ಶ್ರೀ ರಾಘವೇಂದ್ರರಾಯರ ಪಾದಾಂಬುಜ ।
ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।
ನಾರಾಯಣ ನಾಮ ಪಾರಾಯಣರ । ಪಾ
ದಾರವಿಂದ ಸುಧಾ ರಸವ ಬೀರುವಾ ।। ಅ. ಪ ।।
ಅಲವಬೋಧ ಸತ್ಕುಲ ದೀಪರೆನಿಸಿದ ।
ಹುಲುಗಿಯ ನರಸಪ್ಪಾಚಾರ್ಯರ ।
ಕಲಿಯೊಳು ಕಲಿಕೃತ ಕಲ್ಮಶ ಕಳೆವೆ ।
ನಿರ್ಮಲ ರಾಯ್ಚೂರು ಕೃಷ್ಣಾಚಾರ್ಯರ ।।
ಇಳೆಯೊಳು ಚುಷಷ್ಠಿ ಕಳದಿ ನಿಪುಣರಾದ ।
ಯಳಮೇಲಿ ಹಯಗ್ರೀವಾಚಾರ್ಯರ ।
ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।
ಬಲವಂತ ಯೋಗಿ ನಾರಾಯಣಾರ್ಯರ ।।
ಧರಣಿದೇವರಿಗೆ ನಿರುತಾನ್ನವನೀವ ।
ವರ ಹರಿಹರ ಭೀಮಾಚಾರ್ಯರ ।
ಹರಿದಾಸರಿಗೆ ಮಂದಿರವಾದ ।
ಇಭರಾಂಪುರದಲ್ಲಿ ಮೆರೆವ ಕೃಷ್ಣಾಚಾರ್ಯರ ।।
ಶಿರಿಪಾದ ಪುತ್ರ ಪಂಡಿತರೊಳಗಗ್ರೇ ।
ಸರ ಶ್ರೀ ರಂಗದ ರಾಮಾಚಾರ್ಯರ ।
ಸುರಪುರ ಶ್ರೀ ನರಹರಿಯ ಪಾದಾಂಬುಜ ।
ಸಿರಿಯೊಳ್ಮೆರೆವ ಅಸ್ಮದ್ಗುರು ರಾಜಾಚಾರ್ಯರ ।।
ಶ್ರೀ ರಾಘವೇಂದ್ರರಾಯರ ಭೂಮಿಯೊಳವ ।
ಮಾಡಿದ ಆರಂಭದಿಂ ।
ದಾರಾರು ಬೃಂದಾವನ ಪೂಜಾ ಸ್ತೋತ್ರದಿಂ ।
ದಾರಾಧಿಸುವರಾನಂದದಿ ।।
ಸಾರ ಭಕ್ತರ ಪಾದಾರವಿಂದಕೆ । ನಮ ।
ಸ್ಕಾರ ಮಾಡಿರೋ ಸಾಷ್ಟಾಂಗದಿ ।
ಧೀರ ಶ್ರೀ ಕಮಲೇಶವಿಠ್ಠಲ ವಲಿದು ತನ್ನ ।
ಸಾರೂಪ್ಯವ ಕೊಟ್ಟು ಸಲಹುವ ಸಂತತಾ ।।***
ರಾಘವೇಂದ್ರ ರಾಯರ ಪಾದಾಂಬುಜ
pallavi
rAghavEndra rAyara pAdAmbuja ArAdhakada koNDADirO
anupallavi
nArAyaNa nAma pArAyaNarA pAdAravindasudhA sArava biDuva
caraNam
sAri bhaktara pAdAravindaku namaskAra mADi sASTAngadindali
vIra shrI kamalEsha viThalarAyana tanna sArOpya koTTu salahuva santata
***
ಗುರು ಮಹಿಮೆ : ಯಳಮೇಲಿ ಹಯಗ್ರೀವಾಚಾರ್ಯರಿಗೆ ಅನುಗ್ರಹ
ವಿದ್ವಾನ್ ಶ್ರೀಯಳಮೇಲಿ ಹಯಗ್ರೀವಾಚಾರ್ಯರು ಅಪ್ಪಾವರ ಸಮಕಾಲೀನವರು ಮತ್ತು ಅವರ ವಿಶೇಷ ಅನುಗ್ರಹಕ್ಕೆ ಪಾತ್ರರಾದವರು. ಶ್ರೀ ಸುರಪುರ ಆನಂದ ದಾಸರು ತಮ್ಮ ಸಮಕಾಲೀನ ಎಲ್ಲಾ ಅಪರೋಕ್ಷ ಜ್ಞಾನಿಗಳನ್ನು ಗುರುತಿಸಿ ಶ್ರೀ ರಾಘವೇಂದ್ರರಾಯರ ಪಾದಾಂಬುಜ ಆದಾರಾಧಕರ ಕೊಂಡಾಡಿರೋ ಕೀರ್ತನೆಯಲ್ಲಿ ಗುರುತಿಸಿದ್ದಾರೆ.
