Thursday, 5 August 2021

ಭಾರತೀ ಮರುತನ ರಾಣಿ ಶುಭ ವಾಣಿಯಾಗಿರುವಿ ಕಲ್ಯಾಣಿ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ಭಾರತಿ ಮರುತನ ರಾಣಿ ಶುಭ

ವಾಣಿಯಾಗಿರುವಿ ಕಲ್ಯಾಣಿ

ನಾರಸಿಂಹನ ಸೊಸೆಯಾದಿ ಸರ್ವ

ನಾರಿಯರಿಗೂ ನೀ ಮೇಲಾದಿ ಪ


ಭೀಮನು ಶೂದ್ರನೆಂದಿರಲು ನೀನು

ಶೂದ್ರೆಯೆಂದೆನಿಸುತಲಿರುವಿ

ಕಾಮಿ ಕೀಚಕನಿಗೆ ಮೃತ್ಯುವಾಗಿ ನಿನ್ನ

ಪ್ರೇಮವನೇನು ಬಣ್ಣಿಸಲಿ 1


ಜುಟ್ಟನು ಕೈಯೊಳು ಸೆಳೆದ

ದುಷ್ಟ ದೈತ್ಯನ ಪಂಥದಿ ಮಥಿಸಿ

ಪಟ್ಟದರಸನು ತೋರಿದುದದ್ಭುತವು

ಸಿಟ್ಟು ನಿನಗಾಗಿ ತೋರ್ದುದಾಶ್ಚರ್ಯ 2


ರಾಜಧರ್ಮನು ಸುಮ್ಮನಿರಲು

ರಾಜನಾಥ ಶ್ರೀಹಯಮುಖ ದಾಸ

ರಾಜ ಭೀಮನು ತೋರ್ದ ಶಾಂತತೆಯ

ರಾಜೀವಾಕ್ಷ ನಿನ್ನೊಳು ತೋರಿದ ಕರುಣ 3

***


No comments:

Post a Comment