ಪಂಚರೂಪಾತ್ಮಕ ನೀನೇ ಈ
ಪಾಂಚಭೌತಿಕ ದೇಹದಿ ಸಂಚರಿಸೂವೆ ಪ
ಪಂಚಕೋಶಗಳಲ್ಲಿ ಚರಿಸಿ ಹಂಚಿಕೆ ಕೊಡುವೆಯೊ
ಸ್ಥೂಲರಸವನು
ಪಾಂಚಭೌತಿಕ ದೇಹಕುಪಚಯ ಹಂಚಿಕಿಂದಲಿ
ಇತ್ತು ಸಲಹೂವೆ ಅ.ಪ
ರಸಪಾಯುಆಪಜಿಹೆÀ್ವನಾಸಿಕ ಗಂಧ
ಪೃಥುವಿ ಉಪಸ್ಥಯುಕ್ತ ಕೋಶವಹುದಯ್ಯ
ಅನ್ನಾಮಯವೆನ್ನುತ ಕೋಶಾಂತರ್ಗತ
ಅನಿರುದ್ಧದೇವನೆ ನಿರುತ
ಆ ಶನೈಶ್ವರ ವರುಣ ಭೂದೇವಿಯಿಂದಲಿ ಸೇವಿಪ ಸತತ
ಲೇಶವಾದರು ಬಿಡದೆ ತಾ ಖಂಡಾಖಂಡ ರೂಪದಿ
ದೇಶ ಕಾಲಗಳಲ್ಲಿ ನೆಲೆಸಿ ಕೋಶಕಾರ್ಯವ ಗೈವೆ ಪ್ರಾಣನಿಂ
ನಾಶರಹಿತನಿರುದ್ಧದೇವನೆ ನಿನ್ನ ರೂಪವು ಈ ಸ್ಥೂಲದೊಳು
ಈ ಶರೀರದ ಶಿರವೆ ನಿನ್ನಯ
ಶಿರದ ಸ್ಥಾನವೆಂದು ಪೇಳುವರು ಈಶ ನಿನ್ನಯ
ಉಭಯಪಕ್ಷಗಳು
ಧೇನಿಸುತಿಹರು ಭುಜದ್ವಯ ಶ್ರೀಶ ನಿನ್ನಯ ಮಧ್ಯದೇಶವೆ
ಈ ಶರೀರದÀ ಮಧ್ಯಭಾಗವು ಪ್ರಸಿದ್ಧ ಪುರುಷನೆ
ಪುಚ್ಛ ಭಾಗವು ಪಾದವೆನಿಸುವುದು ಈಶ
ನಿನ್ನಿಂದೋಷಧಿಗಳು
ಓಷಧಿಗಳಿಂದನ್ನವೆಲ್ಲವು ಪೋಷಣೆ ಎಲ್ಲ
ಅನ್ನದಿಂದಲೆ ದೋಷದೂರ ನೀನನ್ನದನ್ನದಾ1
ಪಾಣಿತ್ವಗ್ವಾಯು ಸ್ಪರ್ಶ ನೇತ್ರ ತೇಜ ಪಾದರೂಪಗಳಿಂದಲಿ
ಕಾಣಿಸಿಕೊಳ್ಳುವುದು ಪ್ರಾಣಮಯದ ಕೋಶವು ತಾನಲ್ಲಿಹ
ಪ್ರದ್ಯುಮ್ನ ಮೂರುತಿ ಸತತ-ಗಣಪತಿ ಅಗ್ನಿ ವಾಯು
ಮರೀಚಿಗಳೆಲ್ಲರೂ ಸನ್ನುತಿಪರೋ
ಕ್ಷಣಬಿಡದೆ ಖಂಡಾಖಂಡರೂಪದಿ ಜೀವ
ಪ್ರಾಣಾಧಾರನಾಗಿಹೆ ತ್ರಾಣ ನಿನ್ನಿಂದ ಸ್ಥೂಲದೇಹಕೆ ಅ-
ಪಾನ ನಿಂದೊಡಗೂಡಿ ನೆಲೆಸಿಹೆ ಪ್ರಾಣಪತಿ ಪ್ರದ್ಯುಮ್ನ
ನಿನ್ನಯ ಶಿರದ ಸ್ಥಾನವು ಪ್ರಾಣನಲ್ಲಿಹುದೋ
ಎಣಿಸುವರೋ ವ್ಯಾನೋದಾನದೊಳ್
