Saturday 4 December 2021

ನೂರೆಂಟು ನೆನೆದು ಫಲವೇನು ಈರೇಳು ಜಗದೊಡೆಯ ಹರಿಯ ankita hayavadana NOORENTU NENEDU PHALAVENU EERELU JAGADODEYA HARIYA


ನೂರೆಂಟು ನೆನೆದು ಫಲವೇನು ಈರೇಳು ಜಗದೊಡೆಯಾ 

ಹರಿಯನು ಒಮ್ಮೆ ನೆನೆ ಮನವೆ  ||ಪ|| 


ಧನದಾಸೆಗಳಲದಿರು ಭವದುಃಖ ಬಳಲದಿರು 

ಜನಾರ್ದನನ ಮರೆಯದಿರು ಈ ತನುವ ಪೊರೆಯದಿರು || 

ಅನಘ ಜನರ ಒಡನಾಡು ದಿನ ದಿನ ಶುಭವ

ಕೊಡು ಇನಿತು ಜನುಮವೇ ಸಾಕು ಇನ್ನು ಮುಕುತಿಯೆ ಬೇಕು ||೧||


ಸಾಕು ದುರ್ಜನರಾಟ ಸಾಕು ಸತಿಯರ ಬೇಟ ಸಾಕು ಸವಿ ಅನ್ನದೂಟ

ಸಾಕೂ ಘನಕೂಟ || ಸಾಕು ದೇಶಕೆ ಓಟ ಸಾಕುಸಲೆ ಭವನೋಟ ಸಾಕದೆಲ್ಲ

ಖಳಕೂಟ ಸಾಕೂ ಮನೆಮಠ ||೨||


ಕೇಳು ಹರಿ ಮಹಿಮೆಯನು ಪೇಳು ಹರಿನಾಮವನು ಬಾಳು ಬಂದಷ್ಟರಿಂದ

ತಾಳು ಹಸಿ ತೃಷೆಗಳ || ಶ್ರೀ ಲಲನೆಯಾಳ್ದ ಹಯವದನ ಸಿರಿ ನರಹರಿಯ ಆಳು

ತನವನು ಬೇಡು ಕೀಳು ಬುದ್ದಿಯ ದೂಡು ||೩||

***


nUreMTu nenedu PalavEnu IrELu jagadoDeyA 

hariyanu omme nene manave  ||pa|| 


dhanadAsegaLaladiru BavaduHKa baLaladiru 

janArdanana mareyadiru I tanuva poreyadiru || 

anaGa janara oDanADu dina dina SuBava

koDu initu janumavE sAku innu mukutiye bEku ||1||


sAku durjanarATa sAku satiyara bETa sAku savi annadUTa

sAkU GanakUTa || sAku dESake OTa sAkusale BavanOTa sAkadella

KaLakUTa sAkU manemaTha ||2||


kELu hari mahimeyanu pELu harinAmavanu bALu baMdaShTariMda

tALu hasi tRuShegaLa || SrI lalaneyALda hayavadana siri narahariya ALu

tanavanu bEDu kILu buddiya dUDu ||3||

***

ನೂರೆಂಟು ನೆನೆದು ಫಲವೇನು ಈರೇಳು ಜಗದೊಡೆಯಹರಿಯನೊಮ್ಮೆ ನೆನೆ ಮನವೆ ಪ.


ಧನದಾಸೆಗಳಲದಿರು ಭವದುಃಖ ಬಳಲದಿರುಜನಾರ್ದನನ ಮರೆಯದಿರು ಈ ತನುವ ಪೊರೆಯದಿರುಅನಘಜನರೊಡನಾಡು ದಿನದಿನ ಶುಭವಕೂಡುಇನಿತು ಜನಮವೆ ಸಾಕು ಇನ್ನು ಮುಕುತಿಯೆ ಬೇಕು 1


ಸಾಕು ದುರ್ಜನÀರಾಟ ಸಾಕು ಸತಿಯರ ಬೇಟಸಾಕು ಸವಿಯನ್ನದೂಟ ಸಾಕು ಘನಕೂಟಸಾಕು ದೇಶಕೆವೋಟ ಸಾಕು ಸಲೆ ಭವನೋಟಸಾಕದೆಲ್ಲ ಖಳಕೂಟ ಸಾಕುಮನೆ[ಮಠ] 2


ಕೇಳು ಹರಿಮಹಿಮೆಯನು ಪೇಳು ಹರಿನಾಮವನುಬಾಳು ಬಂದಷ್ಟರಿಂದ ತಾಳು ಹಸಿತೃಷೆಗಳಶ್ರೀಲಲನೆಯಾಳ್ದ ಹಯವದನ ಸಿರಿನರಹರಿಯಆಳುತನವನು ಬೇಡು ಕೀಳು ಬುದ್ಧಿಯ ದೂಡು 3

***


No comments:

Post a Comment