ರಾಗ: ನಾಗಗಾಂಧಾರ/ಜೋನ್‍ಪುರಿ ತಾಳ: ತಿಶ್ರ ಏಕ
ಕರುಣಿಸೊ ರಾಘವೇಂದ್ರ ದಯಾಸಾಂದ್ರ ಗುರುಕುಲಾಬ್ಧಿ ಚಂದ್ರ ಪ
ಚರಣದಿ ಶಿರವಿಡುತ ಕೋರುವೆ ಪೊರೆಯೆನ್ನುತ
ಮರುತಮತ ರಹಸ್ಯವರುಪುತ
ಹರಿಯ ಕಾಂಬುವ ಮಾರ್ಗ ತೋರುತ ಅ. ಪ
ದಾನವ ಕುಲಜಾತ ತಾನಾಗಿರುತ ಘನತರ ಭಾಗವತ
ಹೀನಜನಕನಿತ್ತಾನೇಕಾಪತ್ತುಗಳೆದಿರಿಸುತ
ತಾಣಸೂಚಿಸಲಲ್ಲಿರುವನೆನ್ನುತ
ತ್ರಾಣಿನೃಹರಿಯ ತೋರಿದಾತ 1
ಕರಜ ಬ್ರಹ್ಮಣ್ಯತೀರ್ಥ ಗುರುವ್ಯಾಸತೀರ್ಥ ಉರುತರ ಜ್ಞಾನಯುತ
ಪರಮತ ತರಿಯುತ್ತ ಮೇರುಕೃತಿಗಳ ರಚಿಸುತ್ತ
ಹರಿಯ ದಾಸರ ಕೂಟ ಕಟ್ಟುತ
ಸಿರೀಶ ಕೃಷ್ಣನ ಕೀರ್ತಿಸಿದ ಮಹಿತ 2
ಗುರುಸುಧೀಂದ್ರಸುತ ಪರಮವಿರಕ್ತ ಪರಿಮಳವನೀಡುತ
ಶರಣರೀಪ್ಸಿತ ತುಂಬುತ ನಿರುತ ಮಹಿಮೆಗಳ ತೋರುತ
ಪುರವರ ಮಂತ್ರಾಲಯಸ್ಥಿತ
ಮರುತಪಿತಾನಂತವಿಠಲದೂತ 3
***
No comments:
Post a Comment