Friday, 5 November 2021

ಎಂಥ ಮಹಿಮ ಏನು ಚಲುವನೆ ಶ್ರೀ ಉಡುಪಿ ನಿಲಯ ankita gopalakrishna vittala ENTHA MAHIMA ENU CHALUVANE SRI UDUPI NILAYA



ಎಂಥ ಮಹಿಮ ಏನು ಚಲುವನೆ ಶ್ರೀ ಉಡುಪಿ ನಿಲಯ || ಪ||

ಎಂಥ ಮಹಿಮ ಏನು ಚಲುವ ಕಂತುಪಿತ ಶ್ರೀ ಬಾಲಕೃಷ್ಣ
ಶಾಂತಯತಿಗಳಿಂದ ಪೂಜಿತ ನಿಂತ ಮಧ್ವಮುನಿಕರಾರ್ಚಿತ ||ಅ.ಪ||

ಕಂಡ ಕ್ಷಣದಿ ಮಂಡೆ ಬಾಗಿದ
ಹಿಂಡು ಭಕ್ತರಘ ಕಳೆವ
ಪುಂಡರೀಕ ನೇತ್ರ ಕನಕ-
ಕಿಂಡಿಯಲ್ಲಿ ಕಾಂಬ ರೂಪ||1||

ಬಾಲರೆಂಟು ಯತಿಗಳಿಂದ
ಲೀಲೆಯಿಂದ ಪೂಜೆಗೊಂಬ
ಲೀಲಮಾನುಷರೂಪ ರುಕ್ಮಿಣಿ
ಲೋಲ ಲೋಕಪಾಲ ಜಾಲ ||2||

ಕಾಲಕಾಲದ ಪೂಜೆಗೊಂಬ
ಬಾಲತೊಡಿಗೆ ಧರಿಸಿಕೊಂಬ
ವ್ಯಾಳಶಯನ ಮುದ್ದುಮುಖ ಗೋ
ಪಾಲಕೃಷ್ಣವಿಠ್ಠಲನೀತ ||3||
****

ಎಂಥ ಮಹಿಮ ಏನು ಚಲುವನೆ ಶ್ರೀ ಉಡುಪಿ ನಿಲಯ ಪ.

ಎಂಥ ಮಹಿಮ ಏನು ಚಲುವ ಕಂತುಪಿತ ಶ್ರೀ ಬಾಲಕೃಷ್ಣ
ಶಾಂತಯತಿಗಳಿಂದ ಪೂಜಿತ ನಿಂತ ಮಧ್ವಮುನಿಕರಾರ್ಚಿತ ಅ.ಪ.

ಕಂಡ ಕ್ಷಣದಿ ಮಂಡೆ ಬಾಗಿದ
ಹಿಂಡು ಭಕ್ತರಘ ಕಳೆವ
ಪುಂಡರೀಕ ನೇತ್ರ ಕನಕ-
ಕಿಂಡಿಯಲ್ಲಿ ಕಾಂಬ ರೂಪ1
ಬಾಲರೆಂಟು ಯತಿಗಳಿಂದ
ಲೀಲೆಯಿಂದ ಪೂಜೆಗೊಂಬ
ಲೀಲಮಾನುಷರೂಪ ರುಕ್ಮಿಣಿ
ಲೋಲ ಲೋಕಪಾಲ ಜಾಲ 2
ಕಾಲಕಾಲದ ಪೂಜೆಗೊಂಬ
ಬಾಲತೊಡಿಗೆ ಧರಿಸಿಕೊಂಬ
ವ್ಯಾಳಶಯನ ಮುದ್ದುಮುಖ ಗೋ
ಪಾಲಕೃಷ್ಣವಿಠ್ಠಲನೀತ 3
*****

No comments:

Post a Comment