Tuesday, 12 November 2019

ದುರಿತ ಪರಿಹರಿಸು ರಂಗಾಪರಮಪಾತಕರು ankita prasannavenkata

by ಪ್ರಸನ್ನವೆಂಕಟದಾಸರು
ದುರಿತಪರಿಹರಿಸು ರಂಗಾಪರಮಪಾತಕರು ಬಂದರು ನೆರೆದು ರಂಗಾಪ.

ಪ್ರತ್ಯಕ್ಷ ಜೀವನ ಶವಕೆ ಯಮನ ಚಾರಕರುಮುತ್ತಿ ಕೊಲುವಂತೆ ಕಾಣಿಸುತದೆ ದಯಾಳುಕರ್ತನೀನಲ್ಲದಿನ್ನೊಬ್ಬ್ಬೊಡೆಯಕಾಲಮೃತ್ಯು ವಿನಯದೆಶೂಲನರಪಂಚವದನ1

ನೀನರಸನೆನಗಾಗಿ ಇನ್ನೊಬ್ಬ ನೀಚರಿಗೆದೀನನಾಗುವುದುಚಿತೆ ಕರುಣಗುಣ ಖಣಿಯೆಮಾನನಿನ್ನದು ಅವಮಾನ ನಿನ್ನದು ಪಾಂಡವಮಾನಿನಿಯ ಸಮಯಕೊದಗಿದ ಭಕ್ತ ಬಂಧು 2

ಮರೆಹೊಕ್ಕೆ ದಾಸವತ್ಸಲನೆಂಬ ಬಿರುದು ಕೇಳಿರುವೆ ತಪ್ಪಿಸಿಕೊಳಲುಬೇಡ ಭುವನೇಶಉರಗಗಿರಿವಾಸ ಪ್ರಸನ್ವೆಂಕಟೇಶ ಸಂಹರಿಸು ಅಪಕಾರಿಗಳ ಸಲಹು ಸಜ್ಜನರ 3
*******

No comments:

Post a Comment