Saturday 14 December 2019

ಶ್ರೀಕೃಷ್ಣವೇಣಿ ಕಲ್ಯಾಣೀ ankita jagannatha vittala

ಜಗನ್ನಾಥದಾಸರು
ಶ್ರೀ ಕೃಷ್ಣವೇಣಿ ಕಲ್ಯಾಣೀ
ಪಂಕಜಾಸನ ಸ್ವೀಕೃತ ಬುಧ ಶ್ರೇಣೀ
ನೀ ಕೃಪೆÉಯಿಂದ ಮಹಾಕೃತು ಹರಿಯ ನಿ
ಜಾಕೃತಿ ತೋರ್ದೂರಿಕೃತ ದುರಿತೇ ಪ

ಸುಜನ ಮಾತೆ
ಶಮಲ ಸಂಕೂಲ ನರ್ಧೂತೆ
ಸುಮನಸ ಜನ ಸನ್ನುತೆ ಸನ್ಮೋದ ದಾತೆ
ವಿಮಲ ಸದ್ಗುಣ ಸಂಭೃತೆ
ನಮಿಸುವೆ ತ್ವತ್ಪದÀ ಕಮಲಯುಗಳಿಗನು
ಪಮ ಸುಂದರೆ ಭ್ರಮೆಗೊಳಿಸುವ ದುರ್ಮಮ ಕಳೆದು |ಸೋ
ತ್ತಮರ ಪದಾಬ್ಜಕೆ ಭ್ರಮರನೆನಿಸಿ
ಮಾರಮಣನ ದುಹಿತ್ರೆ 1

ಮದಗಜಯಾನೆ ಪಿಕಗಾನೆ ಉಭಯಾನೆ
ಮಾನಿನಿ ಮದನಾರಿ ಜಟಜಸೊನೆ ಪಾಪೌಘದಹನೆ
ಮುದವ ಕೊಡು ಎಮಗೆ ನಿ ೀನೆ
ಮದಡನರನು ಒಂದು ದಿನ ಮಜ್ಜನವ ವಿಧಿಸೆ ಶರೀರದಿ
ಹುದುಗಿದ ಪಾಪಗಳುದುರಿಸಿ ಕಾಲನ
ಸದನವ ಹೋಗಗೊಡದುದಧಿ ಮಥನ
ಪದ ಪದುಮವ ತೋರ್ಪೆ 2

ನೀಲ ಪುನತ ಹೃತ್ಕುಮುದಾ ಭೇಶೇ
ಅನುದಿನ ಪೂರೈಸೇ
ಜನನಿಯೆನ್ನ ದುರ್ಗುಣವೆಣಿಸದೆ | ಮಾ
ತನು ಲಾಲಿಸು ಸುಹೃದ್ವನರುಹದಲಿ ಶ್ರೀ
ವನತೆಯರಸ ಜಗನ್ನಾಥ ವಿಠಲನ
ಅನವರತ ನಿಲಿಸು ಘನ ಮಾಂಗಲ್ಯೇ 3
********

No comments:

Post a Comment