Saturday, 7 December 2019

ಯಾಕೆ ಗೋಕುಲ ನಮಗ್ಯಾಕೆ ವೃಂದಾವನ purandara vittala

ರಾಗ ಕಲ್ಯಾಣಿ ಛಾಪುತಾಳ

ಯಾಕೇ ಗೋಕುಲ ನಮಗ್ಯಾಕೆ ವೃಂದಾವನ
ಯಾಕೆ ಸಂತತ ಸುಖವು || ಪ||
ಶ್ರೀಕಾಂತ ಅನೇಕ ಬಗೆಗಳಿಂದ
ರಾಕೇಂದುಮುಖವ ನಿರಾಕರಿಸಿದ ಮೇಲೆ ||ಅ||

ಹೆತ್ತ ತಾಯಿ ತಂದೆ ಅತ್ತೆ ಮಾವಂದಿರ ಮತ್ತೆ ಗಂಡರ ಬಿಟ್ಟು
ಹತ್ತು ದಿಕ್ಕಿಲಿ ಇವನ ನಾವೆಲ್ಲರು ಪೊತ್ತೇವೆ ದೂರಿಷ್ಟು
ಉತ್ತಮ ರತಿ ನಮಗಿತ್ತು ಮೆರೆವ ಪುರುಷೋತ್ತಮನಿಗಿಷ್ಟು
ಚಿತ್ತವಿಲ್ಲದ ಮೇಲೆ ||

ಓ ಸಖಿ ಮುರಲಿಗಾನವಿಲಾಸದಿ ವಸ್ತ್ರಭೂಷಣಂಗಳ ಮರೆತು
ಶ್ರೀಶನು ಕುಂಜನಿವಾಸದಿ ರತಿಗಳ ಲೇಸದಿಂದಲಿ ಬೆರೆತು
ಶಶಿಮುಖಿ ಬಲು ಘಾಸಿಬಡಿಸಿ ಇಷ್ಟು ಆಸೆಗೊಳಿಸಿ ಇಂಥ
ಮೋಸ ಮಾಡಿದ ಮೇಲೆ ||

ನಾರಿ ನಮ್ಮಲ್ಲಿಗೆ ಪುರಂದರವಿಠಲ ಬಾರದಿರುವವನೆ
ಮಾರನಟ್ಟುಳಿ ತಾಳಲಾರದ ಬಾಲೇರ ಗಾರು ಮಾಡುವನೇನೆ
ಮಾರನಾಪಿತ ನಮ್ಮ ಮನವ ಸೋಲಿಸುವಂಥ ಶ್ರೀ ರಮಣನಿಂಗಿಷ್ಟು
ಮೇರೆಯಿಲ್ಲದ ಮೇಲೆ ||
***

pallavi

yAkE gOkula namagyAke vrndAvana yAke santata sukhavu

anupallavi

shrIkAnta anEka bagegaLinda rAkEndu mukhava nirAkarisida mEle

caraNam 1

hetta tAyi tande atte mAvandira matte kaNDara biTTu hattu dikkili ivana nAvellaru
pottEva dUriSTu uttama rati namagindu mereva puruSOttamanigiSTu cittavillada mEle

caraNam 2

O sakhi muraLI gAna vilAsadi vastra bhUSaNangaLa maredu shrIshanu kunjanivAsadi
ratigaLa lEsinindali beredu shashimukhi balu gAsi baDisi iSTu Ase koLisi intha mOsa mADida mEle

caraNam 3

nAri nammallige purandara viTTala bAradiruvavane mAranaTTuLI tALalArada bAlEra gAru
mADuvanEne mAraLA pita namma manava sOlisuvanda shrI ramaNaningiSTu mEreyillada mEle
***

No comments:

Post a Comment