Thursday, 5 August 2021

ಮತಿಯ ಪಾಲಿಸು ಸ್ವಾಮಿ ನತಜನ ಪ್ರೇಮಿಸತತ ankita gopalarya

by gopalaryaru

ಮತಿಯ ಪಾಲಿಸು ಸ್ವಾಮಿ ನತಜನ ಪ್ರೇಮಿಸತತ ಗೋಪಾಲಾರ್ಯ ಸನ್ನುತ ಚರ್ಯ ಪ

ಕೃತಕವಾಗಿಹ ಕರ್ಮಗತಿಯ ಕಡೆಗೊತ್ತಿಹಿತರಿಲ್ಲದಿಹ ಭೋಗ ತತಿಯಕಳೆದೆತ್ತಿಸತಿಸುತರ್ಗತಿಯೆಂಬ ಮತವ ನೆಗ್ಗೊತ್ತಿಪ್ರತಿುಲ್ಲದಿಹ ಪಾದ ಭಕುತಿಯ ಬಿತ್ತಿ 1

ದೇಹವೆ ನಾನೆಂಬ ದೈನ್ಯವ ಬಿಡಿಸಿಸಾಹಸದಲಿ ಸಕಲ ಸಾಧನವ ತೊಡಿಸಿಮೋಹ ಮತ್ಸರವೆಂಬ ಮೋಸವ ಕೆಡಿಸಿಸೋಹಮೆಂಬರಿವಿನಲ್ಲಿ ಸೊಗಸಾಗಿ ನಡೆಸಿ 2

ಕಾಲಕರ್ಮಂಗಳ ಮೂಲವ ಕಿತ್ತು ಗೋಪಾಲಾರ್ಯ ನಿಜಸುಖ ಶೀಲವನಿತ್ತುಮೇಲಾದ ಮುಕುತಿಯ ಕೀಲಕಳೆದೆತ್ತುಶ್ರೀಲಕ್ಷ್ಮಿಯರಸನೆ ಚಿತ್ತವನಿತ್ತು 3

*** 

No comments:

Post a Comment