ಧ್ರುವತಾಳ
ಮನವೆ ಚಿತ್ತೈಸುವದು ಭೋಜನ ಪ್ರಕ್ರೀಯವುಅನುವಾಗಿ ಪೇಳುವೆನು ವಿವರದಿಂದ ಘನ ಘನ ವಾಕು ಕಾಯ ಮನದಿಂದ ನೀವಂಧಾಅನ್ನಾದ್ಯ ಚೌಷ್ಯ ಲೇಹ್ಯ ಪೇಯವೆಂಬ ಚತುರನ್ನಮನುಜರಿಗೊಪ್ಪುವದು ನಿತ್ಯದಲ್ಲಿತೃಣ ಫಲವೆಂಬೋದನ ಪಶುಪಕ್ಷಿಗಳಿಗೆನ್ನುಮಿನುಗುವ ಸುರರಿಗೆ ಸ್ವಹಾವೆನ್ನು ಮನದಿಂದಲಾ ಸ್ವಧಾ ಪಿತೃಗಳಿಗನ್ನವೆನ್ನು ಭು-ವನದೊಳಗೆ ಇದೆ ಸಪ್ತಾನ್ನವೂ ಇನಿದು ಓದನದೊಳು ಚತುರ ವಿಧಅನ್ನವನು ಸುಜನರಿಗೆ ನೀಡಬೇಕಾದಡೆಸು ನರರಲ್ಲಿರುತಿಪ್ಪ ಹರಿ ಮೂರ್ತಿಗಳುಕ್ಷಣ ಕ್ಷಣಕೆ ಚಿಂತಿಸಿ ಅನ್ನವನಿತ್ತವಗೆವನಜನಾಭನ ಲೋಕ ಕರತಳಸ್ಥ ಸಿದ್ಧಅನುಮಾನ ಮಾಡದಿರು ಹರಿಯಾ ಸಾಕ್ಷಿ ವನಜಾಕ್ಷ ಕಮಲಾಪತಿ ವಿಠಲ ಎನ್ನ ಹೃದಯವನರುಹದಲ್ಲಿ ನಿಂತು ನುಡಿಸಿದ್ದು ನುಡಿವೆನು 1
ಮಟ್ಟತಾಳ
ಸಿರಿ ಅಜಿತಾದ್ಯಾನಂತಾ ಪರಮುಖ ಬಹುರೂಪ ವರ ಸಾಸಿರ ರೂಪ ನಾರಾಯಣ ಶತವುಅರಿ ಧರ ಅಜ ಏಕ ಅರ್ದ ಶತರೂಪಸ್ಮರಿಸು ಕೇಶವ ಮುಖ್ಯ ಚತುರ ವಿಂಶತಿಪರಮ ಶಕ್ತ್ಯಾ ದ್ವಾದಶರೂಪಗಳುಹರಿಯ ಮಚ್ಛಾದಿ ದಶ ಭಗವನ್ಮೂರ್ತಿಗಳುನಿರುತದಿ ಪೂರ್ವೊಕ್ತ ಕ್ರಮದಿಂದ ಸ್ಥೂಲ ಶರೀರಕ್ಕೆ ಕವಚಾ ಕೃತಿಯಾಗಿಪ್ಪೋದುಮರಳೆ ಈ ಕವಚದ ವೊಳಗೆ ವಾಸುದೇವವಿರಜೆ ಸಂಕರುಷಣ ಪ್ರದ್ಯುಮ್ನನಿರುದ್ಧಗಳಿ-ರುವರೆ ಮೋದದಿ ಪಂಚಾವರಣವಾಗಿ ಹೋರು ಅರಿವದು ಇವರೊಳಗೆ ತ್ರಿಗುಣಾತ್ಮಕ ತತ್ವ ವಿರಿಂಚಿ ಮೃಡನಭವು ಮರುತಾಗ್ನಿ ಉದಕಸರಸದಿ ತಿಳಿ ಸಪ್ತ ತತ್ವಗಳಾವರಣಾನರರಾ ತನುವೆಂಬ ಪಿಂಡಾಂಡಕ್ಕೆಲ್ಲಬೆರದಿಹುದು ವೊಳಗೆ ದಶಗುಣ ಕಡಿಮ್ಯಾಗಿನರಸಖ ಕಮಲಾಪತಿ ವಿಠಲನ ದಯದಿಂದ ಮೆರವುತಲಿಹ್ಯನೊ ವರಣೆಂದು 2
