ಪುರಂದರದಾಸರು
ಏನೆಂದರೇನು ನೀನೆನ್ನ ಕಾಯೊ-|
ಏನೆಂದರೇನು ನೀನೆನ್ನ ಕಾಯೊ-|
ನೀನೆ ನನಗೆಂದೆಂದು ತಂದೆ-ತಾಯೊ. ಪ
ಆಪತ್ತು ಕಾಲಕ್ಕೆ ಅನಂತ ನೀ ಕಾಯೊ |ತಾಪಜ್ವರಕೆ ತ್ರಿವಿಕ್ರಮನೆ ಕಾಯೋ ||ಭೂಪತಿಯು ಮುನಿದರೆ ಶ್ರೀಪತಿಯೆ ನೀ ಕಾಯೊ |ವ್ಯಾಪಾರ ಧರ್ಮವನು ಯದುಪತಿಯೆ ನೀ ಕಾಯೊ.............. 1
ಸರುಪ ಸುತ್ತಿದರೆ ಸರ್ವೋತ್ತಮನೆ ನೀ ಕಾಯೊ |ಪರಿಪರಿಯ ದೋಷಗಳಪದ್ಮನಾಭಕಾಯೊ ||ಹರಕು ಸಂಸಾರವನುಹರಿಬಂದು ನೀ ಕಾಯೊ |ದೊರಕದೀ ವೇಳೆಯಲಿ ದೊರೆ ನೀನೆ ಕಾಯೊ....................... 2
ನರರು ಮುನಿದಿರಲು ನಾರಾಯಣನೆ ನೀ ಕಾಯೊ |ಪುರಬೆನ್ನುಗೊಳಲು ಪುರುಷೋತ್ತಮನೆ ನೀ ಕಾಯೊ |ಅರಿಯು ಅಡ್ಡಾದರೆ ಅಚ್ಯುತನೆ ನೀ ಕಾಯೊ ||ಕರಕರೆಯ ಸಂಸಾರ ಕೃಷ್ಣ ನೀ ಕಾಯೊ....................... 3
ಮದಮತ್ಸರವನು ಮಧುಸೂದನನೆ ನೀ ಕಾಯೊ |ಮದಬಂದ ವೇಳೆಯಲಿ ಮಾಧವನೆ ಕಾಯೊ ||ಹೃದಯದಾ ಕಪಟವ ಹೃಷಿಕೇಶ ನೀ ಕಾಯೊ |ಒದಗಿದ ಕಲ್ಮಷವ ವಾಸದೇವ ಕಾಯೊ....................... 4
ಕಾರ್ಪಣ್ಯ ದೋಷವ ಸರ್ಪಶಯನನೆ ಕಾಯೊ |ಒಪ್ಪುವ ಪ್ರಕಾಶವ ಕೇಶವನೆ ಕಾಯೊ |ಅಪ್ಪ ತಿರುಮಲರಾಯ ಪುರಂದರವಿಠಲನೆ |ಒಪ್ಪಿಅನವರತನಿಶ್ಚಿಂತೆಯನು ಕಾಯೊ.......................*5
***

pallavi
EnendarEnu nInenna kAyO nIne nanagendendu tande tAyo
caraNam 1
Apattu kAlakke ananta nI kAyo tApa jvarake trivikramane kAyo
bhUpatiyu munidare shrIpatiye nI kAyo vyApAra dharmavanu yadupatiye kAyo
caraNam 2
sarUpa suttidare sarvOttamane nI kAyo paripariya dOSagaLa padmanAbha kAyo
haraku samsAravanu hari bandu nI kAyo dorakadI vELeyali dore nIne kAyo
caraNam 3
nararu munidiralu nArAyaNane nI kayo pura bennukoLalu puruSOttamane kAyo
ariyu aTTAdare acyutane nI kAyo karakareya samsAra krSNa nI kAyo
caraNam 4
madamatsaravanu madhusUdanane nI kAyo madabanda vELeyali mAdhavane kAyo
hrdayadA kapaTava hrSIkEsha nI kAyo odagida kalmaSava vAsudEva kAyo
caraNam 5
kArpaNya dOSagaLa sarpashayanane kAyo oppuva prakAshava kEshavane kAyo
appa tirumalarAya purandara viTTalane oppi anavarata niscinteyanu kAyo
***
No comments:
Post a Comment