ಪುರಂದರದಾಸರು
ರಾಗ ಪಂತುವರಾಳಿ/ಕಾಮವರ್ಧಿನಿ. ಆದಿ ತಾಳ
ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ
ಪೆರ್ಮೆಯಿಂ ದೇಹವ ನಂಬಬೇಡಿ ಕಾಣಿರೊ ||ಪ||
ಅಟ್ಟ ಅಡುಗೆ ಉಣಲುಬಿಡನು
ಕೊಟ್ಟ ಸಾಲ ಕೇಳಬಿಡನು
ಪೆಟ್ಟಿಗೆಯೊಳಗಿದ್ದ ಚಿನ್ನವ
ತೊಟ್ಟೇನೆಂದರೆ ಯಮನು ಬಿಡನು ||
ಅಕ್ಕನಿಲ್ಲಿ ಕರೆಯಲಿಲ್ಲ
ಮಕ್ಕಳನ್ನು ಪಡೆಯಲಿಲ್ಲ
ದುಃಖಗೊಂಡು ಕಣ್ಣೀರನು
ಉಕ್ಕಿಸಿದರೆ ಬಿಡನು ಯಮನು ||
ಪೇಳ್ವ ನೆಂಟರಿಂಗೆ ಕರೆದು
ಬೇಳೆ ಬೆಲ್ಲವನ್ನು ತಂದು
ನಾಳೆ ಮಗನ ಮದುವೆ ಎಂದು
ತಾಳು ಎಂದರೆ ಯಮನು ಬಿಡನು ||
ಮಾಳಿಗೆ ಮನೆಯಿರಲಿ
ಜಾಳಿಗೆ ತುಂಬ ಹೊನ್ನಿರಲಿ
ಆಳು ಮಂದಿ ಶಾನೆಯಿರಲಿ
ಕಾಲನು ತಾ ಬೆನ್ನ ಬಿಡನು ||
ಅರ್ತಿಯಿಂದ ಸಂಸಾರವ
ವ್ಯರ್ಥವಾಗಿ ನೆಚ್ಚಬೇಡಿ
ಕರ್ತು ಪುರಂದರ ವಿಠಲನ್ನ
ಭಕ್ತಿಯಿಂದಲೆ ಭಜಿಸಿರೊ ||
***
ರಾಗ ಪಂತುವರಾಳಿ/ಕಾಮವರ್ಧಿನಿ. ಆದಿ ತಾಳ
ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ
ಪೆರ್ಮೆಯಿಂ ದೇಹವ ನಂಬಬೇಡಿ ಕಾಣಿರೊ ||ಪ||
ಅಟ್ಟ ಅಡುಗೆ ಉಣಲುಬಿಡನು
ಕೊಟ್ಟ ಸಾಲ ಕೇಳಬಿಡನು
ಪೆಟ್ಟಿಗೆಯೊಳಗಿದ್ದ ಚಿನ್ನವ
ತೊಟ್ಟೇನೆಂದರೆ ಯಮನು ಬಿಡನು ||
ಅಕ್ಕನಿಲ್ಲಿ ಕರೆಯಲಿಲ್ಲ
ಮಕ್ಕಳನ್ನು ಪಡೆಯಲಿಲ್ಲ
ದುಃಖಗೊಂಡು ಕಣ್ಣೀರನು
ಉಕ್ಕಿಸಿದರೆ ಬಿಡನು ಯಮನು ||
ಪೇಳ್ವ ನೆಂಟರಿಂಗೆ ಕರೆದು
ಬೇಳೆ ಬೆಲ್ಲವನ್ನು ತಂದು
ನಾಳೆ ಮಗನ ಮದುವೆ ಎಂದು
ತಾಳು ಎಂದರೆ ಯಮನು ಬಿಡನು ||
ಮಾಳಿಗೆ ಮನೆಯಿರಲಿ
ಜಾಳಿಗೆ ತುಂಬ ಹೊನ್ನಿರಲಿ
ಆಳು ಮಂದಿ ಶಾನೆಯಿರಲಿ
ಕಾಲನು ತಾ ಬೆನ್ನ ಬಿಡನು ||
ಅರ್ತಿಯಿಂದ ಸಂಸಾರವ
ವ್ಯರ್ಥವಾಗಿ ನೆಚ್ಚಬೇಡಿ
ಕರ್ತು ಪುರಂದರ ವಿಠಲನ್ನ
ಭಕ್ತಿಯಿಂದಲೆ ಭಜಿಸಿರೊ ||
***
pallavi
dharmavemba sambaLava gaLisi koLliro permeyim dEhava namba bEDi kAniro
caraNam 1