ತ್ರಿವಿಡಿತಾಳ
ಪದವಿಡಿದು ಶಿರತನಕ ಇಪ್ಪ ರೋಮಗಳಲ್ಲಿ ಹುದುಗಿಪ್ಪೊದಯ್ಯಾ ನವ ಕೋಟಿ ರೂಪಇದು ಕೇಳು ಕಟಿಯಿಂದ ಶಿರತನಕ ಇಹೊ ರೋಮ ಸದನಗಳಲ್ಲಿ ಒಂದೊಂದು ತೀರ್ಥ ಒದಗಿಪ್ಪೊರಲ್ಲಿ ಸುರರು ಮಾನಿಗಳೆನಿಸುತ್ತಪೆದರಾದೆ ಸಾರ್ಧತ್ರಯ ಕೋಟಿ ಜನರುಚದುರ ಮಾನಿಗಳಲ್ಲಿ ತೀರ್ಥದಲ್ಲಿ ಸಹಚದರಾದೆ ಏಳು ಕೋಡಿ ರೂಪವಿಹುದುಮೇದಸ್ಸು ಮುಖ ಸಪ್ತ ಧಾತುಗಳಲ್ಲಿ ನಿತ್ಯಮದನನಯ್ಯಾ ಸಪ್ತ ರೂಪದಿಂದಿಹನೊಇದರಾನಂತ ಸಪ್ತ ಧಾತುಗಳಲ್ಲಿ ಬಿ-ಡದೆ ತತ್ವ ಸಹಿತ ಪಂಚ ಕೋಶವಿಹುದುಇದರಲ್ಲಿ ಪಂಚಲಕ್ಷ ಪಂಚಾಶತಿ ಸಹಸ್ರಚತುಃಶ ಶತರೂಪದಿಂದಿಹದೊಸುದತಿ ಸಹಿತ ಮೂವತ್ತು ನಾಲ್ಕು ಲ-ಕ್ಷದಾ ಐವತ್ತಾರು ಸಾವಿರದ ನೂರಾವೊಂದು ಹದವರಿತುನಾಡಿಯಲಿ ರೂಪಗಳಿಹವೆಂದುಬುಧರು ಸ್ಮರಿಸಿ ಸುಖ ಬಡುವರೈಯ್ಯಾಸದಯದಿಂದಲಿ ಕೇಳು ದೇಹಸ್ಥ ನವಕೋಟಿ ತತ್ವ ತತ್ವಾಭಿಮಾನಿಗಳಲ್ಲಿಪ್ಪಪದುಮಜ ಪಿತ ಅಷ್ಟಾ ದಶಕೋಟಿ ರೂಪ-ದಿಂದ ನಲಿ ನಲಿದಾಡುತಿಪ್ಪ ದೇಹದಲ್ಲಿಮುದದಿಂದ ಸಾವಿರದ ಎಂಭತ್ತು ರೂಪ-ದಿಂದ ಅಸ್ಥಿಪರ್ವ ಸಂಧಿಯಲಿ ವ್ಯಾಪಿಸಿಪ್ಪಮಧುಸೂದನ ನಿತ್ಯ ಕರಣೋಪಕರಣದಲಿ ವಿ-ಬುಧೇಶ ಐವತ್ತೆರಡು ಸಾವಿರದ ಅಧಿಕಾ-ವಾದಾ ನೂರಾ ಮುವ್ವತ್ತಾರು ರೂಪ ಸಿದ್ಧವಾಗಿಪ್ಪವಯ್ಯಾ ನಿರುತದಲಿಪದುಮ ಬಾಂಧವ ಸಪ್ತ ವಿಂಶತಿಪದುಮದಲ್ಲಿ ಮುನ್ನೂರಾ ಎಂಭತ್ತೆರಡು ರೂ-ಪದಿಪ್ಪ ಹೃದಯದಲ್ಲಿಹ್ಯ ಪಂಚ ಕಂ-ಜದಲಿಪ್ಪೊ ರೂಪ ಅಗಣಿತವಯ್ಯಾ ಸತತ ವಿ-ಬುಧರಿಂದ ಮದಮತ್ಸರ ಬಿಟ್ಟು ಸ್ಥೂಲ ದೇಹದ ಕ್ರಮಹದನವನು ತಿಳಿವಯವಗೆ ಹರಿವೊಲಿವಇದರ ನಂತರ ಒಳ ಒಳಗೆ ಆವರಣಗಳುಪದರ ಪದರವಾಗಿ ಇರುತಿಪ್ಪೊವುಅದರ ವಿಚಾರವನು ಕಮಲಾಪತಿ ವಿಠಲಸದಯಾದಿಂ ಪೇಳಿಸಿದ್ದು ಪೇಳುವೆನು 3
