Saturday, 7 December 2019

ಸುಮ್ಮನೆ ಕಾಲವ ಕಳೆವರೆ ಯಮ purandara vittala

ಪುರಂದರದಾಸರು
ರಾಗ ಕಾಮವರ್ಧನಿ/ಪಂತುವರಾಳಿ ಅಟ ತಾಳ

ಸುಮ್ಮನೆ ಕಾಲವ ಕಳೆವರೆ, ಯಮ-
ಧರ್ಮರಾಯನ ದೂತರೆಳೆಯರೆ ||ಪ||

ನರಿನಾಯಿ ಜನ್ಮದಿ ಬಾರದೆ, ಈ
ನರಜನ್ಮದಲಿ ಬಂದು ಸೇರಿದೆ
ಹರಿಯ ಸ್ಮರಣೆಯನು ಮಾಡದೆ, ಸುಮ್ಮ-
ನಿರಲು ಪಾಪದ ವಿಷವೇರದೆ ||

ಬಾಲಕನಾಗಿದ್ದಾಗ ಬಹು ಲೀಲೆ, ಸ್ತ್ರೀ-
ಲೋಲನಾಗಿ ಬಾಳಿದ ಮೇಲೆ
ಮೂಳ ವೃದ್ಧಾಪ್ಯ ಬಂತಾಗಲೆ , ಮುಂದೆ
ಬಾಳುವುದೆಲ್ಲ ನೂಲ ಮಾಲೆ ||

ಮಡದಿ ಮಕ್ಕಳ ಕೂಡಣ ಬಾಳು, ಬರಿದೆ
ಒಡಲಿಗಾಗಿ ಚಿಂತನೆ ಕೇಳು
ಬಿಡದೆ ಸಂಕೀರ್ತನೆ ಮಾಡೇಳು, ನೀ
ನುಡಿವ ನುಡಿಗಳೆಲ್ಲವು ಬೀಳು ||

ಮನೆ ವಾರ್ತೆಯು ತರವಲ್ಲ, ಈ
ಮನುಜರ ಪಾಡೇನು ಘನವಲ್ಲ
ವನಜಸಂಭವಗೇ ನಿಶ್ಚಯವಿಲ್ಲ, ಮುಂದೆ
ಹನುಮಂತ ಪಟ್ಟಕ್ಕೆ ಬಹನಲ್ಲ ||

ಇಂದಿನ ಹಮ್ಮು ನಾಳೆಗೆ ಇಲ್ಲ, ಭವ-
ಬಂಧನದೊಳು ನೀನಿರೆ ಸಲ್ಲ
ಮುಂದಿನ ಪರಿಯರಿತವನಲ್ಲ, ಮೃತ್ಯು
ಬಂದಾಗ ಬಿಡಿಸಿಕೊಂಬುವರಿಲ್ಲ ||

ಕರಣಂಗಳಾವಾಗ ಜರಿವುದೊ, ತನ್ನ
ಗರುವ ತನಗಾವಾಗ ಮುರಿವುದೊ
ಹರಣ ತನ್ನಾವಾಗ ಮರೆವುದೊ, ಇನ್ನು
ಮರಣ ಕೊನೆಗಾವಾಗ ಬರುವುದೊ ||

ಮರಣಕಾಲದಲಿ ಅಜಾಮಿಳನಾಗ, ತನ್ನ
ತರಳ ನಾರಗನೆಂದು ಕರೆದಾಗ
ಕರುಣದಿ ವೈಕುಂಠ ಪದವಾಗ, ಇತ್ತ
ಪುರಂದರವಿಠಲನ ನೆನೆ ಬೇಗ ||
***

pallavi

summane kAlava kalevare yama dharma rAyana dUtareLeyare

caraNam 1

nari nAyi janmadi bArade I narajanmadali bandu sEride
hariya smaraNeyanu mADade summaniralu pApada viSavErade

caraNam 2

bAlakanAgiddAga bahu lIlestrI lOlanAgi bALidamEle
mULa vrddhApya bandAgale munde bALuvudella nUla mAle

caraNam 3

maDadi makkaLa kUDaNa bALu baride oDaligAgi cintane kELu
biDade sankIrtane mADELu nI nuDiva nuDigaLellavu bILu

