by gopalaryaru
ಮನವೊಂದು ನಿಂತರೆ ಸಾಕು ಇದಕಿಂತಘನವಾದ ಕರ್ಮವಿನ್ನೇನೊಂದು ಬೇಕು ಪ
ಮನನಿಲ್ಲದಿರುವದು ಕಾಕು ನಿನ್ನಮನವ ನಿಲ್ಲಿಸಿ ಅನ್ಯವನೆಲ್ಲವ ನೂಕುಅ.ಪಗುರುವಿನ ಚರಣಸೀಮೆಯಲಿ ನಿತ್ಯಪರಿಪೂರ್ಣರೂಪವಿದೆಂಬ ನೇಮದಲಿಅರಿಷಡುವರ್ಗದಂತ್ಯದಲಿ ತೋರುವರಿವೆ ತಾನೆಂಬ ಘನವಿವೇಕದಲಿ 1
ಕರಣ ಜಯದ ಬಳಿಸಂದು ಸಂಸರಣ ಚಿಂತೆಯ ಬಿಟ್ಟು ಮುದದಿಂದ ನಿಂದುಅರಿಯ ಪಡುವದಲ್ಲವೆಂದು ತನ್ನಿರವೆಯಾನಂದದ ಘನಪದವೆಂದು 2
ತಾಪಗಳೆಲ್ಲವ ಬಿಟ್ಟೂ ಸಾಧುಗೋಪಾಲಾರ್ಯರ ಹೃದಯದೊಳಿಟ್ಟುವ್ಯಾಪಕದಲಿ ವೃತ್ತಿ ನೆಟ್ಟೂ ುಂದೀಪರಿಯ ನಿರ್ವಿಕಲ್ಪದಲಳವಟ್ಟೂ 3
***
No comments:
Post a Comment