ಝುಂಪಿತಾಳ
ಅನ್ನ ಪ್ರಾಣ ಚಕ್ಷು ಶ್ರೋತ್ರ ವಾಂಙ್ಮನೊ ವಿ-e್ಞÁನ ಆನಂದಮಯ ನಾರಾಯಣರನ್ನ ವಾಸುದೇವ ಆವರಣತನಕ ಇವು ಈರೈದು ಆವರ್ಣವೆನಿಸುತಲಿವುಘನ್ನ ಸ್ಥೂಲ ದೇಹ ಅದಿರುದ್ದ ದೇಹಗಳ ಮಧ್ಯದಲ್ಲಿಚನ್ನಾಗಿ ಮಿನಗುವವು ಕವಚದಂತೆತನ್ನಾಮ ತದ್ರೂಪದಿಂದ ಆವರಣದಲಿಅನ್ನ ನಾಮಕ ಹತ್ತು ರೂಪದಿಹನೊಚಿನ್ನ ಅನಿರುದ್ಧ ದೇಹದಲಿ ದೈತ್ಯರು ಎಲ್ಲಸನ್ನಿಹಿತರಾಗಿಹರು ತ್ರಿದಶರಲ್ಲಿಹನ್ನೆರಡು ನೂರಾ ಹತ್ತು ಅಧಿಕವೊಂದು ಲಕ್ಷಸಣ್ಣ ಬಿಂದುಗಳಿಹವೊ ಅನಿರುದ್ಧದಿಕನ್ಯ ಲಕುಮಿಯು ಅಭಿಮಾನಿಯೆನಿಸುತ ಲಕ್ಷಹನ್ನೆರಡು ನೂರು ಹತ್ತು ರೂಪದಿಹ್ಯಳೊಪನ್ನಗಾಶಯನ ಲಕುಮಿಯಲ್ಲಿ ಬಿಂದುಗಳಲ್ಲಿಮುನ್ನೆ ಪೇಳಿದ್ದ ದ್ವಿಗುಣ ರೂಪದಿಹನೊಇನ್ನು ಈ ದೇಹದಲಿ ಅನಿರುದ್ಧ ಪ್ರ-ದ್ಯುಮ್ನ ಎರಡೆರಡು ಆವರಣದಿಂದೊಪ್ಪೊರೊಪುಣ್ಯವಂತರು ಸಪ್ತ ಆವರಣದಲಿ ಸ್ಮರಣೆ-ಯನ್ನೆ ಮಾಳ್ಪವದೇಳು ರೂಪಗಳನುಚೆನ್ನಾಗಿ ತಿಳಿವೊದೆ ಏಳು ಆವರ್ಣದಲ್ಲಿಘನ್ನ ನಾಲ್ಕೊಂದು ಕೋಶ ಇಹದು ನಿತ್ಯ ಅ-ಯಿನೂರು ಎಂಭತ್ತೈದು ಸಾವಿರ ಮ್ಯಾಲೆನನ್ನೂರು ರೂಪ ಈ ಕೋಶದಿಹದುಮನ್ನಿಪುದು ಇಪ್ಪತ್ತನಾಲ್ಕು ತತ್ವಗಳುತನ್ಮಾನಿ ಸುರರು ಸಹ ಅಲ್ಲಿಪ್ಪರುಅನ್ವಯಿಸು ಒಬ್ಬೊಬ್ಬ ತತ್ವ ದೇವತೆಯಲ್ಲಿ ಮುನ್ನೆ ಚತುರ್ವಿಂಶತಿ ತತ್ವಇಪ್ಪವೆಂದುಇನ್ನಿದೇ ರೀತಿಯಲಿ ಹರಿರೂಪ ಗುಣಿಸಲದುಅನ್ನಂತ ರೂಪಗಳುವೆನಿಸುತಿಹವು ತನ್ನ ನಂಬಿದ ಜನಕೆ ಈ ಪರಿಯ ತಿಳಿಸುತಲಿಬನ್ನ ಬಡಿಸದೆ ಪೊರೆವ ಕ್ಷಣ ಬಿಡದಲೆಪನ್ನಗಾಚಲವಾಸ ಕಮಲಾಪತಿ ವಿಠಲತನ್ನನಾಡುವನೆಂದು ಶ್ರುತಿ ಸ್ಮøತಿಯು ಪೊಗಳುತಿದೆ 4