ದಕ್ಷಿಣೋತ್ತರಪಕ್ಷವಿರುತಿಹುದೋ
ಕಾಣಿಪುದು ಮಧ್ಯದೇಶವು ಆಗಸದೊಳು ಉ-
ದಾನ ವಾಯುವಿನಲ್ಲಿ ಇರುತಿಹುದೋ
ಧೇನಿಪೋರು ಪೃಥುವಿಯು ಪಾದವೆಂಬುದು ಸ-
ಮಾನ ವಾಯುವಿನಲಿ ಇರುತಿಹುದು
e್ಞÁನ ರೂಪದಿ ಈ ಪರಿಯಲಿ ರೂಪವಿರುತಿಹುದು
ಪ್ರಾಣಿಗಳಿಗಾಯುಷ್ಯವಿತ್ತು ಪ್ರಾಣಪ್ರೇರಕನಾಗಿ ಪೊರೆಯುವೆ
ಪ್ರಾಣಧಾರಣೆ ನಿನ್ನದಯ್ಯಾ ಪ್ರಾಣನುತ ಪ್ರದ್ಯುಮ್ನಮೂರುತೆ2
ಚಿತ್ತ ಅಹಂಕಾರ ಬುದ್ಧಿ ಅಂತಃಕರಣ ಮನ ಅಹಂಕಾರ
ತತ್ವಯುತವಾಕ್ಯೋಕ್ತಾಗಸ ಶಬ್ದ
ಈತೆರ ಯುಕ್ತವಾದೀ ಕೋಶವು ಇದಕೆ
ಖ್ಯಾತವಾದ ಮನೋಮಯ ಕೋಶದೊಳು
ಸತತ ರುದ್ರೇಂದ್ರಾದಿ ಸುರರೆಲ್ಲರು ವಂದಿಸುತಿಹರು
ಖ್ಯಾತ ಸಂಕÀರುಷಣನೆ ಖಂಡಾಖಂಡರೂಪದಿ ನೆಲೆಸಿ ಕೋಶದಿ
ಪ್ರೀತಿಯಿಂದಲಿ ವ್ಯಾನನೊಡಗೂಡಿ
ಸತತ ಮನಸಿನ ಕಾರ್ಯ ಮಾಳ್ಪೆ ದಾತನು
ನೀನೆ ಯಜ್ಞಭುಕುವು
ಯಜುರ್ವೇದವೆ ನಿನ್ನ ಶಿರವಹುದು ಶ್ರುತಿಗಳೊಳು
ಋಕ್‍ಸಾಮವೇದಗಳೆಂಬುವೆ ನಿನಗೆ
ಭುಜದ್ವಯಂಗಳಾಗಿಹುದು ನುತಿಪ ಪಾಂಚರಾತ್ರಾಗಮ ವೆಂಬುದೆ
ನಿನ್ನಯ ಮಧ್ಯದೇಶವು ಅಥರ್ವ ಆಂಗೀರ
ನಾಮಕಂಗಳೆನಿಪುದೆ ನಿನ್ನ ಪಾದದ್ವಯಂಗಳು
ಖ್ಯಾತ ನಿನ್ನಯ ರೂಪ ಮಹಿಮೆಯ ತಿಳಿಯಲಸದಳವೋ
ಜಾತರಹಿತ ನಿನ್ನ ವರ್ಣಿಸೆ ಮಾತು ಮನಸಿಗೆ
ನಿಲುಕದಂತಿಹೆ ಖ್ಯಾತ ನೀನಹುದೊ ಮನೋಮಯ
ಪ್ರೀತಿಯಿಂದಲಿ ಸಲಹೋ ಎನ್ನನು 3
ಮಹತ್ತತ್ವ ಪ್ರಾಚುರ್ಯದಿಂದಿಹ ಈ ವಿe್ಞÁನಮಯಕೋಶದಿ
ಶ್ರೀಹರಿ ವಾಸುದೇವಾ ನೀನೆ ನೆಲೆಸಿಹೆ
ಅಹರಹ ಬ್ರಹ್ಮ ವಾಯುಗಳಿಂದಲಿ
ಮಹಾಪೂಜೆ ವಂದನೆಗೊಳುತಿಹೆ-
