Tuesday, 19 November 2019

ಹೊರಿಯೊ ವಿಪಗಮನ ಮಂಗಳಶರಧಿ ankita prasannavenkata

by ಪ್ರಸನ್ನವೆಂಕಟದಾಸರು
ಹೊರಿಯೊ ವಿಪಗಮನ ಮಂಗಳಶರಧಿಜಾರಮಣ ಪ.

ಸುರಕಾರ್ಯಕೆ ಪಕ್ಷ ಶಾರ್ವರಿಚರವರ ಶಿಕ್ಷಧರಣಿಜ ಹರ ಸತ್ರಾಜಿತಜಾವರಶರಣಾಗತಭಟದುರಿತವಿದೂರ1

ಪೌಂಡ್ರಕವೈರಿ ನಿಜ ಕೃಷ್ಣಪಾಂಡವರ ತಾರಿಶುಂಡಾಲಚಾಣೂರ ಸಂಹಾರಿಖಾಂಡವವನ ದಹಕಾರಿ 2

ವಿದುರೋದ್ಧವ ಪೋಷಸುಖತೀರ್ಥಹೃದಮಾನಸ ಹಂಸಪದುಮನಾಭ ಪ್ರಸನ್ವೆಂಕಟೇಶಪಾಹಿಸದಮಲಸದನ ಕ್ಷೀರಾರ್ಣವಶಾಯಿ 3
********

No comments:

Post a Comment