ರೂಪಕತಾಳ
ಮುದ್ದಾಗಿ ತಿಳಿವದು ಅನಿರುದ್ಧ ಪ್ರದ್ಯುಮ್ನಸಿದ್ಧ ಸಂಕರುಷಣ ವಾಸುದೇವ ನಾರಾಯಣಬದ್ಧಾಗಿ ವೊಳಗೆ ಆವರಣ ರೂಪದಲಿಪೊದ್ದಿಹರೊ ನಿರುತದಿ ಪರಮ ಮೋದದಲಿಚದ್ದುರಾ ಪರಮಾ ಜೀವಾಚ್ಛಾಧಿಕ ದ್ವಯದಲ್ಲಿಸದ್ದು ಮಾಡದೆ ಅಷ್ಟಾದಶ ರೂಪದಿಹ್ಯನೊಬುದ್ಧಿವಂತರು ಕೇಳಿ ಕಮಾವರಣದಲಿಇದ್ದು ಅಷ್ಟ ಷಷ್ಟಿರೂಪದಲ್ಲಿ ಮೆರೆವಹೆದ್ದೈವ ಶ್ರೀ ಹರಿಯು ಕಾಮಾವರಣದಲ್ಲಿ ತ್ರಯ ಷಷ್ಠಿಸದ್ದರ್ಶನೇಯ ರೂಪದಲ್ಲಿಹ್ಯನೊ ಅ-ವಿದ್ಯಾವರಣದಲ್ಲಿ ಏಳು ವಿಂಶತಿಮದ್ದಾನೆ ತೆರ ಮೆರೆವ ರೂಪದಲಿ ತಾನುಶುದ್ಧ ಮನದಲಿ ತಿಳಿಯೊ ಅನಿರುದ್ಧ ತನುವಿನಿಂದಖದ್ಯೋತ ವರ್ಣಾಭ ಅವ್ಯಕ್ತ ತನಕಇದ್ದದ್ದು ನೋಡಲು ದಶ ಆವರಣ ಇಹವುಮುದ್ದು ಮೋಹನ ಸ್ವಾಮಿ ಕಮಲಾಪತಿ ವಿಠಲನಿದ್ದುರ (ನಿದ್ರಾ) ದಲ್ಲಿರೆ ತಾ ತಿಳಿಸುವ ತನ್ನವಗೆ 5
ಅಟ್ಟತಾಳ
ಈರ ವಿಧಿ ವಾಣಿ ಭಾರತಿ ಇವರಿಂದಬಾರಿ ಬಾರಿಗೆ ಸ್ತೋತ್ರ ಧೀರನು ಕೊಳ್ಳುತ್ತಸಾರ ಅವ್ಯಕ್ತ ಸುಶರೀರದಲ್ಲಿ ಶತಚಾರು ಸಪ್ತತಿ ನವ ಸ್ವರೂಪದಲ್ಲಿಪ್ಪಮೀರಿದ ಲಿಂಗದಿ ನಾರಾಯಣ ತಾನುನಾರಿ ಸಹಿತ ಅರವತ್ತಾರೊಂದು ರೂಪದಿಸೇರಿಪ್ಪನಿದರೊಳಗೆ ಮಾರ ಜನಕ ತನ್ನಸ್ವರೂಪ ಜೀವಕ್ಕೆ ತೋರದಂತೆ ಈಶ್ವರೇಚ್ಛಾವರ್ಕವುಹಾರೈಸಿ ಮಾಡಿಹ ನೀರಜಾಕ್ಷ ತನ್ನ ಸಾರಿಗೆ ಬಂದಾಗಭೂರಿ ಕೃಪೆಯ ಮಾಡಿ ತಾರತಮ್ಯದಿಂದಥೋರ ಆವರ್ಕವು ತೀರ ಕಡಿಗೊತ್ತುವಸಾರಸದಳಾಕ್ಷ ಕಮಲಾಪತಿ ವಿಠಲಪಾರು ಮಾಳ್ಪ ಭವ ಕೂಪಾರದಿಂದ 6
ಆದಿತಾಳ