ಖಂಡಾಖಂಡದಿ ತುಂಬಿಹೆ
ದೇಹದೊಳು ಉದಾನನಿಂದೊಡಗೂಡಿ
ಸಹಾಯನಾಗಿಹೆ ಜೀವಿಗಳಿಗೆ
ಮೋಹ ಹರಿಸಯ್ಯ ಮಾಯಾಪತಿಯೆ
ಬಾಹ ದುರಿತದಿಂ ಪಾರುಗಾಣಿಸೋ
ದೇಹ ದೇಹಿಯ ರೂಪ ನೀ ಸ್ವಗತಭೇದವಿವರ್ಜಿತನೆ
ಬ್ರಹ್ಮಾದಿವಂದ್ಯನೆ ಶ್ರುತಿಯ ಧರಿಸಿದೆ
ಶಿರವೆ ನಿನ್ನಯ ಶ್ರದ್ಧವೆಂಬೊರು
ಮಹಾ ಭುಜಂಗಳೆ ಋತುಸತ್ ಎಂದೆನಿಸಿಕೊಳುತಿಹುದು
ಇಹುದು ಮಧ್ಯದೇಶವೆ ಜಗಕೆ ಆಶ್ರಯವೆನಿಪ ಯೋಗಾವು
ಮಹವೆಂಬುದೆ ಪಾದವೆನಿಸಿತು ಸೂರ್ಯತೇಜದೊಳು
ಮಹಾಮಹಿಮನೆ ಪೊಗಳಲಳವೆ
ಮೋಹಪಾಶದಿ ಬಿದ್ದ ಜೀವರ
ಮಹಾ ಪ್ರಳಯದಿ ಉದರದೊಳಿಟ್ಟು
ಇಹಪರದಿ ರಕ್ಷಿಸುವೆ ದೇವ4
ನಂದಮಯ ಕೋಶವು ತನ್ಮಯ
ಅವ್ಯಕ್ತತತ್ವದಿಂದಲಿ ನನ್ನೀಯಿಂದ
ಆನಂದಮಯ ಮೂರುತಿ ನಾರಾಯಣನೀ
ಕೋಶಾಂತರ್ಗತನು ನೀನೆ ಸಮಾನನೊಡಗೂಡಿಹೆ
ಸನ್ನಿಧಿಯಲ್ಲಿ ಶ್ರೀಯು ನುತಿಸುತಿಹಳೋ
ಅನಾದಿಲಿಂಗವ ಭಂಗಗೈಸುವಳೋ
ಘನಮಹಿಮ ನಿನ್ನ ಅನುಸರಿಸಿ ತಾನಿಪ್ಪಳೋ
ಛಿನ್ನ ಭಕ್ತರಿಗೊಲಿಯಳೋ ಅವಿ
ಚ್ಛಿನ್ನ ಭಕ್ತರ ಜನನಿ ಎನಿಪಳೋ
ಶ್ರೀನಾರಾಯಣ ನಿನ್ನ ಶಿರ ಮುಕುತರಿಗೆ
ಪ್ರಾಪ್ಯನು ಎಂದು ಪ್ರಿಯವೆಂದು
ಘನ ದಕ್ಷಿಣೋತ್ತರ ಪಕ್ಷವೆನಿಪೋವು
ಮೋದ ಪ್ರಮೋದಗಳು ಘನ ಆನಂದವೆಂಬುದೆ
ತನ್ನ ಮಧ್ಯದ ಪ್ರದೇಶವೆಂಬೋದು
e್ಞÁನ ಸುಖ ಆನಂದ ಪಾದಗಳು
ಬ್ರಹ್ಮನಾಮಕ ವಾಯುವೆಂಬುವರೋ
ಆನಂದಮೂರುತಿ ಮಹಿಮೆ ಎಂತಿಹುದೋ
ಭಿನ್ನನಾಮದಿ ಕರೆಸುತಲಿ ತಾ ಅ
ಭಿನ್ನನಾಗಿ ಚರಿಸಿ ಕೋಶದಿ
ಘನಕಾರ್ಯವ ನಡೆಸುತಿರ್ಪೆ
ಪನ್ನಗಾದ್ರಿ ಶ್ರೀ ವೇಂಕಟೇಶನೆ 5
****
No comments:
Post a Comment