Friday 3 December 2021

ಏನ ಪೇಳಲೆ ನಾನು ಕೃಷ್ಣನ ಮಹಿಮೆ ಯಾರಿಗೂ purandara vittala ENA PELALE NAANU KRISHNA MAHIME YAARIGOO



ಏನ ಪೇಳಲೆ ನಾನು ಕೃಷ್ಣನ ಮಹಿಮೆ, ಯಾರಿಗೂ ತಿಳಿಯದಮ್ಮ ||ಪ||   

ಹೊತ್ತಾರೆದ್ದು ಯಶೋದೆ ಮುತ್ತು ಪೋಣಿಸುತ್ತಿದ್ದಳು, 
ಹತ್ತಿರಿದ್ದ ಕೃಷ್ಣ ಬಂದು ಒಂದು ಮುತ್ತು ತೆಗೆದುಕೊಂಡು 
ಸುತ್ತಲಿದ್ದ ಹುಡುಗರ ಸಹಿತ ಹಿತ್ತಲೊಳಗೆ ಬಿತ್ತಿ ಹೋದ ||ಅಪ||

ಪರಿಪರಿ ಚಿಂತೆಯಿಂದ ಯಶೋದೆ ಗೋಪ್ಯರ ಕಳುಹಿದಳು, 
ಸಂದು ಸಂದಲ್ಲಿ ಹುಡುಕಿ ಹುಡುಕಿ ಕಂದ ಕಾಣನೆಂದು ಬರಲು, 
ಒಂದು ಕ್ಷಣದಲ್ಲಿ ಕೃಷ್ಣ ಬಂದು ಎದುರಾಗಿ ನಿಂದ ಕಂದ ||೧||

ಕಂದಯ್ಯನ ಕರವ ಪಿಡಿದು, ಯಶೋದೆ ಕರೆ ತಂದಳು ಮನೆಗೆ, 
ಕಂದ ಬಹಳ ಹಸಿದನೆಂದು ತುತ್ತು ಮಾಡಿ ಉಣಿಸಿದಳು, 
ಕಂದ ಮುತ್ತು ತೋರಿಸು ಚಂದಿರ ನೀನೆಂದು ಮುದ್ದಿಸಿದಳು ||೨|| 

ತಾಯ ಕರೆದು ಹಿತ್ತಲೊಳಗೆ ಮುತ್ತಿನ ಗಿಡವ ತೋರಿಸಿದ 
ಪಂಟೆ ಪಂಟೆಗೆ ಎಂಟು ಎಂಟು ಗೊಂಚು ಗೊಂಚು ಜೋಲುತಿರಲು, 
ಕಡಿದು ಕಡಿದು ರಾಶಿ ಹಾಕಿದ ಪರಮ ಪುರಂದರ ವಿಠಲರಾಯ ||೩|| 
***
ರಾಗ ಕಲ್ಯಾಣಿ. ಅಟ ತಾಳ (raga tala may differ in audio)

Ena pELale nAnu kRuShNana mahime, yArigU tiLiyadamma ||pa||   

hottAreddu yaSOde muttu pONisuttiddaLu, 
hattiridda kRuShNa baMdu oMdu muttu tegedukoMDu 
suttalidda huDugara sahita hittaloLage bitti hOda ||apa||

paripari ciMteyiMda yaSOde gOpyara kaLuhidaLu, 
saMdu saMdalli huDuki huDuki kaMda kANaneMdu baralu, 
oMdu kShaNadalli kRuShNa baMdu edurAgi niMda kaMda ||1||

kaMdayyana karava piDidu, yaSOde kare taMdaLu manege, 
kaMda bahaLa hasidaneMdu tuttu mADi uNisidaLu, 
kaMda muttu tOrisu caMdira nIneMdu muddisidaLu ||2|| 

tAya karedu hittaloLage muttina giDava tOrisida 
paMTe paMTege eMTu eMTu goMcu goMcu jOlutiralu, 
kaDidu kaDidu rASi hAkida parama puraMdara viThalarAya ||3||
***

pallavi

Ena hELale nAnu krSNana mahimeyArigU tiLidanamma A : hottAreddu yashOde muttu pONisutiddalu hattiridda krSNa bandu ondu muttu tegedu koNDu suttalidda huDugara sahita hittaloLage bitti pOda

caraNam 1

paripari cinteyinda yashOde nAriyara kaLuhidaLu sandu sandili huDugi
huDugi kanda kANanendu baralu ondu kSaNadali krSNa bandu edurAgi ninda

caraNam 2

kandayyana kara piDidu yashOde kare tandaLaramanege kanda bahaLa
hasidanendu tuttu mADi uNisidaLu muttu Enu mADideyendu siTTininda kELidaLu

caraNam 3

hetta tAya karedu koNDu hittalolage muttina kiDa tOrisida paNDe panDEge eNTu
eNTu goncu goncu jOlutiralu kaDidu kaDidu rAshi hAkida parama purandara viTTalarAya
***
ಏನ ಹೇಳಲೆ ನಾನು ಕೃಷ್ಣನ ಮಹಿಮೆ
ಯಾರಿಗೂ ತಿಳಿದನಮ್ಮ ||ಪ||

ಹೊತ್ತಾರೆದ್ದು ಯಶೋದೆ ಮುತ್ತು ಪೋಣಿಸುತಿದ್ದಳು
ಹತ್ತಿರಿದ್ದ ಕೃಷ್ಣ ಬಂದು ಒಂದು ಮುತ್ತು ತೆಗೆದುಕೊಂಡು
ಸುತ್ತಲಿದ್ದ ಹುಡುಗರ ಸಹಿತ
ಹಿತ್ತಲೊಳಗೆ ಬಿತ್ತಿ ಪೋದ ||

ಪರಿಪರಿ ಚಿಂತೆಯಿಂದ ಯಶೋದೆ
ನಾರಿಯರ ಕಳುಹಿದಳು, ಸಂದು ಸಂದಿಲಿ ಹುಡುಕಿ ಹುಡುಕಿ
ಕಂದ ಕಾಣನೆಂದು ಬರಲು
ಒಂದು ಕ್ಷಣದಲಿ ಕೃಷ್ಣ ಬಂದು ಎದುರಾಗಿ ನಿಂದ ||

ಕಂದಯ್ಯನ ಕರ ಪಿಡಿದು ಯಶೋದೆ ಕರೆ-
ತಂದಳರಮನೆಗೆ, ಕಂದ ಬಹಳ ಹಸಿದನೆಂದು
ತುತ್ತು ಮಾಡಿ ಉಣಿಸಿದಳು
ಮುತ್ತು ಏನು ಮಾಡಿದೆಯೆಂದು ಸಿಟ್ಟಿನಿಂದ ಕೇಳಿದಳು ||

ಹೆತ್ತ ತಾಯ ಕರೆದುಕೊಂಡು ಹಿತ್ತಲೊಳಗೆ
ಮುತ್ತಿನ ಗಿಡ ತೋರಿಸಿದ , ಪಂಟೆ ಪಂಟೆಗೆ ಎಂಟು ಎಂಟು
ಗೊಂಚು ಗೊಂಚು ಜೋಲುತಿರಲು
ಕಡಿದು ಕಡಿದು ರಾಶಿ ಹಾಕಿದ, ಪರಮ ಪುರಂದರವಿಠಲರಾಯ ||
*********

No comments:

Post a Comment