Wednesday, 4 December 2019

ಇಂತಿಂಥಾದ್ದೆಲ್ಲವು ಬರಲಿ ನಿಶ್ಚಿಂತೆಂಬುದು purandara vittala

ರಾಗ ಪಂತುವರಾಳಿ ಏಕತಾಳ

ಇಂತಿಂಥಾದ್ದೆಲ್ಲವು ಬರಲಿ, ನಿ-
ಶ್ಚಿಂತೆಂಬುದು ನಿಜವಾಗಿರಲಿ ||ಪ||

ಬಡತನವೆಂಬುದು ಕಡೆತನಕಿರಲಿ
ಒಡವೆ ವಸ್ತುಗಳು ಹಾಳಾಗ್ಹೋಗಲಿ
ನಡೆಯುವ ದಾರಿ ಎನ್ನ ಬಿಟ್ಟ್ಹ್ಹೋಗಲಿ
ಅಡವಿಲಿ ಗಿಡಗಳು ಸಿಗದ್ಹಾಗ್ಹೋಗಲಿ ||

ಉದ್ಯೋಗವೆಂಬುದು ಮೊದಲೇ ಹೋಗಲಿ
ಬುದ್ಧಿಯು ಎನಗೆ ಮದಡಿಸಿ ಹೋಗಲಿ
ಮದ್ದುಹಾಕಿ ಎನ್ನನು ಕೊಲ್ಲಲಿ
ಹದ್ದುನಾಯಿ ಹರಕೊಂಡು ತಿನ್ನಲಿ ||

ಗಂಡಸುತನ ಎನಗಿರದ್ಹಾಗ್ಹೋಗಲಿ
ಹೆಂಡರು ಮಕ್ಕಳು ಎನ್ನನು ಬಿಡಲಿ
ಕುಂಡೆ ಮಂಡೆ ಎಲ್ಲಾರುದಿಯಲಿ
ಭಂಡುಮಾಡಿ ಜನರೆಲ್ಲ ನಗಲಿ ||

ಡಾಂಭಿಕ ಇವನೆಂತೆಲ್ಲರು ಎನಲಿ
ಅಂಬರ ಮುರಕೊಂಡು ಮೇಲೆ ಬೀಳಲಿ
ನಂಬಿಕೆ ಎನ್ನಲಿರದ್ಹಾಗ್ಹೋಗಲಿ
ಡೊಂಬಿ ಸೂಳೆಮಗನೆಂತೆನಲಿ ||

ಆಶಾಪಂಥ ನಡೆಯದ್ಹಾಗ್ಹೋಗಲಿ
ಹಾಸ್ಯಮಾಡಿ ಜನರು ನಗಲಿ
ಈಶ ಪುರಂದರವಿಠಲನ ನಾಮ
ಒಂದೇ ಮನದಲ್ಲಿ ಇರಲಿ ||
***

pallavi

intinthAddellavu barali nishcintembudu nijavAgirali

caraNam 1

baDatanavembudu kaDetanakirali oDave vastugaLu hALAghOgali
naDeyuva dAri ena biThOgali aDavili giDagaLu sigadhAghOgali

caraNam 2

udyOgembudu modale hOgali buddhiyu enage madaDisi hOgali
maddu hAki ennanu kollali haddu nAyi harakoNDu tinnali

caraNam 3

gaNDasutana enagiradhAghOgali hoNdiru makkaLu ennanu biDali
kuNDe maNDe ellArudiyali bhaNDu mADi janarella nagali

caraNam 4

Dambhika ivanentellaru enali ambara murakoNDu mEle bILali
nambige ennalliradhAghOgali Dombi suLemaganendenali

caraNam 5

A shApanda naDeyadhAghOgali hAsya mADi janaru nagali
Isha purandara viTTala nAma dAse onde manadalli irali
***

No comments:

Post a Comment