Tuesday, 19 November 2019

ಮಹದೇವಾ ಮಹದೇವಾ ankita pranesha vittala

ಮಹದೇವಾ ಮಹದೇವಾ |
ಕಾಯೋ ಮಹದೇವ ಎನ್ನನೀ ||

ನೋಯಗೊಡದೆ ತ್ವರ |
ಪಾವನ ಮಾಡಿ
ಅಸಮ ರಕ್ಕಸಗೆ |
ವಶವಾಗೆ ವನನುಬಿಸಜಾಕ್ಷಗೆ ಒಪ್ಪಿಸಿ |
ಕೊಲಿಸಿದನೇ||1||

ನಂಜುಂಡರಗಿಸಿ |
ದಂಜನೆ ಕುವರ ಪ್ರ ||
ಭಂಜನ ಸುತನಾನಂಜುವೆನೀಗಾ ||2||

ಸೂಸುವ ಭವಶರ |
ದೀಸದೆ ಗುರು ಪ್ರಾ ||
ಣೇಶ ವಿಠ್ಠಲನ |ದಾಸ ಮುಣುಗುವೆ ||3|
********

No comments:

Post a Comment