Wednesday, 1 September 2021

ಕರುಣಿಸಲಾರೆಯಾ ಇನ್ನಷ್ಟು ನೀ ಸಿರಿಪತಿಯಾ ankita gadugina veeranarayana

 ..

kruti by ವೀರನಾರಾಯಣ Veeranarayana 


ಕರುಣಿಸಲಾರೆಯಾ ಇನ್ನಷ್ಟು ನೀ ಸಿರಿಪತಿಯಾ ಪ


ಕರುಣಿಸಲಾರೆಯಾ ಕರುಣಾಕರನೆಂಬೊಬಿರುದನುಳಿಸಿಕೊಳ್ಳಲಾರೆಯಾ ನೀನರಿಯಾ ಅ.ಪ.


ಬುವಿಯೊಳು ನಿನ್ನ ದಯವಿರದಿರೆ ಕಣಲವಸಹ ಸರಿಯದಯ್ಯಾಭವದೊಳು ದೇವ ನಿನ್ನ ಕೃಪೆಯಾಗಲುಜವದೊಳೀಗಿನ ಸುಖ ಸ್ರವಿಸಿ ಪೋಗುವದಯ್ಯಾ 1


ಈಗೆಲ್ಲ ನಿನ್ನದಯೆದಿಂದೀ ಬಾಳ್ವೆಸಾಗಿದೆ ಬಲ್ಲೆನಯ್ಯಾಹೋಗಿಸಿ ಸಂಸಾರ ಬೇಗುದಿಯನು ನೀನುಬೇಗ ನಿನ್ನ ಧ್ಯಾನಭೋಗವ ನೀಡಯ್ಯಾ 2


ತುಷ್ಟಿಹೊಂದಲು ನೀ ಜೀಯಾ ಕಷ್ಟದ ಪರಿಯಾನಷ್ಟಮಾಡಲು ಅರಿಯಾಸೃಷ್ಟಿಯ ಜೀವಿಗದೃಷ್ಟ ಎಷ್ಟೆಷ್ಟೆಂಬಸ್ಪಷ್ಟ ಸಂಕಲ್ಪವ ಬದಲಿಸಲರಿಯಾ 3


ಎಲ್ಲವು ನಿನ್ನಧಿವಲ್ಲವೇ ಹರಿಯೇಸಲ್ಲದ ಅನುಮಾನಖುಲ್ಲ ದೈವವ ತಿರುವ ಬಲ್ಲೆಯಲ್ಲವೇ ನೀನುಬಲ್ಲೇಕೆ ಮನವನು ಕಲ್ಲು ಮಾಡಿದೆಯಾ 4


ಶರಣೆಂಬ ಜನ ಕೈಯ್ಯಾ ಎಂದೂ ಬಿಡದೆಪೊರೆಯುವೆ ಎಂಬರಯ್ಯಾಧರೆಯೊಳು ಗದುಗಿನ ವೀರನಾರಾಯಣಮರೆಯದೆ ಸಲಹಯ್ಯಾ ಕೇಳ್ವೆನ್ನ ಮೊರೆಯಾ 5

***


No comments:

Post a Comment