ರಾಗ - : ತಾಳ -
ಬೆಳಗೀರೆ ಆರತಿಯಾ ಹಯಗಿರಿ l
ನಿಲಯ ಶ್ರೀ ನರಸಿಂಗಗೆ l
ಜಲಧಿಶಯನನಿಗೆ ಜಾಹ್ನವೀ ಜನಕಾಗೆ l
ಅಲರಂಭಾ ಶತಕೋಟಿ ತೇಜ ಸೌಂದರ್ಯಗೆ ll ಪ ll
ಮಚ್ಛಾವತಾರಗೆ ಮಂದರಧರನಿಗೆ l
ಹೆಚ್ಚಿನ ಹೇಮಾಕ್ಷನ ಕೊಂದ ಧೀರಗೆ l
ಮೆಚ್ಚಿ ಪ್ರಹ್ಲಾದನ್ನ ಮಾನಾ ಕಾಯಿದಾಗೆ l
ಸಚ್ಚಿದಾನಂದ ಶ್ರೀ ವಾಮನ ರೂಪಗೆ ll 1 ll
ಪರಶುವ ಪಿಡಿದು ಕ್ಷತ್ರಿಯರ ಸಂಹರಿಪಾಗೆ l
ಹರುಷದಿಂದರೆಯ ಪೆಣ್ಗೈದಾ ಶ್ರೀರಾಮಗೆ l
ದುರುಳ ಕಂಸನಾ ಕೊಂದು ಧರೆಯ ಪಾಲಿಸಿದಾಗೆ l
ಪುರದಾ ಸತಿಯರ ವ್ರತವನಳಿದಾ ಶ್ರೀ ಬೌಧ್ಧಗೆ ll 2 ll
ಕಲಿಯುಗದಲಿ ರಾವುತನಾದ ಧೀರಗೆ l
ವಲಿದಾ ಕಿಂಕರರ ಹೃತ್ಕಮಲ ದ್ವಿರೇಭಾಗೆ l
ಸಲೆ ಭಕ್ತರನು ಪೊರೆವ ಪ್ರಸನ್ನವಿಟ್ಠಲನಿಗೆ l
ಸುಲಭ ದೇವರದೇವಾ ಶ್ರೀ ವೆಂಕಟೇಶನಿಗೆ ll 3 ll
***
No comments:
Post a Comment