aTTa aDuge uNalubiDanu koTTa sAla kELa biDanu peTTigeyoLagidda cinnava toTTEnendare yamanu biDanu
caraNam 2
akkanilli kareyalilla makkaLannu paDeyalilla dukkha goNDu kaNNIranu ukkisidare biDanu yamanu
caraNam 3
pELve neNDaringe karedu pELe bellavannu tandu nALe magana maduve endu tALu endare yamanu biDanu
caraNam 4
mALige maneyirali jALige tumba honnirali Alu mandi shAneyirali kAlanu tA benna biDanu
caraNam 5
artiyinda samsArava vyarttavAgi necca bEDi kartu purandara viTTalanna bhaktiyindale bhajisiro
***
ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ |
ಹೆಮ್ಮೆಯಿಂದ ಈ ಶರೀರ ನಂಬಬೇಡಿ ಕಾಣಿರೊ ಪ.
ಅಟ್ಟ ಅಡಿಗೆ ಉಣಲು ಕೊಡನು ಕೊಟ್ಟಸಾಲ ಕೇಳಗೊಡನು |ಪೆಟ್ಟಿಗೆ ತುಂಬ ಹಣವು ಇದ್ದರೆ ಕೊಟ್ಟೆನೆಂದರೆಬಿಡನು ಯಮನು 1
ಮಾಳಿಗೆ ಮನೆಯ ಇರಲು ಜಾಳಿಗೆ ತುಂಬಹೊನ್ನು ಇರಲು |ಆಳುಮಂದಿ ಕುದುರೆ ಇದ್ದರೆ ಬೀಳುಗೊಡದೆಯಮನು ಬಿಡನು 2
ವ್ಯರ್ಥವಾದ ಈ ಶರೀರ ಸತ್ಯವೆಂದು ನಂಬಬೇಡಿ |ಕರ್ತುಪುರಂದರವಿಠಲರಾಯನ ಭಕ್ತಿಯಿಂದ ನೆನೆಯಿರೊ3
********
ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ |
ಹೆಮ್ಮೆಯಿಂದ ಈ ಶರೀರ ನಂಬಬೇಡಿ ಕಾಣಿರೊ ಪ.
ಅಟ್ಟ ಅಡಿಗೆ ಉಣಲು ಕೊಡನು ಕೊಟ್ಟಸಾಲ ಕೇಳಗೊಡನು |ಪೆಟ್ಟಿಗೆ ತುಂಬ ಹಣವು ಇದ್ದರೆ ಕೊಟ್ಟೆನೆಂದರೆಬಿಡನು ಯಮನು 1
ಮಾಳಿಗೆ ಮನೆಯ ಇರಲು ಜಾಳಿಗೆ ತುಂಬಹೊನ್ನು ಇರಲು |ಆಳುಮಂದಿ ಕುದುರೆ ಇದ್ದರೆ ಬೀಳುಗೊಡದೆಯಮನು ಬಿಡನು 2
ವ್ಯರ್ಥವಾದ ಈ ಶರೀರ ಸತ್ಯವೆಂದು ನಂಬಬೇಡಿ |ಕರ್ತುಪುರಂದರವಿಠಲರಾಯನ ಭಕ್ತಿಯಿಂದ ನೆನೆಯಿರೊ3
********
No comments:
Post a Comment