Saturday, 11 December 2021

ಎಂತು ಪೊಗಳಲಿ ಜಗನ್ನಾಥದಾಸರನ ankita gurushreesha vittala ENTU POGALALI JAGANNATHADASARANA JAGANNATHA DASA STUTIH



 " ಶ್ರೀ ಜಗನ್ನಾಥದಾಸರ ಸಂದರ್ಶನ " 

ಶ್ರೀ ಶ್ರೀಶವಿಠ್ಠಲರಿಂದ ಅಂಕಿತವನ್ನು ಪಡೆದು ತಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀ ಜಗನ್ನಾಥದಾಸರ ಸನ್ನಿಧಾನಕ್ಕೆ ಬಂದು ಭಕ್ತಿ ಶ್ರದ್ಧೆಗಳಿಂದ ಅವರ ಸೇವೆಯನ್ನು ಮಾಡಿ ಅವರನ್ನು ಸ್ತೋತ್ರ ಮಾಡುತ್ತಿದ್ದಾರೆ. 

ಎಂತು ಪೊಗಳಲಿ 

ಜಗನ್ನಾಥದಾಸರನ ।

ಕಂತುಪಿತ ಒಲಿದವರನ 

ಅಂತರಂಗದಿ ಪೊಳೆವ ।। ಪಲ್ಲವಿ ।। 


ಶ್ರೀ ರಮಾದೇವಿ ಪತಿಯೊಡನೆ 

ಇವರಲಿ ನಿಂತು ।

ಈರೆರಡು ದೇಹ ಅವ್ಯಕ್ತ ಸಹಿತ ।

ಆರು ನಾಲಕು ತತ್ತ್ವದ-

ಭಿಮಾನಿಗಳ ಕೂಡಿ ।

ಮೂರು ಗುಣ ಕಾರ್ಯಗಳ ಮಾಡಿ 

ತೋರ್ಪರು ಸುಖವ ।। ಚರಣ ।। 


ಚತುರಮುಖ ವಾಯು 

ನಿಜ ಸತಿಯರಿಂದೊಡಗೂಡಿ ।

ಇತರ ದೇವತೆಗಳು ಸತತ ಇದ್ದು ।

ವಿಹಿತ ಮಹಿಮನ 

ಸೇವಿಸುತಲಿ ಸುಜ್ಞಾನವನು ।

ಹಿತದಿಂದಲಿವರಿಗಿತ್ತತಿ 

ತೋಷ ಪಡಿಸುವರು ।। ಚರಣ ।। 


ಕರಣ ಮಾನಿಗಳು ಶಿವ ಇಂದ್ರ  

ಸೂರ್ಯರು ತಾವು ।

ಇವರಧೀಷ್ಠಾನದಲಿ 

ಹರಿಯನರ್ಚಿಸೀ ।

ಸುರ ನರರ ತರತಮವ 

ಪಂಚಭೇದವನರುಪಿ ।

ಹರಿದಾಸ್ಯವನು ಇತ್ತು ಅರ 

ದೂರವೆನಿಸುವರಾ ।। ಚರಣ ।। 


ಈ ಪರಿ ನಿರಂತರದಿ 

ಅಪಾದಮೌಳಿ । ತವ ।

ಕಾಪಯೋಜಜ 

ಮುಖರ ರೂಪಗಳಲಿ ।

ಆ ಪರಮ ಪುರುಷನ 

ಸುವ್ಯಾಪಾರ ನೋಡುತಲಿ ।

ಅಪಾರ ಮಹಿಮನ 

ಸ್ವರೂಪ ಸ್ಮರಿಸುತಲಿ ।। ಚರಣ ।। 


ಈ ಸುಮನಸರ ಮಹಿಮೆ 

ಸೋಸಿನಲಿ ತಿಳಿದವರ ।

ದಾಸನಾದವನ ಅಘ  

ನಾಶವಹುದು ।

ಕಾಸಿನಾಶೆಗೆ ನರರ 

ದಾಸನಾದವನು । ಗುರು ।

ಶ್ರೀಶವಿಠ್ಠಲನ ನಿಜ 

ದಾಸರನು ಬಲ್ಲನೆ ।। ಚರಣ ।।

****

No comments:

Post a Comment