Monday, 2 August 2021

ಎಂದು ಕಾಂಬೆನು ನಾನುಗೋವಿಂದ ನಿನ್ನಯ ಪಾವನ್ನ ankita uragadrivasa vittala

ಎಂದು ಕಾಂಬೆನು ನಾನುಗೋ-

ವಿಂದ ನಿನ್ನಯ ಪಾವನ್ನ ಪಾದವನ್ನು ನಾ

ಪೊಂದಿಸೇವಿಸಿ ಆನಂದಪಡುವುದಕಿನ್ನು ಕರುಣಿಸೈ ಮುನ್ನ ಪ


ಎಂದಿಗಾದರು ನಿನ್ನಪದಯುಗ

ಪೊಂದಿ ಮಹದಾನಂದ ಪಡೆಯಲು

ಕಂದಿಕುಂದಿತು ತನುಮನೇಂದ್ರಿಯ

ಇಂದೆ ತೋರಿಸೊ ಪಾದಕಮಲವ ಅ.ಪ


ಬಾಲತನದಲಿ ನಾನು ಶ್ರೀಲೋಲ ನಿನ್ನಿಂದ

ಪಾಲಿತನಾದೆನೊ ಬೆಲೆಯುಳ್ಳ ಆಯುವನೆಲ್ಲ

ಕಳೆದು ಬಿಟ್ಟೆನು ನಾನು ಕೆಲಕಾಲದಲಿ ನಾ

ಕಲುಶಕ್ರಿಯೆಗಳನ್ನು ಫಲವಿಲ್ಲದೆಸಗಿದೆನು

ಎಲ್ಲರೊಳು ನೀ ನೆಲಸಿ ಜೀವರ ಎಲ್ಲಕರ್ಮವ ಮಾಡಿಸಿ

ಫಲವೆಲ್ಲ ಅವರಿಗೆ ಇತ್ತು ನೀ ನಿರ್ಲಿಪ್ತನೆಂದು ತಿಳಿಯದಲೆ

ಖುಲ್ಲಮಾನವರೊಡನೆ ಬೆರೆತು

ಪುಲ್ಲಲೋಚನ ನಿನ್ನ ಮರೆದು

ಇಲ್ಲ ಎನಗೆ ಎಣೆಯೆನುತ ನಾ

ಬಲುಹೆಮ್ಮೆಯಿಂದಲಿ ದಿನಗಳ ಕಳೆದೇ

ಇಲ್ಲನಿನಗೆಸರಿಯಿಲ್ಲ ನೀ

ನಿಲ್ಲದಾಸ್ಥಳವಿಲ್ಲ ಜಗದಾ ಎಲ್ಲ

ಕಾಲಗಳಲ್ಲಿ ಇಹ ಶ್ರೀನಲ್ಲ ನೀನೆಲ್ಲ ಬಲ್ಲೆಯೊ 1

ಬರಿದೇ ಕಾಲವ ಕಳೆದೇ ಶ್ರೀಹರಿಯೆ ನಿನ್ನಯ

ಸ್ಮರಣೆಯನ್ನು ಮಾಡದೇ

ಪರಿಪರಿಯ ತನುಮನ ಕ್ಲೇಶಗಳಿಗೊಳಗಾದೆ

ಪರಿಹರಕೆ ನಿನ್ನಯ

ನಾಮಸ್ಮರಣೆಯೊಂದಲ್ಲದೇ ಇನ್ನೆಲ್ಲಾ ಬರಿದೇ

ಪರಮಕರುಣಾಶರಧಿ ಎಂಬುವ

ಕರಿಧ್ರುವಬಲಿಮುಖ್ಯರೆಲ್ಲರ

ಪೊರೆದ ಕೀರುತಿ ಕೇಳಿ ನಂಬಿದೆ

ಶರಣಜನಮಂದಾರನೆಂದು

ಅರಿಯೆ ನಾನವರಂತೆ ಸಾಧನ

ಅರಿತು ಮಾಡುವ ಪರಿಯು ತಿಳಿಯದು

ಬಿರುದು ಭಕ್ತಾಧೀನನೆಂದು

ಹರಿಯೆ ನಿನ್ನಯ ಮರೆಯಹೊಕ್ಕೆನು

ದುರಿತಶರಧಿಯೊಳಾಡುತಿರುವನ ಉ-

ತ್ತರಿಸಲೊಂದೇ ನಾವೆಯಂತಿಹ

ಚರಣಸ್ಮರಣೆಯಕೊಟ್ಟು ರಕ್ಷಿಸು

ಪುರುಷಸೂಕ್ತಸುಮೆಯ ಜೀಯಾ2

ಶೇಷಗಿರಿಯವಾಸ ಶ್ರೀ ಶ್ರೀನಿವಾಸ

ದೋಷರಹಿತ ಸರ್ವೇಶ ಮನೋ-

ಕಾಶದಲಿ ಅನವರತ ನಿಲ್ಲೊ

ಶ್ರೀಶಾ ಬಿಡಿಸೆನ್ನ ಭವಬಂಧ ಗ್ರಂಥಿಯ

ಪಾಶಾ ಹರಿಸುವುದು ಕ್ಲೇಶಾ

ಶ್ರೀಶ ನಿಗಗತಿಶಯವೆ ಎನ್ನಯ

ವಿಷಯದಭಿಲಾಷೆಗಳ ಬಿಡಿಸೀ

ದೋಷರಹಿತನ ಮಾಡಿಸೀ ಎನ್ನ

ಪೋಷಿಸೋ ನಿನ್ನಸ್ಮರಣೆಯಿತ್ತು ದ್ವಾಸುಪ-

ರ್ಣ ಶ್ರುತಿಗಳಿಂದಲಿ

ಈಶ ದಾಸರ ಭಾವ ತಿಳಿಯದೆ

ಮೋಸಹೋದೆನೊ ಬೋಧೆ ಇಲ್ಲದೆ

ವಾಸುದೇವನೆ ರಕ್ಷಿಸೆನ್ನನು

ಏಸುಕಾಲಕು ನೀನೆ ಗತಿ ಎಂದು

ಆಸೆ ಮಾಡುವೆ ನಿನ್ನ ಕರುಣಕೆ

ಬೇಸರದಲೆ ಮೊರೆಯ ಲಾಲಿಸಿ

ಶ್ರೀಶ ಶ್ರೀ ವೆಂಕಟೇಶನೆ 3

****


No comments:

Post a Comment