ಈ ಕೀರ್ತನೆಯಿಂದ ಸ್ಪಷ್ಟವಾಗುವ ವಿಷಯವೇನೆಂದರೆ ಇವರು ರಾಯರ ವಿಶೇಷ ಕರುಣಾ ಸುಪಾತ್ರರಾದವರು. ವಿದ್ವಾನ್ ಶ್ರೀ ಹಯಗ್ರೀವಾಚಾರ್ಯರು ಆ ಕಾಲದ ಮಹಾನ್ ಪಂಡಿತರು. ಅವರಿಗೆ ೧೦೬ ಶ್ರೇಷ್ಠರಾದ ಶಿಷ್ಯಸಂಪತ್ತು ಇತ್ತು . ಶ್ರೀ ಸುರಪುರದ ಆನಂದ ದಾಸರು ಹೇಳುವಂತೆ ಶ್ರೀ ಹಯಗ್ರೀವಾಚಾರ್ಯರು ಎಲ್ಲಾ 64 ವಿದ್ಯಗಳ ಪಾರಂಗತರು. ಒಮ್ಮೆ ಶ್ರೀ ಆಚಾರ್ಯರು ಸುರಪುರದಲ್ಲಿ ನಡೆದ ವಾಕ್ಯರ್ಥದಲ್ಲಿ ಪರವಾದಿಗಳನ್ನು ನಿಗ್ರಹಿಸುತ್ತಾರೆ. ಈ ಘೋಷ್ಠಿಯಲ್ಲಿ ಶ್ರೀಸತ್ಯಪರಾಯಣತೀರ್ಥರು ಶ್ರೀ ಆಚಾರ್ಯರ ವಿದ್ವತ್ ನ್ನು ನೋಡಿ ಅವರಿಗೆ ವಿಠಲ ದೇವರ ಪ್ರತಿಮೆಯನ್ನು ನೀಡಿ ಅನುಗ್ರಹ ಮಾಡುತ್ತಾರೆ.
ಶ್ರೀ ಆಚಾರ್ಯರು ಮಂತ್ರಾಲಯಕ್ಕೆ ಬಂದಾಗ ಶ್ರೀ ಅಪ್ಪಾವರನ್ನು ಸಂದರ್ಶಿಸುತ್ತಾರೆ. ಇದೇ ಸಂದರ್ಭದಲ್ಲಿ ತಮಗೆ ಸಂತಾನದ ಅನುಗ್ರಹಕ್ಕೆ ಪ್ರಾರ್ಥನೆ ಮಾಡಿದಾಗ ಅಪ್ಪಾವರು ನಿಮಗೆ ನಿಮ್ಮಂತಹ ವಿದ್ಯಾವಂತನಾದ ಪುತ್ರರತ್ನ ಜನಿಸುತ್ತಾನೆ ಅಂತ ಅಭಯ ನೀಡಿ ಮಂತ್ರಾಕ್ಷತೆಯನ್ನು ಕೊಟ್ಟು ಅನುಗ್ರಹುಸುತ್ತಾರೆ.
ಅಪ್ಪಾವರ ಅನುಗ್ರಹದಿಂದ ಶ್ರೀಆಚಾರ್ಯರಿಗೆ ಗಂಡು ಮಗುವಾಗುತ್ತದೆ. ಮಗುವುಗೆ ವಿಠ್ಠಲ ಎಂದು ನಾಮಕರ್ಣ ಮಾಡುತ್ತಾರೆ. ಶ್ರೀವಿಠಲಾಚಾರ್ಯರು ತಂದೆಯಂತೆ ಮಹಾನ್ ವಿದ್ವಾಂಸರು. ಶ್ರೀವಿಠಲಾಚಾರ್ಯರು ತಮ್ಮ ತಂದೆಹಾಕಿಕೊಟ್ಟ ಮಾರ್ಗದಲ್ಲೇ ನಡೆದು ತಮ್ಮ ಪ್ರತಿಯೊಂದು ಶಾಂತಿಪಾಠವನ್ನು ಗುರುಸರ್ವಭೌಮರ ಸನ್ನಿಧಿಯಲ್ಲೇ ಜರುಗಿಸುತ್ತಿದರು.
ಶ್ರೀಯಳಮೇಲಿ ಹಯಗ್ರೀವಾಚಾರ್ಯರಂತಹ ಅಪರೋಕ್ಷ ಜ್ಞಾನಿಗಳಿಗೆ ಶ್ರೀಅಪ್ಪಾವರ ಮಾಡಿದಾನುಗ್ರಹದಿಂದ ಅವರ ತಪಃಶಕ್ತಿ ನಮ್ಮ ಊಹೆಗೆ ಮೀರಿದ್ದಾಗಿದೆ.
ಶ್ರೀ ಸುರಪುರದ ಆನಂದ ದಾಸರು (ankita kamalesha vittala) ಶ್ರೀ ರಾಘವೇಂದ್ರ ಸ್ವಾಮಿಗಳ 8 ಮಂದಿ ಅಂತರಂಗದ ಶಿಶ್ಯರನ್ನು ತೋರಿಸಿಕೊಟ್ಟ ಮಹಾನುಭಾವರು. .... ಆ 8 ಮಂದಿ ಶಿಷ್ಯರನ್ನು ಸ್ಮರಿಸುವುದೇ ಸುದಿನ...ಬನ್ನಿ ಆ ಹಾಡಿನಲ್ಲಿ ಬರುವ ಆ ಶಿಷ್ಯರನ್ನು ಸ್ಮರಿಸೋಣ...
