Wednesday, 1 September 2021

ಜಯ ಜಯವೆನ್ನಿರಯ್ಯ ಜ್ಯೋತಿರ್ಮಯಗೆ ಜಯಜಯವೆನ್ನಿರೊ ankita mahipati

 ಜಯಜಯವೆನ್ನಿರಯ್ಯ ಜ್ಯೋತಿರ್ಮಯಗೆ ಜಯಜಯವೆನ್ನಿರೊ ಜಯಜಯವೆನ್ನಿರೊ ಪ 


ಕಂಗಳದೆರಸಿ ಅಂತರಂಗದೋರಿದವಗೆ ಮುಂಗಡÀಲೆ ಇದ್ದು ಸುಸಂಗದೋರಿದವಗೆ ಹಿಂಗಿಸೆನ್ನ ಭವಭಯ ಭಂಗಮಾಡಿದವಗೆ ಮಂಗಳಾತ್ಮಕನ ಸಂಗಸುಖ ಬೀರಿದವಗೆ 1 

ಆರು ಅರಿಯದ ವಸ್ತು ಸಾರಿದೋರಿದವಗೆ ಶಿರದಲಿ ಕರವಿಟ್ಟು ಕರುಣಿಸಿದವಗೆ ಮೂರುಗುಣಕೆ ಮೀರಿದ ತಾರಕ ಗುರುವಿಗೆ ಸಾರವಾಡದಲಿ ನಿಂದು ಪಾರದೋರಿದವಗೆ 2 

ಸೋಹ್ಯ ಸೊನ್ನೆಯದೋರಿಸಿನ್ನು ಸಾಹ್ಯ ಮಾಡಿದವಗೆ ಗುಹ್ಯ ಗುರುತ ತೋರಿದ ಗುರುಮೂರ್ತಿಗೆ ಕೈಪಿಡಿದು ಮಹಿಪತಿಗೆ ದಯಮಾಡಿದವಗೆ 3

***


No comments:

Post a Comment