Saturday 1 May 2021

ಶ್ರೀರಂಗದಲಿ ರಾಜಿಪ ಶ್ರೀ ಸುಮತೀಂದ್ರತೀರ್ಥರ ankita lakumeesha sumateendra teertha stutih

sumateendra teertha rayara mutt yati stutih

ರಚನೆ : ಶ್ರೀ ಕುರುಡಿ ರಾಘವೇಂದ್ರಾಚಾರ್ಯರು 

ಅಂಕಿತ : ಶ್ರೀ ಪಂಚಮುಖಿ ಪ್ರಾಣದೇವರ ಪ್ರಸಾದಾಂಕಿತ " ಲಕುಮೀಶ "


ಶ್ರೀರಂಗದಲಿ ರಾಜಿಪ ಶ್ರೀ -

ಸುಮತೀಂದ್ರತೀರ್ಥರ ।

ವಾರಿಜಂಘ್ರಿಯ ಸ್ತುತಿಪೆ ।। ಪಲ್ಲವಿ ।।


ಸಾರಿದವರ ದುಷ್ಟ 

ಘೋರ ಪಾಪವ ಕಳೆದು ।

ನಾರಾಯಣನೂರ 

ದಾರಿಯ ತೋರುವ ।। ಅ ಪ ।।


ಮಾರುತ ಮಧ್ವಶಾಸ್ತ್ರ 

ವಾರಿಧಿ ಮೀನರೆನಿಸೆ ।

ಸೂರೀ೦ದ್ರ ಮುನಿವರರು ।

ಧಾರುಣಿ ಸುತ್ತೆ ವಲ್ಲಭಾಂಘ್ರಿಯ ।

ವಾರಿಜಂಗಳ ನೆನೆದು ಕೋವಿದ ।

ಸೇರ್ದ ಸಭೆಯೊಳು ಸುಮತೀಂ-

ದ್ರರೆಂದು ಚಾರು ಸಂನ್ಯಾಸ 

ನೀಡೆ ಮೆರೆದಂಥ  ।। ಚರಣ ।।


ಕಾಲಕಾಲದಿ ಶ್ರೀ ಮೂಲ-

ರಾಮನ ಅರ್ಚಿಸಿ ।

ಶೀಲ ಸದ್ಗುಣಿಯೆನಿಸಿ ।

ಆಲಿಸಿ ಮತ ತ್ರಯದ ಮೇಳ ।

ಜಾಲ ವೈಭವದಿಂದ ಮಧುರೆಲಿ ।

ಶೀಲೆ ರಾಣಿ ಮಂಗಮ್ಮನಿದಿರೊಳು ।

ಲೀಲೆಯಲಿ ವಾಕ್ಯಾರ್ಥ 

ಗೆದ್ದಿರ ।। ಚರಣ ।।


ಮಂಗಮ್ಮ ಇವರೀಗೆ ವೈಕುಂಠ 

ವಾಸುದೇವನ ।

ಶೃಂಗರದ ಕಲ್ಪವೃಕ್ಷ ।

ಸಂಗರದೊಳಾ 

ನೀಡೆ ಇವರಿಗೆ ।

ಇಂಗಿತಜ್ಞ ಉಪೇಂದ್ರತೀರ್ಥಗೆ ।

ರಂಗ ಶ್ರೀ ಲಕುಮೀಶ 

ಮೂಲರಾಮನ ।

ಮಂಗಳೋತ್ಸವ 

ದಿಂದ ಗೆದ್ದರ ।। ಚರಣ ।।

****


ಶ್ರೀರಂಗದಲಿ ರಾಜಿಪ ಶ್ರೀ -

ಸುಮತೀಂದ್ರತೀರ್ಥರ ।

ವಾರಿಜಂಘ್ರಿಯ ಸ್ತುತಿಪೆ ।। ಪಲ್ಲವಿ ।।


ಸಾರಿದವರ ದುಷ್ಟ 

ಘೋರ ಪಾಪವ ಕಳೆದು ।

ನಾರಾಯಣನೂರ 

ದಾರಿಯ ತೋರುವ ।। ಅ ಪ ।।


ಮಾರುತ ಮಧ್ವಶಾಸ್ತ್ರ 

ವಾರಿಧಿ ಮೀನರೆನಿಸೆ ।

ಸೂರೀ೦ದ್ರ ಮುನಿವರರು ।

ಧಾರುಣಿ ಸುತ್ತೆ ವಲ್ಲಭಾಂಘ್ರಿಯ ।

ವಾರಿಜಂಗಳ ನೆನೆದು ಕೋವಿದ ।

ಸೇರ್ದ ಸಭೆಯೊಳು ಸುಮತೀಂ-

ದ್ರರೆಂದು ಚಾರು ಸಂನ್ಯಾಸ 

ನೀಡೆ ಮೆರೆದಂಥ  ।। ಚರಣ ।।


ಕಾಲಕಾಲದಿ ಶ್ರೀ ಮೂಲ-

ರಾಮನ ಅರ್ಚಿಸಿ ।

ಶೀಲ ಸದ್ಗುಣಿಯೆನಿಸಿ ।

ಆಲಿಸಿ ಮತ ತ್ರಯದ ಮೇಳ ।

ಜಾಲ ವೈಭವದಿಂದ ಮಧುರೆಲಿ ।

ಶೀಲೆ ರಾಣಿ ಮಂಗಮ್ಮನಿದಿರೊಳು ।

ಲೀಲೆಯಲಿ ವಾಕ್ಯಾರ್ಥ 

ಗೆದ್ದಿರ ।। ಚರಣ ।।


ಮಂಗಮ್ಮ ಇವರೀಗೆ ವೈಕುಂಠ 

ವಾಸುದೇವನ ।

ಶೃಂಗರದ ಕಲ್ಪವೃಕ್ಷ ।

ಸಂಗರದೊಳಾ 

ನೀಡೆ ಇವರಿಗೆ ।

ಇಂಗಿತಜ್ಞ ಉಪೇಂದ್ರತೀರ್ಥಗೆ ।

ರಂಗ ಶ್ರೀ ಲಕುಮೀಶ 

ಮೂಲರಾಮನ ।

ಮಂಗಳೋತ್ಸವ 

ದಿಂದ ಗೆದ್ದರ ।। ಚರಣ ।।

*****

No comments:

Post a Comment