ದಾವ ಸ್ಥೂಲದಿಂದ ಸ್ವರೂಪ ಪರಿಯಂತರಆವರ್ಕ ಯಿಪ್ಪತ್ತೈದು ಎನಿಸುವದರೊಳಗೆಜೀವ ದೇಹದಲ್ಲಿ ಎರಡು ಅರ್ಬುದ ಶತ ನವಪಾವನ್ನವಾದಂಥ ನರಸಿಂಹ ರೂಪವುತವಕದಲ್ಲಿ ನಿಂತು ಮೃತ್ಯುವಿಗೆ ಮೃತ್ಯುವೆನಿಸಿಜೀವೋತ್ತಮನಿಂದ ಸೇವ್ಯ ಮಾನ್ಯನಾಗಿಆವಾವ ಕಾಲದಲ್ಲಿ ಇರುತಿಪ್ಪನಲ್ಲದೆಶ್ರೀವರನೆಂಬೊ ಅಂತರಾತ್ಮನು ಇಹೊ ಹೃದಯಾದೇವೇಂದ್ರಾಭಿದ ವೈಕುಂಠವೆನಿಪದುಆವರಿಸಿಪ್ಪವಲ್ಲಿ ಭಾಗತ್ರಯಂಗಳುದೇವೋತ್ತುಮನಾದ ಮುಕ್ತ ಬ್ರಹ್ಮಾದಿಗಳಿಗೆಆವ ಸ್ಥಳವೆಂದು ಶೃತಿಯು ಪೊಗಳುತಿದೆಈ ವಿಧ ಸುರರೆಲ್ಲ ಇದ್ದ ಬಳಿಕ ಅಲ್ಲಿದೇವವರೇಣ್ಯನ ರೂಪಗಳೆಂತು ಅರಿದುಅವಗಣನೆ ಮಾಳ್ಪ ಅಗಣಿತವೆನಿಪದುಜೀವ ತನುವಲಿಪ್ಪ ಮಹಿಮೆಯ ತಿಳಿಸೋದಕ್ಕೆಕೋವಿದನೊಬ್ಬನಿಗೆ ಅನ್ನೋದಕವನುಭೂವರ ಧರ್ಮನಿಂದ ಕೊಡಿಸಿ ತದನಂತರ ಆ ವಿಪ್ರನುಚ್ಛಿಷ್ಟ ತೆಗೆಯೆಂದು ಪೇಳಿದ್ದಕ್ಕೆಧಾವಿಸಿ ತೆಗೆದದು ಕೊನೆಯಗಾಣದಿರೆಹಾವಭಾವ ನೋಡಿ ಧರ್ಮರಾಜನ ಬಿಡಿಸಿತಾ ವೊಲಿದು ತೆಗೆದು ಮಹಫಲ ತಂದಿತ್ತನುಈ ವಿಧ ಮತಿಯಿಂದ ಆವರ್ಕಗಳರಿತುಕೋವಿದರಲ್ಲಿಪ್ಪ ರಮಾಯುತ ರೂಪಗಳುಝಾವ ಝಾವಕೆ ತಿಳಿದು ಚಿಂತನೆ ಪೂರ್ವಕಸಾವಧಾನದಿ ಉದಕ ಅನ್ನಾದಿ ಕೊಟ್ಟರು ಮೌನದಿ ಮನೆಯಲ್ಲಿ ನಿತ್ಯ ತಾ ವುಂಡರುಆ ವಿಪ್ರನ ಪುಣ್ಯ ಇಷ್ಟೆಂದು ಗಣನಿಗೆಆವಂಗು ಬಾರದು ತಿಳಿ ಕಂಡ್ಯಾ ಮನವೆ ನೀ-ಸಾರ್ವಭೌಮ ಹರಿ ಎಡಬಿಡದಿಪ್ಪವನಲ್ಲಿಜೀವೇಶ ಕಮಲಾಪತಿ ವಿಠಲ ಪ್ರಾಂತ್ಯಕ್ಕೆತಾ ವೀವ ತನ್ನ ನಿಲಯ ಪರಮ ಸಂತೋಷದಿಂದ 7
ಜತೆ
ಭೋಜನೆಂಬ್ಯಾಜನಾ ನಿವ್ರ್ಯಾಜದಿಂದಲಿ ನಡಿಸೆಭೋಜ ಕಮಲಾಪತಿ ವಿಠಲನವರಲ್ಲಿಪ್ಪ ||
****
No comments:
Post a Comment