Monday, 2 August 2021

ಕೈಯ ಬಿಡುವರೇ ಕೃಷ್ಣ ಕೈಯ ಬಿಡುವರೇ ankita krishnavittala

ಕೈಯ ಬಿಡುವರೇ ಕೃಷ್ಣ ಕೈಯ ಬಿಡುವರೇ ಪ


ಹೇಯ ವಿಷಯದಲ್ಲೆ ಇರಿಸಿ ಜೀಯ ನಿನ್ನ ವಿಷಯ ಮರೆಸಿ

ತೋಯಜಾಕ್ಷ ಭಕ್ತಿ ಕೊಡದೆ ಹಾಯಗೊಡದೆ ಭವ ಸಮುದ್ರ ಅ.ಪ


ಬಿಂಬ ನೀನು ಸಿದ್ಧಪ್ರತಿಬಿಂಬ ನಾನು ಸಿಧ್ದವಿರಲು

ತುಂಬಿ ಪರಿವ ನದಿಯ ಮಧ್ಯೆ ಅಂಬಿಗನೆ ತ್ಯಜಸಿದಂತೆ 1

ಕಲಿಯ ಕಾಟ ವಿಷಯ ದಾಟಗೆಲುವ ಶಕ್ತಿ ಎನಗೆ ಉಂಟೆ

ಒಲಿಯದಿರಲು ನೀನೆ ದಯದಿ ಸುಲಭದೇವ ನೆನಿಸಿ ಹೀಗೆ 2

ಕಾಯ ಸೊಬಗು ಗುಣವ ನೋಡಿ

ತಾಯಿ ಬಿಡುವಳೇನು ಶಿಶುವ

ಮಾಯೆ ಸುಳಿಯಲ್ಲಿರಲು ಸಹಾಯ ಮಾಡದೇನೆ ಬದಿಗ 3

ಶಿಷ್ಟನಲ್ಲ ದುಷ್ಟಕರ್ಮ ಭ್ರಷ್ಟನೆಂಬ ಮಾತು ಮೂಟೆ

ಕಟ್ಟಿಪೇಳು ಬಿಟ್ಟು ನಿನ್ನ ಎಷ್ಟು ಕರ್ಮಮಾಡಲಾಪೆ 4

ಹಿಂದಿನವರು ತಾವೆ ಮುಂದೆ ಬಂದರೇನೊ ಬಿಟ್ಟು ನಿನ್ನ

ಒಂದು ತೃಣವು ಚಲಿಸದಲ್ಲ ತಂದೆ ಮನವ ಮಾಡದಿರಲು 5

ನಾನು ಎಂದು ಹೀನನಾದೆ ನೀನು ಸ್ವಾಮಿ ನಾನು ಭೃತ್ಯ

ಶ್ರೀನಿವಾಸ ಶರಣು ಶರಣು e್ಞÁನವಿತ್ತು ಕಾಯೊ ಮುಂದೆ 6

ನಿನ್ನ ನಂಬಿ ಇರುವೆ “ಶ್ರೀ ಕೃಷ್ಣವಿಠಲ” ಸತ್ಯಸತ್ಯ

ಅನ್ಯರನ್ನು ಕಾಣೆನಪ್ಪ ನಿನ್ನ ಚಿತ್ತ ನನ್ನ ಭಾಗ್ಯ 7

***


No comments:

Post a Comment