ankita ನರಸಿಂಹವಿಠಲ (1)
ರಾಗ: [ಶಂಕರಾಭರಣ] ತಾಳ: [ರೂಪಕ]
ನೋಡಿದ್ಯಾ ನೋಡಿದ್ಯಾ ಪ
ನೋಡಿದ್ಯಾ ಶ್ರೀ ಗುರುಗಳನ್ನು ಈಡ್ಯಾಡಿ ಕೊಂಡಾಡಿದ್ಯಾ ಆಹಾ
ನೋಡಿ ಮನದಲ್ಲಿ ಕೊಂಡಾಡುತ್ತ ಗುರುಗಳ
ರೂಢಿವಳಗೆಲ್ಲ ಈಡಿಲ್ಲ ಯತಿಗಳ ಅ.ಪ
ನಿಂತರೆದುರಲ್ಲೆ ಮುಖ್ಯ ಪ್ರಾಣಾ ಜಗ-
ದಂತರದೊಳಗೆಲ್ಲ ಅತಿ ಪ್ರಾಣಾ
ಅಂತರಂಗದಲ್ಲಿ ಶಾಂತ ಮೂರುತಿಗಳು
ಮಂತ್ರಾಲಯದಲ್ಲಿ ನಿಂತಿದ್ದ ಗುರುಗಳಾ * 1
ಹೊದ್ದ ಕಾವೀಶಾಠಿಯಿಂದಾ ಶ್ರೀ-
ಮುದ್ರೆ ಹಚ್ಚಿದ ದೇಹದಿಂದಾ
ಮಧ್ಯದಿ ಕೇಸರಿ ಗಂಧಾ ಬಲು
ಮುದ್ದು ಸುರಿವನಾಮದಿಂದಾ
ತಿದ್ದಿದ ಅಂಗಾರ ಮುದ್ರೆಯೊಳಕ್ಷತೆ
ಎದ್ದು ಬರೂವಂಥ ಮುದ್ದು ಗುರೂಗಳಾ 2
ಮುದ್ದು ಬೃಂದಾವನದ ಮಾಟ ಅ-
ಲ್ಲಿದ್ದು ಜನರ ಓರೆನೋಟ ಪ್ರ-
ಸಿದ್ಧ ರಾಯರ ಪೂರ್ಣನೋಟ ನಮ್ಮ-
ಲ್ಲಿದ್ದ ಪಾಪಗಳೆಲ್ಲ ಓಟ
ಹದ್ದು ವಾಹನ ನರಸಿಂಹವಿಠಲಾ ಅ-
ಲ್ಲಿದ್ದು ವರವ ಕೊಡುವ ಗೋಪಾಲಕೃಷ್ಣನ್ನಾ 3
***
1ನೆಯ ನುಡಿಯಲ್ಲಿ 2 ಸಾಲು ಬಿಟ್ಟುಹೋಗಿರುವಂತಿದೆ
No comments:
Post a Comment