುರರಾಜಾನುಜ ರಘುರಾಜ ಶ್ರೀರಾಮ 2
ಮಂದರಧರನಿಜಸುಂದರ ಚಿನ್ಮಯಮಂದಿರ ನಿತ್ಯಾನಂದ ಜಯ ಜಯವೃಂದಾವನಚರವೃಂದಾರಕಮುನಿವೃಂದ ನೃಪಾನ್ವಯವಂದ್ಯ ಶ್ರೀರಾಮ 3* . . * . . * . . * . . * 4
ಶ್ರೀಪದ ಶ್ವೇತದ್ವೀಪನಿಲಯಶ್ರುತಿತಾಪಹರಣ ನಿರ್ಲೇಪ ಜಯ ಜಯಶ್ರೀ ಪ್ರಸನ್ವೆಂಕಟ ಭೂಪತಿಭುವನವ್ಯಾಪಕ ಪೂರ್ಣಪ್ರತಾಪ ಶ್ರೀರಾಮ 5
*******
No comments:
Post a Comment