ವೈಕುಂಠಗಿರಿಯವಾಸನ ಮಹಿಮೆ ಸ್ಮರಿಸು
ಜೋಕೆಯಿಂದಲಿ ಪೊರೆವ ಶ್ರೀಹರಿಯ ಭಜಿಸು ||ಪ||
ಭಕ್ತ ರಕ್ಷಕ ಹರಿಯು ಭಾಗ್ಯೋದಯದ ಸಿರಿಯು
ಮುಕ್ತಿದಾಯಕ ದೇವ ಮುನಿವರದ ಕಾವ
ಮುಕ್ತಿಯೋಗ್ಯರ ಸಂಗ ಮುದದಿಂದ ನೀಡೆಂದು
ಭಕ್ತಿಯಿಂದಲಿ ಭಜಿಸೆ ಬಂದು ಪೊರೆಯುವನು ||೧||
ನೀರೊಳಗೆ ಆಡಿದನು ಭಾರ ಬೆನ್ನೊಳು ವಹಿಸಿ
ಕೋರೆ ಹಲ್ಲನು ತೆರೆದು ಕಂಭದಲಿ ಬಂದ
ಮೂರಡಿಯ ಭೂ ಬೇಡಿ ಕ್ಷತ್ರಿಯ ಕುಲವನೆ ಸವರಿ
ವೀರ ರಾವಣನಸುವ ಹೀರಿದ ಹರಿಯು ||೨||
ಶ್ರೇಷ್ಠ ಯದುಕುಲದಲ್ಲಿ ಪುಟ್ಟಿ ಬತ್ತಲೆ ಕಲಿಯ
ಕುಟ್ಟಿ ಜಗ ರಕ್ಷಿಸಿದ ಸೃಷ್ಟಿಕರ್ತ
ದಿಟ್ಟ ಮೂರುತಿ ಸತತ ಕಾಯ್ವ ಶ್ರೀ ಗೋಪಾಲ-
ಕೃಷ್ಣವಿಠಲ ಶ್ರೀನಿವಾಸ ಜಗದೊಡೆಯ ||೩||
***
Vaikunthagiriyavasana mahime smarisu
jokeyindali poreva srihariya bhajisu ||pa||
Bhakta rakshaka hariyu bhagyodayada siriyu
muktidayaka deva munivarada kava
muktiyogyara sanga mudadinda nidendu
bhaktiyindali bhajise bandu poreyuvanu ||1||
Nirolage adidanu bhara bennolu vahisi
kore hallanu teredu kambhadali banda
muradiya bhu bedi kshatriya kulavane savari
vira ravananasuva hirida hariyu ||2||
Sreshtha yadukuladalli putti battale kaliya
kutti jaga rakshisida srushtikarta
ditta muruti satata kayva sri gopala-
krishnavittala srinivasa jagadodeya ||3||
***
ವೈಕುಂಠಗಿರಿಯವಾಸನ ಮಹಿಮೆ ಸ್ಮರಿಸು
ಜೋಕೆಯಿಂದಲಿ ಪೊರೆವ ಶ್ರೀಹರಿಯ ಭಜಿಸು ಪ.
ಭಕ್ತ ರಕ್ಷಕ ಹರಿಯು ಭಾಗ್ಯೋದಯದ ಸಿರಿಯು
ಮುಕ್ತಿದಾಯಕ ದೇವ ಮುನಿವರದ ಕಾವ
ಮುಕ್ತಿಯೋಗ್ಯರ ಸಂಗ ಮುದದಿಂದ ನೀಡೆಂದು
ಭಕ್ತಿಯಿಂದಲಿ ಭಜಿಸೆ ಬಂದು ಪೊರೆಯುವನು 1
ನೀರೊಳಗೆ ಆಡಿದನು ಭಾರ ಬೆನ್ನೊಳು ವಹಿಸಿ
ಕೋರೆ ಹಲ್ಲನು ತೆರೆದು ಕಂಭದಲಿ ಬಂದ
ಮೂರಡಿಯ ಭೂ ಬೇಡಿ ಕ್ಷತ್ರಿಯ ಕುಲವನೆ ಸವರಿ
ವೀರ ರಾವಣನಸುವ ಹೀರಿದ ಹರಿಯು 2
ಶ್ರೇಷ್ಠ ಯದುಕುಲದಲ್ಲಿ ಪುಟ್ಟಿ ಬತ್ತಲೆ ಕಲಿಯ
ಕುಟ್ಟಿ ಜಗ ರಕ್ಷಿಸಿದ ಸೃಷ್ಟಿಕರ್ತ
ದಿಟ್ಟ ಮೂರುತಿ ಸತತ ಕಾಯ್ವ ಶ್ರೀ ಗೋಪಾಲ-
ಕೃಷ್ಣವಿಠಲ ಶ್ರೀನಿವಾಸ ಜಗದೊಡೆಯ 3
****
No comments:
Post a Comment