caraNam 4

mane vrteyu taravalla I manujara pADEnu ghanavalla
vanaja sambhavage niscayavilla munde hanumanta paTTakke bahanalla

caraNam 5

indina hammu nALege illa bhava bandhanadoLu nInire salla
mundina pariyaritavanalla mrtyu bandAga biDisi kombuvarilla

caraNam 6

karaNangaLAvAga jarivudo tanna garuva tanagAvAga murivudo
haraNa tannAvAga marevudo innu maraNa konegAvAga baruvudo

caraNam 7

maraNa kAladali ajAmiLanAga tanna taraLa nAraganendu karedAga
karuNadi vaikuNTha padavAga itta purandara viTTalana nene bEga
***

ಸುಮ್ಮನೆ ಕಾಲವ ಕಳೆವರೆ ಯಮ  |
ಧರ್ಮರಾಯನ ದೂತರೆಳೆಯರೆ ಪ.

ನರಿ - ನಾಯಿ ಜನುಮವು ಬಾರದೆ - ಹಾಗೆ - |ನರಜನ್ಮದಲಿ ಬಂದು ಸೇರದೆ ||ಹರಿಯ ಸ್ಮರಣೆ ಮಾಡಲಾರದೆ - ಸುಮ್ಮ |ನಿರಲು ಪಾಪದ ವಿಷವೇರದೆ 1

ಬಾಲನಾಗಿದ್ದಾಗ ಬಹುಲೀಲೆ - ಮುಂದೆ |ಲೋಲನಾಗಿ ಬಾಳಿದ ಮೇಲೆ ||ಮೂಳ ವೃದ್ಧಾಪ್ಯ ಬಂತಾಮೇಲೆ - ಇನ್ನು - |ಬಾಳುವುದೆಲ್ಲ ನೂಲಮಾಲೆ 2

ಮಡದಿ - ಮಕ್ಕಳ ಕೂಡಣ ಬಾಳು - ತನ್ನ |ಒಡಲಿಗಾಗೆ ತಾನು ಕರವಾಳು ||ಬಿಡದೆ ಸಂಕೀರ್ತನೆ ಮಾಡೇಳು - ಮಿಕ್ಕ - |ನುಡಿದ ನುಡಿಗಳೆಲ್ಲವು ಬೀಳು 3

ಮನೆಮನೆ ವಾರ್ತೆಯು ಸ್ಥಿರವಲ್ಲ - ಈ |ಮನುಜರ ಮಾತೇನು ಘನವಲ್ಲ ||ವನಜಸಂಭವಗೂ ನಿಶ್ಚಯವಿಲ್ಲ - ಮುಂದೆ |ಹನುಮಂತ ಪಟ್ಟಕೆ ಬಹನಲ್ಲ 4

ಇಂದಿನಹಮ್ಮು ನಾಳೆಗೆ ಇಲ್ಲ -ಭವ |ಬಂಧನದೊಳು ಸಿಕ್ಕಿ ನರಳಿದೆನಲ್ಲ ||ಮುಂದನರಿತು ನಡೆದುದಿಲ್ಲ - ಮೃತ್ಯು |ಬಂದಾಗ ಬಿಡಿಸಿಕೊಳ್ಳುವರಿಲ್ಲ 5

ಮರಣವುಆವಾಗ ಬರುವುದೋ - ತನ್ನ |ಶರೀರವುಆವಾಗ ಮುರಿವುದೊ ||ಕರಣಂಗಳೆಲ್ಲವು ಜರಿವುದೊ - ತನ್ನ |ಗರುವದುಬ್ಬಸವೆಲ್ಲ ಮುರಿವುದೊ 6

ಮರಣಕಾಲಕೆ ಅಜಮಿಳನಾಗ - ತನ್ನ |ತರಳನನಾರಗನೆಂದು ಕರೆದಾಗ ||ಕರುಣದಿ ವೈಕುಂಠ ಪದವೀಗ -ನಿತ್ಯ - |ಪುರಂದರವಿಠಲನ ನೆನೆ ಬೇಗ 7
******

No comments:

Post a Comment