ಗುರುಕರುಣ ಹೊಂದುವುದು ಪರಮದುರ್ಲಭವಯ್ಯ
ಪರಿಪರಿ ವ್ರತಗಳ ಚರಿಸಲು ಫಲವೇನು
ಶರೀರಾದಿ ಪುತ್ರ ಮಿತ್ರ ಕಳತ್ರ ಬಾಂಧವರು
ಇರಿಸೋರೆ ಸದ್ಗತಿಗೆ ಸಾಧನದಿ
ನಿರತವು ಗುರುಪಾದ ನಿಜವಾಗಿ ಮನದಲ್ಲರಿತು ಭಜಿಸಲು
ಅಖಿಳಸಂಪದವಕ್ಕು ಪುರಂದರವಿಠಲ...
ನಿನ್ನ ದಾಸರ,ದಾಸರ,ದಾಸರ ದಾಸನೆಂದೆನಿಸಯ್ಯ ಹರಿಯೆ!!!
ಶ್ರೀ ದಾಸಾರ್ಯರ ಸೇವೆಯಲ್ಲಿ....
💐🙏🏼ಎಸ್.ವಿಜಯ ವಿಠ್ಠಲ🙏🏼💐
***
ಶ್ರೀ ರಾಘವೇಂದ್ರರಾಯರ ಪಾದಾಂಬುಜ ।
ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।
ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।
ನಾರಾಯಣ ನಾಮ ಪಾರಾಯಣರ ।
ದಾರವಿಂದ ಸುಧಾ ರಸವ ಬೀರುವಾ ।। ಅ. ಪ ।।
ಅಲವಬೋಧ ಸತ್ಕುಲ ದೀಪರೆನಿಸಿದ ।
ಹುಲುಗಿಯ ನರಸಪ್ಪಾಚಾರ್ಯರ ।
ಕಲಿಯೊಳು ಕಲಿಕೃತ ಕಲ್ಮಶ ಕಳೆವೆ । ನಿ ।
ರ್ಮಲ ರಾಯ್ಚೂರು ಕೃಷ್ಣಾಚಾರ್ಯರ ।।
ಇಳೆಯೊಳು ಚುಷಷ್ಠಿ ಕಳದಿ ನಿಪುಣರಾದ ।
ಯಳಮೇಲಿ ಹಯಗ್ರೀವಾಚಾರ್ಯರ ।
ಹಲವು ಸಜ್ಜನರೊಳು ತಿಳಿಸಿ **ಕೊಳ್ಳದಲಿಪ್ಪ ।
ಬಲವಂತ ಯೋಗಿ ನಾರಾಯಣಾರ್ಯರ** ।। ಚರಣ ।।
ಧರಣಿದೇವರಿಗೆ ನಿರುತಾನ್ನವನೀವ ।
ವರ ಹರಿಹರ ಭೀಮಾಚಾರ್ಯರ ।
ಹರಿದಾಸರಿಗೆ ಮಂದಿರವಾದ । *ಇಭರಾಂ
ಪುರದಲ್ಲಿ ಮೆರೆವ ಕೃಷ್ಣಾಚಾರ್ಯರ* ।।
ಶಿರಿಪಾದ ಪುತ್ರ ಪಂಡಿತರೊಳಗಗ್ರೇ ।
ಸರ ಶ್ರೀ ರಂಗದ ರಾಮಾಚಾರ್ಯರ ।
ಸುರಪುರ ಶ್ರೀ ನರಹರಿಯ ಪಾದಾಂಬುಜ ।
ಸಿರಿಯೊಳ್ಮೆರೆವ ಅಸ್ಮದ್ಗುರು ರಾಜಾಚಾರ್ಯರ ।। ಚರಣ ।।
ಶ್ರೀ ರಾಘವೇಂದ್ರರಾಯರ ಭೂಮಿಯೊಳವ ।
ಮಾಡಿದ ಆರಂಭದಿಂ ।
ದಾರಾರು ಬೃಂದಾವನ ಪೂಜಾ ಸ್ತೋತ್ರದಿಂ ।
ದಾರಾಧಿಸುವರಾನಂದದಿ ।।
ಸಾರ ಭಕ್ತರ ಪಾದಾರವಿಂದಕೆ । ನಮ ।
ಸ್ಕಾರ ಮಾಡಿರೋ ಸಾಷ್ಟಾಂಗದಿ ।
ಧೀರ ಶ್ರೀ ಕಮಲೇಶವಿಠ್ಠಲ ವಲಿದು ತನ್ನ ।
ಸಾರೂಪ್ಯವ ಕೊಟ್ಟು ಸಲಹುವ ಸಂತತಾ ।। ಚರಣ ।।
***
No comments:
Post a Comment